Dec 13, 2024, 6:51 PM IST
ಕಲಬುರಗಿ(ಡಿ.13): ಆಟ ಆಡಲು ಮನೆಯಿಂದ ಹೋಗಿದ್ದ ಬಾಲಕ ಶವವಾಗಿ ಪತ್ತೆಯಾದ ಘಟನೆ ನಗರದಲ್ಲಿ ಇಂದು(ಶುಕ್ರವಾರ) ನಡೆದಿದೆ. ರಸ್ತೆ ಮಧ್ಯೆದಲ್ಲಿರುವ ಎಲೆಕ್ಟ್ರಿಕ್ ಪೋಲ್ ವಿದ್ಯುತ್ ಶಾಕ್ ಹೊಡೆದು ಬಾಲಕ ಸಾವನ್ನಪ್ಪಿದ್ದಾನೆ. ಕಲಬುರಗಿ ನಗರದ ಬಸವನಗರ ನಿವಾಸಿ ಕಮಲ್ ರಾಜ್ (14) ಮೃತ ಬಾಲಕ.
ವಿದ್ಯುತ್ ಶಾಕ್ ನಿಂದ ಬಾಲಕ ಸಾವನಪ್ಪುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಲಬುರಗಿ ಬಸ್ ಸ್ಟ್ಯಾಂಡ್ ಮುಂಭಾಗದ ರಸ್ತೆ ಮಧ್ಯದ ಡಿವೈಡರ್ ದಾಟುವಾಗ ಘಟನೆ ನಡೆದಿದೆ. ರಸ್ತೆ ಮಧ್ಯದಲ್ಲಿ ಅಳವಡಿಸಿರುವ ಎಲೆಕ್ಟ್ರಿಕ್ ಪೋಲ್ ನಿಂದ ತಂತಿ ತುಂಡಾಗಿ ಬಿದ್ದಿತ್ತು. ರಸ್ತೆಯ ಮಧ್ಯೆದಲ್ಲಿ ಅಳವಡಿಸಿರುವ ಕಬ್ಬಿಣದ ರಾಡ್ ಗೆ ಅಂಟಿಕೊಂಡ ವಿದ್ಯುತ್ ತಂತಿಯಿಂದ ಬಾಲಕನಿಗೆ ಶಾಕ್ ಹೊಡೆದಿದೆ.
ಬೀದರ್: ಕ್ರಿಮಿನಾಷಕ ಸೇವಿಸಿ ಕಾರಂಜಾ ಸಂತ್ರಸ್ತರ ಆತ್ಮಹತ್ಯೆಗೆ ಯತ್ನ!
ಘಟನೆಗೆ ಸಂಬಂಧಿಸಿದಂತೆ ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.