ಮಹಾಯುದ್ಧಕ್ಕೆ ಮೆಗಾ ತಾಲೀಮು..ಮೋದಿ ಹ್ಯಾಟ್ರಿಕ್ ಪಕ್ಕನಾ..? ಲೋಕಯುದ್ಧದ ಮೇಲೆ ಪಂಚ ಕುರುಕ್ಷೇತ್ರದ ಎಫೆಕ್ಟ್ ಏನು..?

ಮಹಾಯುದ್ಧಕ್ಕೆ ಮೆಗಾ ತಾಲೀಮು..ಮೋದಿ ಹ್ಯಾಟ್ರಿಕ್ ಪಕ್ಕನಾ..? ಲೋಕಯುದ್ಧದ ಮೇಲೆ ಪಂಚ ಕುರುಕ್ಷೇತ್ರದ ಎಫೆಕ್ಟ್ ಏನು..?

Published : Dec 05, 2023, 02:45 PM IST

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಕೇಸರಿ ಸುನಾಮಿ..!
3 ರಾಜ್ಯ ಗೆದ್ದ ಮೋದಿಗೆ 3ನೇ ಬಾರಿ ದೆಹಲಿ ಪಟ್ಟ ಹತ್ತಿರವಾಯ್ತಾ..?
ಹಿಂದಿ ಹಾರ್ಟ್‌ಲ್ಯಾಂಡ್‌ನಿಂದ ಮೋದಿಗೆ ಸಿಕ್ಕಿದೆ ದೊಡ್ಡ ಸಿಗ್ನಲ್..!
 

ಪ್ರಧಾನಿ ನರೇಂದ್ರ ಮೋದಿಯವರ ಬಾಯಲ್ಲಿ ಹ್ಯಾಟ್ರಿಕ್ ಮಾತು. 2024ಕ್ಕೆ ಮತ್ತೆ ನಮ್ದೇ ಹವಾ ಅನ್ನೋ ಭವಿಷ್ಯವಾಣಿ. ಪಂಚರಾಜ್ಯ ಕುರುಕ್ಷೇತ್ರಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳು ಬಿಜೆಪಿ(BJP) ವಶವಾಗಿದ ಬೆನ್ನಲ್ಲೇ ಪ್ರಧಾನಿ ಮೋದಿ(Narendra modi), ಹ್ಯಾಟ್ರಿಕ್ ಮಂತ್ರ ಜಪಿಸ್ತಾ ಇದ್ದಾರೆ. ದೆಹಲಿಯ(Delhi) ಬಿಜೆಪಿ ಕೇಂದ್ರ ಕಚೇರಿಯಲ್ಲಿ ಭಾನುವಾರ ಸಂಜೆ ನಡೆದ ವಿಜಯೋತ್ಸವ ಭಾಷಣದಲ್ಲಿ 3 ಎಂದು ಕೈ ಸನ್ನೆ ತೋರಿಸಿ, ಸತತ 3ನೇ ಬಾರಿ ದೆಹಲಿ ಗದ್ದುಗೆ ಏರೋದು ನಾನೇ ಅನ್ನೋ ಸಂದೇಶ ರವಾನಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಪತರಗುಟ್ಟಿ ಹೋಗಿದ್ದ ಕೇಸರಿ ಪಕ್ಷ ಮತ್ತೆ ಮೈಕೊಡವಿ ಎದ್ದು ನಿಂತಿದೆ. ಇಡೀ ದೇಶದ ಗಮನ ಸೆಳೆದಿದ್ದ ಪಂಚರಾಜ್ಯ ಕುರುಕ್ಷೇತ್ರಗಲ್ಲಿ 3 ರಾಜ್ಯಗಳನ್ನು ಗೆದ್ದದ್ದೇ ತಡ, ಬಿಜೆಪಿಯನ್ನ ಹಿಡಿಯೋರೇ ಇಲ್ಲ. ರಾಜ್ಯದ ಬಿಜೆಪಿ ನಾಯಕರಂತೂ ಲೋಕಸಭಾ ಚುನಾವಣೆಯಲ್ಲೂ(Loksabha) ನಮ್ದೇ ಆಟ ಅಂತ ಅಬ್ಬರಿಸ್ತಾ ಇದ್ದಾರೆ. ಬಿಜೆಪಿ ನಾಯಕರಿಗೆ ಇಂಥದ್ದೊಂದು ವಿಶ್ವಾಸ, ಆತ್ಮವಿಶ್ವಾಸ, ಗೆದ್ದೇ ಗೆಲ್ತೇವೆ ಅನ್ನೋ ಭರವಸೆಯನ್ನು ತಂದು ಕೊಟ್ಟಿರೋದು ತ್ರಿವಳಿ ಪರಾಕ್ರಮ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ರಾಜ್ಯಗಳನ್ನು ವಶಪಡಿಸಿಕೊಂಡಿರೋ ಬಿಜೆಪಿ, ಮಹಾಭಾರತ ಮಹಾಯುದ್ಧಕ್ಕೆ ಇದೇ ದಿಕ್ಸೂಚಿ ಅಂತ ಹೇಳ್ತಾ ಇದೆ. ಮುಂದಿನ ವರ್ಷ ನಡೆಯೋ ಲೋಕಸಭಾ ಚುನಾವಣೆಯಲ್ಲಿ ಮೋದಿ ರಣಾರ್ಭಟದ ಮುಂದೆ ಎದುರಾಳಿಗಳು ಧೂಳೀಪಟವಾಗೋದು ಶತಸಿದ್ಧ ಅನ್ನೋ ಮಾತುಗಳು ಕೇಳಿ ಬರ್ತಿವೆ. ಮಧ್ಯಪ್ರದೇಶವೂ ನಮ್ಮದೇ, ರಾಜಸ್ಥಾನವೂ ನಮ್ಮದೇ, ಛತ್ತೀಸ್’ಗಢವೂ ನಮ್ಮದೇ.. 2024ರ ಮಹಾಭಾರತ ಯುದ್ಧದಲ್ಲೂ ಗೆಲುವು ನಮ್ಮದೇ ಅನ್ನೋ ರಣಘೋಷಣಗಳು ಕೇಸರಿ ಪಾಳೆಯದಿಂದ ಮಾರ್ಧನಿಸ್ತಾ ಇವೆ. ಕೇಸರಿ ಸೈನ್ಯಕ್ಕೆ ಇಂಥದ್ದೊಂದು ಉತ್ಸಾಹ, ರಣೋತ್ಸಾಹ ತಂದು ಕೊಟ್ಟಿರೋದು ಆ ಮೂರು ಗೆಲುವುಗಳು.

ಇದನ್ನೂ ವೀಕ್ಷಿಸಿ:  ಸಿಪಿವೈ ಬಾವನನ್ನು ಕೊಂದು ರಾಮಾಪುರ ಕಾಡಿಗೆ ಎಸೆದಿದ್ಯಾರು..? ಕೊಲೆಗೆ ರಿಯಲ್ ಎಸ್ಟೇಟ್ ಕಾರಣವಾಯ್ತಾ..?

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more