ಸುತ್ತೂರಿನಲ್ಲಿ ಸಾಮೂಹಿಕ ವಿವಾಹ: ಸಪ್ತಪದಿ ತುಳಿದ 178 ಜೋಡಿ

Jan 22, 2020, 2:14 PM IST

ಮೈಸೂರು(ಜ.22): ಸೂತ್ತೂರು ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಬುಧವಾರ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ನಡೆದಿದೆ. ವಿವಾಹೋತ್ಸವಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದ್ದಾರೆ. ಈ ಬಾರಿ 178 ಜೋಡಿಗಳು ಸಪ್ತಪದಿ ತುಳಿದಿದ್ದು, ಬಹೃತ್ ವೇದಿಕೆಯಲ್ಲಿ ವಧೂವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

106 ಪರಿಶಿಷ್ಟ ಜಾತಿಯ ಜೋಡಿಗಳು, 33 ಹಿಂದುಳಿದ ವರ್ಗದ ಜೋಡಿಗಳು, 18ಅಂತರ್ ಜಾತಿ  ಜೋಡಿಗಳು, 11ಲಿಂಗಾಯತ ಸಮುದಾಯ ಜೋಡಿಗಳು, 10 ಪರಿಶಿಷ್ಟ ಪಂಗಡದ ಜೋಡಿಗಳು, 5ವಿಶೇಷ ಚೇತನ ಜೋಡಿಗಳು, 2ವಿಧುರ-ವಿಧವೆ ಜೋಡಿಗಳು ಹಸೆಮಣೆ ತುಳಿದಿದ್ದಾರೆ. ವಿಶೇಷವಾಗಿ ತಮಿಳುನಾಡಿನ 2 ಜೋಡಿಗಳು ಭಾಗಿಯಾಗಿದ್ದಾರೆ.

ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀ, ನಿ.ಪ್ರ.ಸ್ವ.ಶ್ರೀ ಮುಮ್ಮಡಿ ನಿರ್ವಾಣ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ನೆರವೇರಿದೆ. ಆರ್.ಎಸ್ಎಸ್ ಜಂಟಿ ಕಾರ್ಯದರ್ಶಿ ಮುಕುಂದ್‌ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಶ್ರೀಗಳು ನವವಧುವರರಿಗೆ ಶುಭಸಂದೇಶ, ಪ್ರಮಾಣ ಪತ್ರ ವಿತರಣೆ ಮಾಡಿದ್ದಾರೆ.