May 19, 2020, 12:01 PM IST
ಬಾಗಲಕೋಟೆ(ಮೇ19): ಕಳೆದ ಎರಡು-ಮೂರು ವರ್ಷಗಳಿಂದ ಕೆರೆ ಅನುದಾನ ಬಳಕೆಯಲ್ಲಿ ಗೋಲ್‌ಮಾಲ್ ನಡೆದಿದ್ದನ್ನು ಕಂಡು ಬೇಸತ್ತು ಹೋಗಿದ್ದ ಗ್ರಾಮಸ್ಥರು, ಈ ದುರ್ಬಳಕೆ ತಡೆಯಲು ಮಾಸ್ಟರ್ ಪ್ಲಾನ್‌ವೊಂದನ್ನು ರೂಪಿಸಿದ್ದಾರೆ.
ಹೌದು, ಕೆರೆ ಹೂಳೆತ್ತುವುದಕ್ಕೆ ಜೆಸಿಬಿ ಬಳಸುವ ಬದಲು, ಗ್ರಾಮಸ್ಥರೇ ದಿನನಿತ್ಯ ಕೆಲಸಕ್ಕೆ ಬಂದು, ಕೆಲಸ ಮಾಡಿ ಕೂಲಿ ಪಡೆಯುತ್ತಿದ್ದಾರೆ. ಗ್ರಾಮ ಸುಧಾರಣಾ ಸಮಿತಿಯಿಂದ ಜವಾಬ್ದಾರಿ ಕಾರ್ಯ ವಹಿಸಿಕೊಂಡು ಸುಸೂತ್ರವಾಗಿ ಕೆಲಸ ನಡೆಯಲಾರಂಭಿಸಿದೆ. ಇದೆಲ್ಲ ನಡೆಯುತ್ತಿರುವುದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕೊಣ್ಣೂರ ಗ್ರಾಮ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಿರಗುಪ್ಪದಲ್ಲಿ ತಂದೆ ಸಾವು; ಬಸ್ಗಾಗಿ ಮೆಜೆಸ್ಟಿಕ್ನಲ್ಲಿ ಮಗಳ ಕಣ್ಣೀರು..!
4 ಎಕರೆ ಪ್ರದೇಶದ ಕೆರೆ ಹೂಳೆತ್ತುವ ಕೆಲಸಕ್ಕೆ ನಿತ್ಯ 100ಕ್ಕೂ ಅಧಿಕ ಗ್ರಾಮಸ್ಥರು ಪಾಲ್ಗೊಳ್ಳುತ್ತಿದ್ದಾರೆ. ಹೂಳೆತ್ತುವ ಕೆಲಸಕ್ಕೆ ಗ್ರಾಮಪಂಚಾಯಿತಿಯಿಂದ ಕೂಲಿ ನೀಡಲಾಗುತ್ತಿದೆ. ಇನ್ನು ಪ್ರಗತಿಪರ ರೈತರು ಕಾರ್ಮಿಕರ ಮಧ್ಯಾಹ್ನದ ಊಟೋಪಚಾರ ನೋಡಿಕೊಳ್ಳುತ್ತಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.