ಬಳ್ಳಾರಿ ಜಿಲ್ಲೆ ಗ್ರಾಮೀಣ ಭಾಗಗಳಲ್ಲಿ ಗರ್ಭಿಣಿಯರ ಸಾವಿಗೆ ಇದೇ ಕಾರಣವಂತೆ! ಏನ್ರಿ ಇದು ಪದ್ಧತಿ?

Dec 25, 2020, 7:19 PM IST

ಬೆಂಗಳೂರು (ಡಿ. 25): ಜನರ ಮೂಢನಂಬಿಕೆ, ಅನಿಷ್ಠ ಪದ್ಧತಿಯಿಂದ ಗರ್ಭಿಣಿಯರು ಸಾವನ್ನಪ್ಪುತ್ತಿದ್ದಾರೆ. ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಬಳ್ಳಾರಿ ತಾಲೂಕಿನ ಸಂಗನಕಲ್ಲು ಮತ್ತು ಹಡಗಲಿ ತಾಲೂಕಿನಲ್ಲಿ ಹಾಗನೂರು ಗ್ರಾಮದಲ್ಲಿ ಕೆಟ್ಟ ಪದ್ಧತಿಯೊಂದು ಆಚರಣೆಯಲ್ಲಿದೆ. ಗರ್ಭಿಣಿಯರಿದ್ದ ಮನೆಯಲ್ಲಿ ಹೊಸದಾಗಿ  ಶೌಚಾಲಯವೇ ಕಟ್ಟಿಸೋದಿಲ್ಲವಂತೆ! ಶೌಚಗೃಹಕ್ಕೆ ಗುಂಡಿ ಅಗೆದು ಅದನ್ನು ಮುಚ್ಚಿ ಪೂರ್ಣಗೊಂಡರೇ ಗರ್ಭೀಣಿ ಸಾವು ಖಚಿತವಂತೆ!

ಚಿಕಿತ್ಸೆ ನೀಡಲು ನಿರಾಕರಿಸಿದ್ದಕ್ಕೆ ಇಲ್ಲೊಬ್ಬ ಮಾಡಿದ್ದೇನು ನೋಡಿ.!

ಮನೆಯಲ್ಲಿ ಶೌಚಾಲಯವಿಲ್ಲದೆ ಗರ್ಭಿಣಿಯರು  ಬಹಿರ್ದೆಸೆಗೆ ಹೊರಗೆಲ್ಲೋ  ತೆರಳಬೇಕಾಗಿದೆ. ವಿಶಿಷ್ಟ ಅಲಿಖಿತ ನಿಯಮಕ್ಕೆ ಬಳ್ಳಾರಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಸುಸ್ತೊ ಸುಸ್ತಾಗಿದ್ದಾರೆ. ಇಂತಹ ಅಸಂಬದ್ಧ ನಂಬಿಕೆಗಳಿಗೆ ಪೂರ್ಣ ವಿರಾಮ ಇಡಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮುಂದೆ ನಿಂತು ಕಾಮಗಾರಿ ಮಾಡಿಸಬೇಕಾಗಿದೆ.