ನಾಗರಿಕ ವಿಮಾನ ನಿಲ್ದಾಣಕ್ಕೆ ಸಿದ್ದತೆ: ಗೋಮಾಳ ಜಾಗದಲ್ಲಿ ಪುನರ್ವಸತಿಗೆ ವಿರೋಧ

Oct 12, 2021, 1:21 PM IST

ಕಾರವಾರ (ಅ. 12): ಸೀಬರ್ಡ್ ಎರಡನೇ ಹಂತದ ಕಾಮಗಾರಿ ವೇಳೆ ಅಂಕೋಲಾದ ತಾಲ್ಲೂಕಿನ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣಕ್ಕೆ ಈಗಾಗಲೇ ಸಿದ್ದತೆ ನಡೆಸಲಾಗಿದೆ. ಈ ಸಂಬಂಧ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಯೂ ಪ್ರಾರಂಭವಾಗಿದ್ದು, ಸ್ಥಳೀಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ತಾಲ್ಲೂಕಿನ ಬಾಸ್ಗೋಡು ಗ್ರಾಮದ ನಡುಬೇಣದಲ್ಲಿ ಜಾಗ ಗುರುತಿಸಲಾಗಿದೆ. 

ಶಿವಮೊಗ್ಗ: 50 ವರ್ಷದ ಹಿಂದೆ ಗಂಡ ಕಟ್ಟಿಸಿದ್ದ ದೇವಾಲಯದ ಪೂಜೆಗೆ ಬಂದ ಮುಸ್ಲಿಂ ಮಹಿಳೆ

ಆದರೆ, ಇದು ಸ್ಥಳೀಯರ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಪ್ರಸ್ತುತ, ಗುರುತಿಸಿರುವ ಜಾಗವು ಗೋಮಾಳವಾಗಿದ್ದು, ನಿತ್ಯ ಸಾವಿರಾರು ಗೋವುಗಳು ಮೇಯುವ ಸ್ಥಳವಾಗಿದೆ. ಅಲ್ಲದೇ, ಸ್ವಾತಂತ್ರ್ಯ ಚಳುವಳಿ ವೇಳೆ ಕ್ವಿಟ್ ಇಂಡಿಯಾ ಮತ್ತು ಉಪ್ಪಿನ ಸತ್ಯಾಗ್ರಹ ಚಳುವಳಿಯ ಬಗ್ಗೆ ಸಭೆಗಳು ನಡೆದು ಸ್ಥಳೀಯರಿಗೆ ಸಂಗ್ರಾಮದ ಕಿಚ್ಚು ಹೊತ್ತಿಸಿದ ಪ್ರದೇಶವಾಗಿದೆ. ಇಂತಹ ಪ್ರದೇಶವನ್ನು ವಿಮಾನ ನಿಲ್ದಾಣದ ನಿರಾಶ್ರಿತರಿಗೆ ವಸತಿ ಕಲ್ಪಿಸಲು ಮುಂದಾಗಿರುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ತಮಟೆ ವಾದ್ಯದ ಮೂಲಕ ಮೈದಾನದ ಸುತ್ತ ಮೆರವಣಿಗೆ ನಡೆಸಿ ಯಾವುದೇ ಕಾರಣಕ್ಕೂ ಈ ಪ್ರದೇಶವನ್ನು ನೀಡುವುದಿಲ್ಲ ಎಚ್ಚರಿಕೆ ರವಾನಿಸಿದ್ದಾರೆ.