ಸ್ವಾತಂತ್ರೋತ್ಸವಕ್ಕೆ ರಿಕ್ಕಿ ಕೇಜ್‌ ಉಡುಗೊರೆ: ಬ್ರಿಟಿಷ್‌ ಆರ್ಕೆಸ್ಟ್ರಾದಲ್ಲಿ ರಾಷ್ಟ್ರಗೀತೆಗೆ ವಿಶೇಷ ಟ್ಯೂನ್‌ !

ಸ್ವಾತಂತ್ರೋತ್ಸವಕ್ಕೆ ರಿಕ್ಕಿ ಕೇಜ್‌ ಉಡುಗೊರೆ: ಬ್ರಿಟಿಷ್‌ ಆರ್ಕೆಸ್ಟ್ರಾದಲ್ಲಿ ರಾಷ್ಟ್ರಗೀತೆಗೆ ವಿಶೇಷ ಟ್ಯೂನ್‌ !

Published : Aug 15, 2023, 01:31 PM IST

ಬ್ರಿಟಿಷರಿಂದ ಭಾರತದ ರಾಷ್ಟ್ರಗೀತೆಗೆ ಸಂಗೀತ ಸಂಯೋಜನೆ ಮಾಡಿಸಿದ್ದು ವಿಶೇಷವಾಗಿದೆ. ರಾಷ್ಟ್ರಗೀತೆಗೆ ಅತ್ಯುನ್ನತ ಮಾದರಿ ಸೃಷ್ಟಿ ಮಾಡೋದು ನನ್ನ ಉದ್ದೇಶವಾಗಿತ್ತು ಎಂದು ರಿಕ್ಕಿ ಕೇಜ್‌ ಹೇಳಿದ್ದಾರೆ.

ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವ ಸಂಗೀತ ನಿರ್ದೇಶಕ ರಿಕ್ಕಿ ಕೇಜ್(Ricky Kej) ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ರಾಷ್ಟ್ರಗೀತೆ(national anthem) ಜನಗಣಮನಕ್ಕೆ ಹೊಸ ಬಗೆಯ ಟ್ಯೂನ್ (tune) ಟಚ್ ಕೊಟ್ಟಿದ್ದಾರೆ. ರಿಕ್ಕಿ ಕೇಜ್ ನಿರ್ದೇಶನದ ವಿಭಿನ್ನ ಬಗೆಯ ರಾಷ್ಟ್ರಗೀತೆ ಸೋಮವಾರ ಬಿಡುಗಡೆಯಾಗಿದೆ. ನಮ್ಮ ದೇಶವನ್ನಾಳಿದ ಬ್ರಿಟಿಷ್ ನೆಲದಲ್ಲಿಯೇ ಅಂದರೆ ಲಂಡನ್ ಅಬೇ ರೋಡ್ ಸ್ಟುಡಿಯೋಸ್ ನಲ್ಲಿ ರಾಷ್ಟ್ರಗೀತೆಯನ್ನು ರೆಕಾರ್ಡ್ ಮಾಡಿದ್ದು ವಿಶೇಷವಾಗಿದೆ. ಕೇವಲ 3 ಗಂಟೆ ಅವಧಿಯಲ್ಲಿ 100 ಮಂದಿ ಮ್ಯೂಜಿಷಿಯನ್ಸ್ ಸಹಯೋಗದಲ್ಲಿ ಜನಗಣಮನ ಸಿದ್ಧವಾಗಿದೆ.ಈ ಬಗ್ಗೆ ಅವರು ಮಾತನಾಡಿದ್ದು, ರಾಷ್ಟ್ರಗೀತೆ ನಾನು ಕಲಿತ ಮೊದಲ ಸಂಗೀತವಾಗಿದೆ. ಬಾಲ್ಯದಲ್ಲಿ ರೈಮ್ಸ್ ಕಲಿಯುವುದಕ್ಕೂ ಮೊದಲೇ ರಾಷ್ಟ್ರಗೀತೆ ಕಲಿತೆ. ರಾಷ್ಟ್ರಗೀತೆ ಸದಾಕಾಲ ನನ್ನೊಳಗಿದೆ. ಈ ಮೊದಲು ರಾಯಲ್ ಫಿಲ್ಹಾರ್ಮೋನಿಕ್ ಆರ್ಕೆಸ್ಟ್ರಾ(Royal Philharmonic Orchestra) ಜತೆ ಕೆಲಸ ಮಾಡಿದ್ದೇನೆ. ಇದೊಂದು ಅದ್ಭುತ ಆರ್ಕೆಸ್ಟ್ರಾ. ಹೀಗಾಗಿ ನಮ್ಮ ರಾಷ್ಟ್ರಗೀತೆಯನ್ನ, ಈ ಆರ್ಕೆಸ್ಟ್ರಾ ಜೊತೆಗೂಡಿಸಲು ಯೋಚಿಸಿದೆ ಎಂದು ರಿಕ್ಕಿ ಕೇಜ್‌ ಹೇಳಿದ್ದಾರೆ.

ರಾಷ್ಟ್ರಗೀತೆಯನ್ನ ಅತ್ಯುನ್ನತ ಸ್ವರೂಪದಲ್ಲಿ ಪ್ರಸ್ತುತಪಡಿಸಲು ನಿರ್ಧರಿಸಿದೆ. ಇದರ ಸಿದ್ಧತೆಗಾಗಿ ಮೂರು ತಿಂಗಳು ತೆಗೆದುಕೊಂಡೆವು. ಲಂಡನ್ ಅಬೇ ರೋಡ್ ಸ್ಟುಡಿಯೋಸ್‌ನ ಲ್ಲಿ ರಾಷ್ಟ್ರಗೀತೆ ರೆಕಾರ್ಡ್ ಮಾಡಿಲಾಗಿದೆ. ರಾಯಲ್ ಫಿಲ್ಹಾರ್ಮೋನಿಕ್, ಭಾರತದ ರಾಷ್ಟ್ರಗೀತೆಯನ್ನ ರೆಕಾರ್ಡ್ ಮಾಡಿದ ಅತ್ಯಂತ ದೊಡ್ಡ ಆರ್ಕೆಸ್ಟ್ರಾವಾಗಿದೆ. ಈ ಅನುಭವ ನಿಜಕ್ಕೂ ಉತ್ತಮವಾಗಿತ್ತು. ರೆಕಾರ್ಡಿಂಗ್ ರೂಮ್ನಲ್ಲಿ ನಿಲ್ಲುವುದು,100 ಮ್ಯೂಸಿಷಿಯನ್ಸ್ ರಾಷ್ಟ್ರಗೀತೆಗೆ ಸಂಗೀತ ಸಂಯೋಜಿಸುತ್ತಿರುವುದು ತುಂಬಾ ಸಂತೋಷ ತಂದಿದೆ ಎಂದು ರಿಕ್ಕಿ ಕೇಜ್‌ ಹೇಳಿದರು.

ಇದನ್ನೂ ವೀಕ್ಷಿಸಿ: ಕೆಂಪುಕೋಟೆಯಿಂದ ಮಣಿಪುರ ಜನತೆಗೆ ಮೋದಿ ಭರವಸೆ, ಇಲ್ಲಿದೆ ಸ್ವಾತಂತ್ರ್ಯ ದಿನಾಚರಣೆ ಭಾಷಣದ ವಿಶ್ಲೇಷಣೆ!

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?