Jun 19, 2022, 6:22 PM IST
ನವದೆಹಲಿ (ಜೂನ್ 19): ಕೇಂದ್ರದ ಬಹು ಮಹತ್ವಾಕಾಂಕ್ಷಿ ಅಗ್ನಿಪಥ್ ಯೋಜನೆ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ರಾಷ್ಟ್ರವ್ಯಾಪಿ ಪ್ರತಿಭಟನೆಗಳ ನಡುವೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಅತ್ಯಂತ ನುರಿತ, ಶಿಸ್ತುಬದ್ಧ ಮತ್ತು ಪ್ರೇರೇಪಿತ ಅಗ್ನಿವೀರರಿಗೆ ತನ್ನ ವಿವಿಧ ಸೇವೆಗಳಿಗೆ ಸೇರಿಸಿಕೊಳ್ಳುವುದಾಗಿ ಹೇಳಿದೆ. ಇದರ ಜೊತೆಗೆ 2022ನೇ ಬ್ಯಾಚ್ ಗೆ ಅಗ್ನಿ ವೀರರಿಗೆ ಜೂನ್ 24 ರಂದು ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗುತ್ತಿದ್ದು, ಜುಲೈ 24 ರಂದು ಮೊದಲ ಹಂತದ ನೇಮಕಾತಿ ಪರೀಕ್ಷೆ ನಡೆಯಲಿದೆ.
IBPS RECRUITMENT 2022; ಬರೋಬ್ಬರಿ 8106 ಹುದ್ದೆಗಳಿಗೆ ನೇಮಕಾತಿ
ಡಿಸೆಂಬರ್ 30 ರಿಂದ ಮೊದಲ ಬ್ಯಾಚ್ ತರಬೇತಿ ಆರಂಭವಾಗಲಿದ್ದು, ಮೊದಲ ಬ್ಯಾಚ್ ನಲ್ಲಿ 25 ಸಾವಿರ ಅಗ್ನಿವೀರರಿಗೆ ತರಬೇತಿ ನೀಡಲಾಗುತ್ತದೆ. ಎರಡನೇ ಬ್ಯಾಚ್ ಅಗ್ನಿವೀರರಿಗೆ ತರಬೇತಿ 2023 ಫೆಬ್ರವರಿಯಲ್ಲಿ ಆರಂಭವಾಗಲಿದ್ದು , 40 ಸಾವಿರ ಮಂದಿಗೆ ತರಬೇತಿ ನೀಡಲಾಗುತ್ತದೆ. ಆಸಕ್ತರು ಜಾಯಿನ್ ಇಂಡಿಯಾ ಆರ್ಮಿ ವೆಬ್‌ಸೈಟ್ ನಲ್ಲಿ ರಿಜಿಸ್ಟರ್ ಆಗಬೇಕು. ವಯೋಮಿತಿ 17.5 ವರ್ಷದಿಂದ 23 ವರ್ಷ ಆಗಿದೆ.