Dec 28, 2022, 11:47 AM IST
ಧಾರವಾಡ: ಟಿಪ್ಪು ಸುಲ್ತಾನ್ ನೂರಾರು ಜನರನ್ನು ಮತಾಂತರ ಮಾಡಿದ್ದಾನೆ. ಟಿಪ್ಪು ಸುಲ್ತಾನ್ ಬಗ್ಗೆ ಸುಳ್ಳು ಹೇಳಿ ಇತಿಹಾಸವನ್ನು ಗಿರೀಶ್ ಕಾರ್ನಾಡ್ ತಿರುಚಿದ್ದಾರೆ. ಅವರು ನಕಲಿ ಸಾಹಿತಿ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ. ಕೃತಿಚೌರ್ಯ ಮಾಡುವುದರಲ್ಲಿ ಕಾರ್ನಾಡ್ ಎತ್ತಿದ ಕೈ ಎಂದು ಧಾರವಾಡದಲ್ಲಿ ಅಡ್ಡಂಡ ಕಾರ್ಯಪ್ಪ ಹೇಳಿದರು. ಟಿಪ್ಪು ಸುಲ್ತಾನ್ ಜನರನ್ನು ಮತಾಂತರ ಮಾಡಿದ್ದಾನೆ. ಟಿಪ್ಪು ಮತಾಂತರಕ್ಕೆ ಹೆದರಿ ಜನರು ಸಾವನ್ನಪ್ಪಿದ್ದಾರೆ ಟಿಪ್ಪು ಯಾವ ರೀತಿ ದಬ್ಬಾಳಿಕೆ ಮಾಡಿದ್ದ ಅನ್ನುವುದನ್ನು ಅಡ್ಡಂಡ ಕಾರ್ಯಪ್ಪ ಹೇಳಿದರು. ಈ ವೇಳೆ ಮಾತನಾಡುವಾಗ ಗಿರೀಶ್ ಕಾರ್ನಾಡ್ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.