Sep 24, 2021, 10:48 PM IST
ಬೀದರ್, (ಸೆ.24): ಮೂರ್ತಿ ಚಿಕ್ಕಿದಾದರೂ ಕೀರ್ತಿ ದೊಡ್ಡದು ಎನ್ನುವ ಮಾರು ಅಕ್ಷರಶಃ ಈ ಪುಟ್ಟ ಬಾಲಕನಿಗೆ ಹೋಲುತ್ತದೆ,. ಕೇವಲ 21 ತಿಂಗಳ ಮಗುವಾದರೂ, ತನ್ನ ನೈಜ ಪ್ರತಿಭೆಯಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಆಯ್ಕೆಯಾಗಿ, ಗಡಿ ಜಿಲ್ಲೆ ಬೀದರ್ ಮತ್ತು ಹೆತ್ತವರಿಗೆ ಕೀರ್ತಿ ಈ ಪುಟ್ಟ ಬಾಲಕ ಕೀರ್ತಿ ತಂದಿದ್ದಾನೆ.
60 ಸೆಕೆಂಡ್‌ನಲ್ಲಿ 426 ಪಂಚ್: 24ರ ಯುವಕನ ಗಿನ್ನಿಸ್ ದಾಖಲೆ
ಹೌದು ಅದೆಷ್ಟೋ ಮಕ್ಕಳಿಗೆ 21 ತಿಂಗಳಿಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ,. ಆದರೆ, ಈತ ಅರಳು ಹುರಿದಂತೆ ಮಾತನಾಡಿ, ಎಲ್ಲರ ಗಮನ ಗೆದ್ದಿದ್ದಾನೆ. ಬಾಲ್ಯದಲ್ಲೇ ಅಪಾರ ಜ್ಞಾನ ಗಳಿಸಿರುವ ಬೀದರ್ ನಗರದ ಗುಂಪಾದ ಅಲ್ಲಮಪ್ರಭು ಬಡಾವಣೆಯ ನಿವಾಸಿ ಅಭಿನಂದನ ಜೋಶಿ ಎಂಬ 21 ತಿಂಗಳ ಪುಟಾಣಿಯೇ ದಾಖಲೆ ಬರೆದವನು ತಂದೆ ದೀಪಕ್ ಜೋಶಿ, ತಾಯಿ ಅಂಜಲಿ ಜೋಶಿ ಮನೆಯಲ್ಲೇ ಮಗುವಿಗೆ ಅಧ್ಯಯನ ಮಾಡಿಸಿ ತಾಯಿಯೇ ಮೊದಲ ಗುರು ಎನ್ನುವುದನ್ನು ನಿರೂಪಿಸಿದ್ದಾರೆ.