Chitradurga: ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ, ನೀರು ಹಂಚಿಕೆ  ವಿಚಾರದಲ್ಲಿ ಆಂಧ್ರ ಕ್ಯಾತೆ

Chitradurga: ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ, ನೀರು ಹಂಚಿಕೆ ವಿಚಾರದಲ್ಲಿ ಆಂಧ್ರ ಕ್ಯಾತೆ

Published : Jan 05, 2022, 01:19 PM ISTUpdated : Jan 05, 2022, 01:47 PM IST

- ಭದ್ರಾ ಮೇಲ್ದಂಡೆ ಯೋಜನೆ ಮಧ್ಯಕರ್ನಾಟಕದ ಕನಸಿನ ಯೋಜನೆ 

- ರಾಷ್ಟ್ರೀಯ ಯೋಜನೆ ಘೋಷಣೆಯಾದ್ರೂ ಇನ್ನೂ ಬಾರದ ಅನುದಾನ

- ನೀರಿನ ಹಂಚಿಕೆ  ವಿಚಾರದಲ್ಲಿ ನೆರೆಯ ಆಂಧ್ರ ಪ್ರದೇಶದಿಂದ ಕ್ಯಾತೆ 
 

ಚಿತ್ರದುರ್ಗ (ಜ. 05): ಮಧ್ಯಕರ್ನಾಟಕದ ಕನಸಿನ ಯೋಜನೆ ಅಂದ್ರೆ ಅದು ಭದ್ರಾ ಮೇಲ್ದಂಡೆ ಯೋಜನೆ (Upper Bhadra Project) ಈ ಯೋಜನೆ ಜಾರಿಯಾದ್ರೆ ಬರದನಾಡು ಚಿತ್ರದುರ್ಗ, ದಾವಣಗೆರೆ, ತುಮಕೂರು ಹಾಗೂ ಚಿಕ್ಕಮಗಳೂರು  ಜಿಲ್ಲೆಗಳ ಜನರ ಬವಣೆ ನೀಗಲಿದೆ. ಹೀಗಾಗಿ ರಾಷ್ಟ್ರೀಯ ಯೋಜನೆ ಅಂತ ಘೋಷಣೆಯಾಗಿ ಒಂದು ತಿಂಗಳೇ ಕಳೆದು ಹೋಯ್ತು. ಆದರೆ ಕೇಂದ್ರ ಸರ್ಕಾರದಿಂದ ಈವರೆಗೆ ನಯಾಪೈಸಾ ಅನುದಾನ ಮಾತ್ರ ಬಿಡುಗಡೆ ಆಗಿಲ್ಲ. ಈ ನಡುವೆ ನೆರೆಯ ಆಂಧ್ರ ಪ್ರದೇಶ ಹೊಸ ಕ್ಯಾತೆಯೊಂದನ್ನು ಶುರುಮಾಡಿದೆ. 

ತುಂಗಾಭದ್ರಾ ನೀರಿನ ಹಂಚಿಕೆ ಹಾಗೂ ಹರಿಸುವಿಕೆ ವಿಚಾರದಲ್ಲಿ ಶಂಕೆ ವ್ಯಕ್ತಪಡಿಸಿದೆ. ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸುವ ಮುನ್ನ ಆಂಧ್ರಕ್ಕೆ ಆಗುವ ಅನ್ಯಾಯದ ಬಗ್ಗೆ ಸ್ಪಷ್ಟನೆ ನೀಡಿದ ಬಳಿಕ ಯೋಜನೆ ಮುಂದುವರೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಇದು  ಎರಡು ರಾಜ್ಯಗಳ ನಡುವೆ ಬಾರಿ ದ್ವೇಷಕ್ಕೆ ದಾರಿಯಾಗಿದ್ದೂ, ಕೋಟೆನಾಡಿನ ರೈತರು ಆಂಧ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

 ಇನ್ನು 2008ರಲ್ಲಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆಯಾದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆ ಆರಂಭದಲ್ಲಿ ಕೇವಲ ಮೂರರಿಂದ ಐದು ಸಾವಿರ ಕೋಟಿ ವೆಚ್ಚದಲ್ಲಿ ಆರಂಭವಾಗಿತ್ತು. ಆದ್ರೆ ಇದೀಗ   ಹತ್ತು ಸಾವಿರ ಕೋಟಿಗೂ ಮಿಗಿಲಾಗಿ ವೆಚ್ಚ ಮೀರಿದ ಬೆನ್ನಲ್ಲೇ, ಕೇಂದ್ರ ಸರ್ಕಾರ ಇದನ್ನು ರಾಜ್ಯದ ಮೊಟ್ಟ ಮೊದಲ ರಾಷ್ಟ್ರೀಯ ಯೋಜನೆಯೆಂದು ಘೋಷಣೆ ಮಾಡಿದೆ. ಆದರೆ ನೆರೆಯ ಆಂಧ್ರಪ್ರದೇಶದ ಖ್ಯಾತೆಯಿಂದಾಗಿ, ಅವರ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಗೆಜೆಟೆಡ್ ನೋಟಿಫಿಕೇಶನ್ ಪಾಸ್ ಮಾಡಲು ಹಿಂದೇಟು ಹಾಕುತ್ತಿರೋದು ವಿಪರ್ಯಾಸ ಎನಿಸಿದೆ. ಹೀಗಾಗಿ ಎಚ್ಚೆತ್ತಿರೋ‌ ಚಿತ್ರದುರ್ಗ ಬಿಜೆಪಿ‌ ಹಿರಿಯ ಶಾಸಕ ತಿಪ್ಪಾರೆಡ್ಡಿ, ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಿಎಂ ಬೊಮ್ಮಾಯಿ ಬಳಿ ನಿಯೋಗ ತೆರಳಿ, ಪ್ರದಾನಿ ನರೇಂದ್ರ ಮೋದಿಯವರಿಗೆ  ರಾಷ್ಟ್ರೀಯ ಯೋಜನೆಯನ್ನ ಹಿಂಪಡೆಯದಂತೆ ಮನವೊಲಿಸುವುದಾಗಿ ತಿಳಿಸಿದ್ದಾರೆ.

ಒಟ್ಟಾರೆ ಒಂದೂವರೆ ದಶಕ ಕಳೆದರೂ ರಾಜ್ಯದ ಮೊಟ್ಟ ಮೊದಲ ರಾಷ್ಟ್ರೀಯ ಯೋಜನೆ ಇನ್ನೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇದರೆ ಬೆನ್ನಲ್ಲೇ ಆಂಧ್ರ ಸರ್ಕಾರದ ಕುತಂತ್ರ ಮಧ್ಯಕರ್ನಾಟಕದ ರೈತರ ನಿದ್ರೆ ಕೆಡಿಸಿದೆ. ಹೀಗಾಗಿ ಎರಡು ರಾಜ್ಯಗಳ ನಡುವೆ ಬಾರಿ ಸಂಘರ್ಷ ಎದುರಾಗುವ ಭೀತಿ ಶುರುವಾಗಿದ್ದೂ, ಇದು ಇನ್ಯಾವ ಹಂತಕ್ಕೆ ತಲುಪುವುದೋ ಕಾದು ನೋಡಬೇಕಿದೆ.

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more