May 13, 2020, 2:34 PM IST
ಬೆಂಗಳೂರು(ಮೇ.13): ಸಿಂಗಾಪುರದಿಂದ ವಿಮಾನ ಇಂದು(ಬುಧವಾರ) ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಈ ವಿಮಾನದ ಮೂಲಕ 180 ಜನರು ಬೆಂಗಳೂರಿಗೆ ಆಗಮಿಸಿದ್ದಾರೆ. ಇದರಲ್ಲಿ 39 ಮಂದಿ ಕನ್ನಡಿಗರು, ಕೇರಳದ 139 ಹಾಗೂ ತಮಿಳುನಾಡಿನ ಇಬ್ಬರು ಸ್ವದೇಶಕ್ಕೆ ಆಗಮಿಸಿದ್ದಾರೆ.
ಚಿಕ್ಕೋಡಿ ಆಯ್ತು ಬಾಗಲಕೋಟೆಯಲ್ಲೂ ಕ್ವಾರಂಟೈನ್‌ಗೆ ಕಿರಿಕ್..!
ವಿಮಾನದಲ್ಲಿ 15 ಗರ್ಭಿಣಿಯರು ಇದ್ದರು ಎಂಬುದು ವಿಶೇಷತೆಯಾಗಿದೆ. ಎಲ್ಲ ಪ್ರಯಾಣಿಕರಿಗೆ ಏರ್‌ಪೋರ್ಟ್‌ನಲ್ಲಿ ಸ್ಕ್ರೀನಿಂಗ್ ನಡೆಸಲಾಗಿದೆ. ಇವರೆಲ್ಲನ್ನ ಬಸ್‌ಗಳ ಮೂಲಕ ಕ್ವಾರಂಟೈನ್‌ಗೆ ಹೋಟೆಲ್‌ಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.