ಕೊಡಗು ಜಿಲ್ಲೆಯ ಗಡಿ ಗ್ರಾಮಗಳಾದ ಕರಿಕೆ ಮತ್ತು ಚೆಂಬು ವ್ಯಾಪ್ತಿಯಲ್ಲಿ ಭೂಕಂಪನವಾಗಿದ್ದು ಜಿಲ್ಲೆಯ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಕಂಪನದ ಅನುಭವಾಗುತ್ತಿದ್ದಂತೆ ಕೆಲವರು ಮನೆಯಿಂದ ಹೊರಗೆ ಬಂದಿದ್ದಾರೆ.
ಕೊಡಗು (ಜು. 02): ಜಿಲ್ಲೆಯ ಗಡಿ ಗ್ರಾಮಗಳಾದ ಕರಿಕೆ ಮತ್ತು ಚೆಂಬು ವ್ಯಾಪ್ತಿಯಲ್ಲಿ ಭೂಕಂಪನವಾಗಿದ್ದು ಜಿಲ್ಲೆಯ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಕಂಪನದ ಅನುಭವಾಗುತ್ತಿದ್ದಂತೆ ಕೆಲವರು ಮನೆಯಿಂದ ಹೊರಗೆ ಬಂದಿದ್ದಾರೆ. ನಿದ್ದೆಗೆ ಜಾರಿದ್ದರಿಂದ ಹಲವರಿಗೆ ಇದರ ಅನುಭವ ಆಗಲಿಲ್ಲ.
ಪದೇ ಪದೇ ಭೂಕಂಪನವಾಗುತ್ತಿರುವುದರಿಂದ ಆ ಭಾಗದ ಜನರ ಭಯಭೀತರಾಗಿದ್ದಾರೆ. ಜೂ.23 ರಂದು ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿನ ವ್ಯಾಪ್ತಿಗಳಲ್ಲಿ ಲಘು ಭೂಕಂಪನವಾಗಿತ್ತು, ಇದಾದ ನಂತರ ಮತ್ತೆ 25 ರಂದು ಮಡಿಕೇರಿ ತಾಲೂಕಿನ ಕರಿಕೆ, ಸಂಪಾಜೆ, ಭಾಗಮಂಡಲ ಮತ್ತು ದಕ್ಷಿಣ ಕನ್ನಡದ ಸುಳ್ಯಗಡಿಯಲ್ಲಿ ಭೂಕಂಪನವಾಗಿತ್ತು. 28ರಂದು ಮತ್ತೆ ಮೂರನೇ ಬಾರಿ ಮಡಿಕೇರಿ ಸೇರಿ ವಿವಿಧೆಡೆ ಭೂಕಂಪನ ಆಗಿತ್ತು.ಧಾರಾಕಾರ ಮಳೆ ಸುರಿಯುತ್ತಿದ್ದ, ಭೂ ಕುಸಿತ ಕೂಡಾ ಸಂಭವಿಸಿದೆ. ಒಂದು ಕಡೆ ಭೂಕಂಪ, ಇನ್ನೊಂದೆಡೆ ಭೂಕುಸಿತದಿಂದ ಜನ ಭಯಭೀತಗೊಂಡಿದ್ದಾರೆ.