ಸಿಗರೇಟ್​​ ಕದ್ದ ಅಂತ ಬೇಕಬಿಟ್ಟಿ ಹೊಡೆದು ಕೊಂದರು! ಲಕ್ಷ ಮೌಲ್ಯದ ಸಿಗರೇಟ್​ ಅಂತೆ, ಅದು ಸಿಗರೇಟೇನಾ?

Dec 18, 2024, 4:07 PM IST

ಕಲಬುರಗಿ: ಆತ ಬಡ ಹುಡುಗ. ಬ್ಲಡ್​ ಬ್ಯಾಂಕ್​ನಲ್ಲಿ ಕೆಲಸ ಮಾಡಿಕೊಂಡು ತನ್ನ ಪಾಡಿಗೆ ತಾನು ಇದ್ದವನು. ಮನೆಗೆ ಇವನೇ ದಿಕ್ಕು ಸಹ. ಆದ್ರೆ ಆವತ್ತು ಕೆಲಸಕ್ಕೆ ಅಂತ ಹೋದವನು ಎಷ್ಟೊತ್ತಾದ್ರೂ ವಾಪಸ್​ ಆಗಿರಲಿಲ್ಲ. ಅಮ್ಮನಿಗೆ ಡೌಟ್​​ ಬಂದು ಅವನ ಕಚೇರಿಗೆ ಹೋದ್ರೆ ಅವನನ್ನ ಯಾರೋ ಮನಬಂದಂತೆ ಬಡಿಯುತ್ತಿದ್ರು. ಅಮ್ಮ ಹೋಗಿ ಕೇಳಿದ್ರೆ ಅವರು ಹೇಳಿದ್ದು ಸಿಗರೇಟಿನ ಕಥೆಯನ್ನ. 

ನಂತರ ಸಮದಾನ ಮಾಡಿ ಮನೆಗೆ ಕರೆದುಕೊಂಢು ಹೋಗಬೇಕು ಅನ್ನುವಷ್ಟರಲ್ಲೆ ಅಮ್ಮನ ಎದುರೇ ಆ ಹುಡುಗ ಪ್ರಾಣಬಿಟ್ಟಿದ್ದ.  ಅಷ್ಟಕ್ಕೂ ಆ ಬಡಹುಡುಗನನ್ನ ಹೊಡೆದಿದ್ಯಾರು? ಯಾಕಾಗಿ ಹೊಡೆದ್ರು? ಒಂದು ಡೆಡ್ಲಿ ಮರ್ಡರ್​​ ಹಿಂದಿನ ರಹಸ್ಯ ಇಲ್ಲಿದೆ ನೋಡಿ