Feb 27, 2022, 5:48 PM IST
ಉತ್ತರ ಕನ್ನಡ (ಫೆ. 27): ಜಾತ್ರೆ, ರಥೋತ್ಸವ ಹಾಗೂ ಇತರ ಹಬ್ಬಗಳ ಆಚರಣೆಯಲ್ಲಿ ಸಾವಿರಾರು ಜನರು ಸೇರುವುದನ್ನು ನಾವು ನೋಡಿದ್ದೇವೆ. ಆದರೆ, ಇಲ್ಲೊಂದು ಹಬ್ಬದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಹಬ್ಬವನ್ನು ಜಾತ್ರೆಯನ್ನಾಗಿ ಮಾಡಿದ್ದಾರೆ.
Ankola: ಉರೂಸ್ನಲ್ಲಿ ಜಾತಿ, ಧರ್ಮ ಭೇದ ಮರೆತು ಸೇರಿದ ಸಾವಿರಾರು ಜನ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಗ್ರಾಮದಲ್ಲಿ ಮಲೆನಾಡು ಭಾಗದಲ್ಲಿ ಈ ಹಿಂದೆ ಕಾಣುತ್ತಿದ್ದ ಗ್ರಾಮೀಣ ಸೊಗಡಿನ ಆಲೆಮನೆ ಮತ್ತೆ ಅನಾವರಣಗೊಂಡಿದೆ. ರಾತ್ರಿಯಿಡಿ ಕಬ್ಬಿನ ಗಾಣದ ಸದ್ದು, ಹಾಲು ಕುಡಿದು ಖುಷಿಪಡುತ್ತಿರುವವರ ಸಂಖ್ಯೆಗೇನು ಕೊರತೆ ಇಲ್ಲ. ಕಳೆದ ಐದು ವರ್ಷಗಳಿಂದ ಮಾಗೋಡು ಗ್ರಾಮದಲ್ಲಿ ಇಂಥ ಅಲೆಮನೆ ಹಬ್ಬವನ್ನು ಸಂಘಟಿಸಲಾಗುತ್ತಿದೆ. ಆಲೆಮನೆಯಲ್ಲಿ ಹಳ್ಳಿಯ ಬಗೆಬಗೆಯ ತಿಂಡಿ ತಿನಿಸುಗಳ ಜತೆಗೆ ಮನಸ್ಸಿಗೆ ಉಲ್ಲಾಸ ನೀಡುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆಲೆಮನೆಯಲ್ಲಿ ಬಂಧು ಬಾಂಧವರು, ಮಿತ್ರರು ಎಲ್ಲರ ಸಮಾಗಮವಾಗಿರುವುದು ಇಲ್ಲಿನ ವಿಶೇಷವಾಗಿದೆ.
ಮಾಗೋಡು ಗ್ರಾಮದಲ್ಲಿ ನಡೆದ ಈ ಉತ್ಸವದಲ್ಲಿ ಪರಿಶುದ್ಧ ಕಬ್ಬಿನ ಹಾಲು, ತೊಡೆದೇವು, ಬೆಲ್ಲ, ಕಾಕಂಬಿ, ಮಾರಾಟವೂ ಕೂಡ ಜೋರಾಗಿತ್ತು. ಆಗಮಿಸಿದ ಪ್ರತಿಯೊಬ್ಬರಿಗೂ ಉಚಿತವಾಗಿ ಹಾಲು, ಬಜೆ, ಪಾಪಡಿಯನ್ನು ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ, ಹಬ್ಬದ ವಿಶೇಷವಾಗಿ ಮಹಾದ್ವಾರದ ವಿವಿಧ ಮಳಿಗೆಗಳಲ್ಲೂ ಪೌರಾಣಿಕ ಕಲ್ಪನೆ ಕೊಡುವ ನಮ್ಮ ಮಹಾಕಾವ್ಯಗಳ ಪರಿಚಯ ಮಾಡಿಸುವ ಪ್ರಯತ್ನ ನಡೆಯಿತು. ಹಳೆಯ ಕಾಲದ ಆಲೆಮನೆಯ ವೈಭವವನ್ನು ನೋಡುವ ಅವಕಾಶ ಮಲೆನಾಡು ಭಾಗದ ನಾಗರಿಕರಿಗೆ ಲಭಿಸಿತು. ಸುಮಾರು 10 ಟನ್ ಗೂ ಹೆಚ್ಚು ಕಬ್ಬುಗಳನ್ನು ತರಿಸಲಾಗಿದ್ದು, 10 ಆರು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡರು. ಕೃಷಿಕರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿರೋದಾಗಿ ಸಂಘಟಕರು ಹೇಳಿದ್ದಾರೆ.