ಶಿವಪ್ಪ ಜಮಾದಾರ್: ಕಾಲಿಲ್ಲದಿದ್ದರೂ ಕೃಷಿಯಲ್ಲಿ ಕಮಾಲ್ ಮಾಡಿದ ಕೃಷಿಕ..!

ಶಿವಪ್ಪ ಜಮಾದಾರ್: ಕಾಲಿಲ್ಲದಿದ್ದರೂ ಕೃಷಿಯಲ್ಲಿ ಕಮಾಲ್ ಮಾಡಿದ ಕೃಷಿಕ..!

Published : Nov 22, 2022, 05:14 PM IST

40 ವರ್ಷದ ಶಿವಪ್ಪ ಜಮಾದಾರ್ ಅವರಿಗೆ ಬಾಲ್ಯದಿಂದಲೇ ಪೋಲಿಯೋದಿಂದ ಎರಡೂ ಕಾಲುಗಳ ಸ್ವಾಧೀನ ಇಲ್ಲ. ಕಾಲಿಲ್ಲದಿದ್ದರೂ ಇವರು ಕೃಷಿ ಕಾಯಕದಲ್ಲಿ ಛಲದಂಕ ಮಲ್ಲ.

ಛಲವೊಂದಿದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿ ಈ ದಿವ್ಯಾಂಗ ರೈತ. ಕಾಲಿಲ್ಲದಿದ್ದರೂ ಕೃಷಿ ಮಾಡುತ್ತಿದ್ದಾರೆ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ರೈತ ಶಿವಪ್ಪ ಜಮಾದಾರ. 40 ವರ್ಷದ ಶಿವಪ್ಪ ಜಮಾದಾರ್ ಅವರಿಗೆ ಬಾಲ್ಯದಿಂದಲೇ ಪೋಲಿಯೋದಿಂದ ಎರಡೂ ಕಾಲುಗಳ ಸ್ವಾಧೀನ ಇಲ್ಲ. ಕಾಲಿಲ್ಲದಿದ್ದರೂ ಇವರು ಕೃಷಿ ಕಾಯಕದಲ್ಲಿ ಛಲದಂಕ ಮಲ್ಲ. ತನ್ನ ಒಂದು ಎಕರೆ ತೋಟದಲ್ಲಿ ಬಗೆ ಬಗೆಯ ತರಕಾರಿಗಳನ್ನು ಬೆಳೆದು ಕೈ ತುಂಬಾ ಸಂಪಾದಿಸಿ ಜೀವನ ನಿರ್ವಹಿಸುತ್ತಿದ್ದಾರೆ. ರೈತ ಶಿವಪ್ಪ ಜಮಾದಾರ್, ತನ್ನ ತೋಟದ ಎಲ್ಲಾ ಕೆಲಸಗಳನ್ನ ಸ್ವತಃ ತಾವೇ ನಿರ್ವಹಿಸುತ್ತಾರೆ. ಅಂದರೆ ತೋಟದಲ್ಲಿ ಬೆಳೆದ ತರಕಾರಿ ಬೆಳೆಗೆ ನೀರುಣಿಸುವುದು, ಬೆಳೆಯಲ್ಲಿನ ಕಳೆ ತೆಗೆಯುವುದು, ಬೆಳೆದ ತರಕಾರಿ ಕಟಾವು ಮಾಡುವುದು, ಅಷ್ಟೇ ಅಲ್ಲದೇ ಕಟಾವು ಮಾಡಿದ ತರಕಾರಿಯನ್ನು ತನ್ನ 3 ಚಕ್ರದ ಬೈಕ್‌ನಲ್ಲಿ ಮಾರುಕಟ್ಟೆಗೆ ತೆಗೆದುಕೊಂಡು ಮಾರಾಟ ಮಾಡಿಕೊಂಡು ಬರುವವರೆಗೆ ಎಲ್ಲಾ ಕೆಲಸವನ್ನು ನಿರ್ವಹಿಸುತ್ತಾರೆ. 

07:39ನಾಟಿ ಔಷಧಿ ಸೇವಿಸಿ ಮೂವರು ದುರ್ಮರಣ: ಹನುಮಾನ್ ದೇವಸ್ಥಾನದಲ್ಲಿ ಔಷಧಿ ನೀಡುವ ಫಕಿರಪ್ಪಾ ಎಸ್ಕೇಪ್!
21:52ತಂಗಿಯ ಕ್ಲಾಸ್​ಮೇಟನ್ನೇ ಪಟಾಯಿಸಿಬಿಟ್ಟ ದುಬೈ ಬಾಯ್! ದುಬೈನಲ್ಲೇ ಕೂತು ಅವಳ ವಿಡಿಯೋ ಹರಿಬಿಟ್ಟ!
02:13ಕಲಬುರಗಿ ಅಣಕು ಮರ್ಡರ್ ರೀಲ್ಸ್ ವೈರಲ್; ಇಬ್ಬರನ್ನು ಅರೆಸ್ಟ್ ಮಾಡಿದ ಪೊಲೀಸರು!
48:19News Hour: ಖರ್ಗೆ ಕೋಟೆಯಲ್ಲಿ ‘ರಾಜೀನಾಮೆ’ ಸಮರ
06:17ಮತ್ತೆ ಕಲಬುರಗಿ ಮಹಾನಗರ ಪಾಲಿಕೆ ನಿರ್ಲಕ್ಷ: ಮಕ್ಕಳ ಶಾಲಾ ವಾಹನಕ್ಕೆ ಕರೆಂಟ್ ಶಾಕ್, ಮಹಿಳೆ ಸ್ಥಿತಿ ಗಂಭೀರ
23:45 ಸಿಗರೇಟ್​​ ಕದ್ದ ಅಂತ ಬೇಕಬಿಟ್ಟಿ ಹೊಡೆದು ಕೊಂದರು! ಲಕ್ಷ ಮೌಲ್ಯದ ಸಿಗರೇಟ್​ ಅಂತೆ, ಅದು ಸಿಗರೇಟೇನಾ?
05:09ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿಗಳ ಯಡವಟ್ಟಿಗೆ ಅಮಾಯಕ ಬಾಲಕ ಬಲಿ!
09:23ಕಲಬುರಗಿ ಜೈಲಿನಲ್ಲಿ ಖೈದಿಗಳ ಬಿಂದಾಸ್ ಲೈಫ್: ಇದು ಅಧೀಕ್ಷಕಿ ವಿರುದ್ಧದ ಷಡ್ಯಂತ್ರವೇ?
02:18ವರದಕ್ಷಿಣೆ ಕೇಸ್‌ಲ್ಲಿ 26 ವರ್ಷ ಜೈಲಿನಲ್ಲಿದ್ದ 93 ವರ್ಷದ ಅಜ್ಜಿ, ಬಿಡುಗಡೆಯಾದ ಒಂದೇ ವಾರಕ್ಕೆ ಸಾವು
03:24Kalaburagi: ಮಹಿಳಾ ಹಾಸ್ಟೆಲ್‌ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು
Read more