Farmers in Distress: ಹಿಂಗಾರು ಬೆಳೆಗೆ ಕೀಟಗಳ ಕಾಟ , ದಿಕ್ಕು ತೋಚದ ರೈತ, ಸರ್ಕಾರದ ನೆರವಿಗಾಗಿ ಮೊರೆ

Dec 17, 2021, 5:23 PM IST

ಬೀದರ್ (ಡಿ. 17): ಗಡಿ ಜಿಲ್ಲೆ ಬೀದರ್ (Bidar) ಅಂದ್ರೆ ಸಾಕು ಮೊದಲು ಬರ ನೆನಪಾಗುತ್ತೆ. ಸತತ ನಾಲ್ಕು ವರ್ಷಗಳ ಕಾಲ ಮಳೆಯಾಗದೇ ಜಿಲ್ಲೆಯಲ್ಲಿ ಬರಗಾಲ ಪರಸ್ಥಿತಿ (Drought) ಉಂಟಾಗಿ ರೈತರು ಕಂಗಾಲಾಗಿ ಹೋಗಿದ್ರು. ಬಳಿಕ ಅತಿವೃಷ್ಟಿಯಿಂದ ಹೈರಾಣಾದ್ರು. ಈ ವರ್ಷ ಮಳೆಗಾಲ ಪ್ರಾರಂಭದಲ್ಲಿ ಮತ್ತೆ ಅತಿವೃಷ್ಟಿಯಿಂದ ಮುಂಗಾರು-ಹಂಗಾಮಿನ ಹೆಸರು, ಉದ್ದು ಕಳೆದುಕೊಂಡು ರೈತರು ಸಂಕಷ್ಟಕ್ಕೆ ಸಿಲುಕಿದ್ರು. ಇದೀಗ ರೈತರು ಬೆಳೆದ ಬಂಗಾರದಂತೆ ಮೇಲೆ ಕೀಟಗಳ ( Insects) ಹಾವಳಿ ಶುರುವಾಗಿದ್ದು ರೈತರು ಕಣ್ಣಿರಲ್ಲಿ ಕೈ ತೋಳೆಯುವಂತ ಪರಸ್ಥಿತಿ ನಿರ್ಮಾಣವಾಗಿದೆ. 

Crop Insurance Golmaal: ಬೆಳೆ ವಿಮೆ ಕಂತು ಕಟ್ಟಿದ ರೈತರಿಗಿಲ್ಲ ಪರಿಹಾರ..!

ಇನ್ನೂ ಮುಂಗಾರು ಹಂಗಾಮಿನ ಪ್ರಾರಂಭದಲ್ಲಿ ಅತಿವೃಷ್ಟಿಯಿಂದ ಲಕ್ಷಾಂತರ ಹೇಕ್ಟರ್ ಭೂಮಿಯಲ್ಲಿ ಬೆಳೆದಂತ ಬೆಳೆ ನೀರುಪಾಲಾಗಿತ್ತು. ಈಗ ಮತ್ತೆ ಹಿಂಗಾರು ಬೆಳೆ ಕೂಡ ವಾತಾವರಣದಲ್ಲಿ ಆದ ಏರುಪೇರಿನಿಂದ ವಿವಿಧ ಬಗೆಯ ಫಂಗಸ್ ಹಾಗೂ ಕೀಟಗಳ ಬಾಧೆಯಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇನ್ನೂ ಸಾಲಶೂಲ ಮಾಡಿ ಔಷಧ ಸಿಂಪಡಣೆ ಮಾಡಿದರೂ ಹುಳುಗಳು ಕಂಟ್ರೋಲ್‌ಗೆ ಬರುವಂತೆ ಲಕ್ಷಣ ಕಾಣಿಸುತ್ತಿಲ್ಲ,. ಹೀಗಾಗಿ ರೈತರಿಗೆ ದಿಕ್ಕು ತೋಚದಂತಾಗಿದ್ದು ಸರ್ಕಾರ ರೈತರ ಕೈ ಹಿಡಿಯಬೇಕಾಗಿದೆ ಎಂದು ರೈತರು ಮನವಿ ಮಾಡಿಕೊಳ್ಳುತ್ತಿದ್ದಾರೆ.