Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ

Mangaluru; 900 ಕೆ.ಜಿ ಧಾನ್ಯಗಳಲ್ಲಿ ಮೂಡಿಬಂದ ತ್ರಿವರ್ಣ ಧ್ವಜ

Published : Aug 14, 2022, 10:35 PM IST

ಬರೋಬ್ಬರಿ 900 ಕೆ.ಜಿ ಧಾನ್ಯಗಳನ್ನು ಬಳಸಿ  ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಭಿನ್ನ ತ್ರಿವರ್ಣ ಧ್ವಜದ ಕಲ್ಪನೆಯ ಚಿತ್ತಾರ ಬಿಡಿಸಲಾಗಿದೆ.

ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಭಿನ್ನವಾಗಿ ತ್ರಿವರ್ಣ ಧ್ವಜದ ಕಲ್ಪನೆ ಮೂಡಿಬಂದಿದೆ. ಬರೋಬ್ಬರಿ 900 ಕೆ.ಜಿ ಧಾನ್ಯಗಳನ್ನು ಬಳಸಿ ದೇವಸ್ಥಾನದ ಆವರಣದಲ್ಲಿ ತಿರಂಗ ಚಿತ್ತಾರ ಮಾಡಲಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಇದನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದ್ದಾರೆ. ಗುರುಬೆಳದಿಂಗಳು ಟ್ರಸ್ಟ್‌ನ 30 ಸದಸ್ಯರ ಕೈಚಳಕದಲ್ಲಿ ತ್ರಿವರ್ಣ ಧ್ವಜ ಮೂಡಿಬಂದಿದೆ. ಈ ಚಿತ್ತಾರ ಬಿಡಿಸಲು 300ಕೆಜಿ ಸಾಗು , 300ಕೆಜಿ ಹೆಸರುಕಾಳು, 300 ಕೆಜಿ ಕೆಂಪು ತೊಗರಿ ಬಳಕೆ ಮಾಡಲಾಗಿದೆ. 38 ಫೀಟ್ ವೃತ್ತದಲ್ಲಿ 108 ಬಾಳೆ ಎಲೆ ಬಳಸಿ 54 ಕಳಶವಿಟ್ಟು ತಿರಂಗ ಅಲಂಕಾರ.

ಮಂಗಳೂರಿನಲ್ಲಿ ದಾಖಲೆ ಬರೆದ 900 ಕೆ.ಜಿ‌ ತೂಕದ ತಿರಂಗ!

90 ಕೆ.ಜಿಯಷ್ಟು ಸಾಬಕ್ಕಿ, ಬೆಂಡೆಕಾಯಿ, ಮೂಲಂಗಿ, ಅಡಕೆ, ಕ್ಯಾರೆಟ್ ಬಳಕೆ. ಕ್ಷೇತ್ರದ ಆವರಣದಲ್ಲಿ ಪುಷ್ಪ ಹಾಗೂ ಧಾನ್ಯಗಳನ್ನು ಬಳಸಿ ಚಿತ್ರಾಕೃತಿ ರಚಿಸಲಾಗಿದೆ. ಬರೋಬ್ಬರಿ 12 ಗಂಟೆಗಳ ಶ್ರಮದಲ್ಲಿ ತಿರಂಗ ಕಲಾಕೃತಿ ನಿರ್ಮಾಣ ಮಾಡಲಾಗಿದ್ದು,  ತಿರಂಗ ಕಲಾಕೃತಿ ಎದುರು ಜನ ಫೋಟೋ ಕ್ಲಿಕ್ಕಿಸಿಕೊಳ್ತಿದ್ದಾರೆ. ತಾಜಾ ತರಕಾರಿ, ಧಾನ್ಯ ಹಾಗೂ ಹೂಗಳನ್ನು ಬಳಸಿದ 1000 ಕೆ.ಜಿ ತೂಗುವ ಕಲಾಕೃತಿ ರಚನೆ ಮಾಡಲಾಗಿದೆ. ಸ್ವಾತಂತ್ರ್ಯೋತ್ಯವದ ಅಮೃತಮಹೋತ್ಸವ ಹಿನ್ನೆಲೆ ಈ ವಿಭಿನ್ನ ಪ್ರಯೋಗ ಮಾಡಲಾಗಿದ್ದು, ಕಲಾವಿದ ಹಾಗೂ ಛಾಯಾಗ್ರಾಹಕ ಪುನಿಕ್ ಶೆಟ್ಟಿ ಇದರ ನೇತೃತ್ವ ವಹಿಸಿದ್ದಾರೆ.

53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
24:19ಮತ್ತೆ ಸಂಕಷ್ಟಕ್ಕೆ ಸಿಲುಕಿದ ದಾಸ, ಅಭಿಮಾನಿಗಳೇ ತಂದಿಟ್ಟ ಹೊಸ ಆಪತ್ತು! ದರ್ಶನ್​ ಕೇಸ್​​​​ ಕೈ ಇಟ್ಟಲೆಲ್ಲಾ ಕರೆಂಟು!
22:23ಆ 3 ನಿಮಿಷ..! ಬೆಂಗಳೂರಿನ ತ್ರಿವಳಿ ಮರ್ಡರ್ ಹಿಂದಿನ ಭಯಾನಕ ಸತ್ಯ: ಅಮ್ಮನ ರಕ್ತ ಒರೆಸುವಾಗಲೇ ಬಂದೇಬಿಟ್ಟ ಅಪ್ಪ!
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
24:02ಬೆಂಗಳೂರು ಮರ್ಡರ್​​ ಡೇ..! ಒಂದೇ ದಿನ 7 ಜನರ ಕೊಲೆ..! ಕುಟುಂಬ ಮತ್ತು ರಕ್ತ ಸಂಬಂಧಕ್ಕೆ ಬೆಲೆಯೇ ಇಲ್ವಾ..?
Read more