Jan 6, 2022, 9:33 AM IST
ಮಂಡ್ಯ (ಜ.06): ತಮಿಳುನಾಡಿನ (Tamilnadu) ಓಂ ಶಕ್ತಿ ದೇವಾಲಯಕ್ಕೆ ಹೋಗಿ ಬಂದ 70ಕ್ಕೂ ಹೆಚ್ಚು ಮಂದಿಗೆ ಸೋಂಕು ಪತ್ತೆಯಾಗಿದ್ದು, ಜನತೆಗೆ ಓಂ ಶಕ್ತಿಯೇ ಮಾರಕವಾಗುವ ಆತಂಕ ಎದುರಾಗಿದೆ. ಓಂ ಶಕ್ತಿ ದೇವಾಲಯಕ್ಕೆ (Temple) ಹೋಗಿ ಬಂದ ಭಕ್ತರಿಗೆ (Devotees) ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ಸೂಚನೆ ನೀಡಲಾಗುತ್ತಿದೆ. ಈಗ ದೇವಾಲಯಕ್ಕೆ ಹೋಗಿ ಬಂದ ಭಕ್ತರಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದು ಗ್ರಾಮಗಳ ಅಕ್ಕ - ಪಕ್ಕದಲ್ಲಿ ವಾಸಿಸುವ ಜನರಿಗೆ ಆಂತಕವನ್ನುಂಟು ಮಾಡಿದೆ.
Covid Crisis : ದೇಶಕ್ಕೆ ಮುಂದಿನ 2 ವಾರ ಅಪಾಯಕಾರಿ : ಟಫ್ ರೂಲ್ಸ್ ಜಾರಿ
ಶ್ರೀರಂಗಪಟ್ಟನ (Shrirangapattana) ತಾಲೂಕಿನಲ್ಲಿ ಒಟ್ಟು73 ಮಂದಿಗೆ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಸೋಂಕಿತರನ್ನು ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ (Treatment) ನೀಡಲಾಗುತ್ತಿದೆ. ಇನ್ನೂ 300 ವರದಿ ಬರಬೇಕಿದೆ. ಜಿಲ್ಲೆಯಿಂದ 200ಕ್ಕೂ ಹೆಚ್ಚುಜನರು ಜನರ ರಿ ಓಂ ಶಕ್ತಿ ದೇವಾಲಯಕ್ಕೆ ಭೇಟಿ ನೀಡಿದ್ದರು.