Jan 1, 2020, 11:05 AM IST
ಮೈಸೂರು(ಜ.01): ಮೈಸೂರಿನಲ್ಲಿ ಹೊಸ ವರ್ಷದ ಸಂಭ್ರಮ ಕಳೆಕಟ್ಟಿದೆ. ಮೈಸೂರಿನ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆದಿದ್ದು, ತಿರುಪತಿ ಮಾದರಿಯ 2 ಲಕ್ಷ ಲಡ್ಡು ವಿತರಣೆ ಮಾಡಲಾಗಿದೆ. ವಿಜಯನಗರದಲ್ಲಿರುವ ಯೋಗ ನರಸಿಂಹ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿದೆ.
ಸಹಸ್ರ ನಾಮಾರ್ಚನೆ, ಪ್ರಾಕಾರೋತ್ಸವ, ವಿಶೇಷ ಅಲಂಕಾರ, ಶ್ರೀರಂಗಂ, ಮಧುರೈ, ತಿರುಪತಿಯಿಂದ ತರಿಸಿರುವ ಹೂ ಮಾಲೆಗಳಿಂದ ಅಲಂಕಾರ ಮಾಡಲಾಗಿದ್ದು, ಮುಂಜಾನೆ ನಾಲ್ಕು ಗಂಟೆಯಿಂದಲೇ ಲಡ್ಡು ವಿತಹರಣೆ ಮಾಡಲಾಗುತ್ತಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
ವರ್ಷಾಂತ್ಯದಲ್ಲೇ 'ಅವನೇ ಶ್ರೀಮನ್ನಾರಾಯಣ' ರಿಲೀಸ್ ಮಾಡಲು ಇದೇ ಕಾರಣಾನಾ?
ಹೊಸ ವರ್ಷದ ದಿನದಂದು ಚಾಮುಂಡಿ ಬೆಟ್ಟಕ್ಕೆ ಭಕ್ತರ ದಂಡು ಆಗಮಿಸುತ್ತಿದೆ. ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿದ್ದು ಬೆಳಗಿನ ಜಾವದಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿದೆ. ದೇವಿಗೆ ಸಹಸ್ರ ನಾಮಾರ್ಚನೆ, ಪುಷ್ಪಾರ್ಚನೆ,ವಿಶೇಷ ಅಲಂಕಾರ ಮಾಡಲಾಗಿದ್ದು, ಸರತಿ ಸಾಲಲ್ಲಿ ನಿಂತು ಭಕ್ತರು ಚಾಮುಂಡಿ ತಾಯಿಯ ದರ್ಶನ ಪಡೆಯುತ್ತಿದ್ದಾರೆ.