ಕಲಾಂ - ಲಕ್ಷ್ಮಣ್ ನಡುವೆ ‘ವಿಶಿಷ್ಟ’ ಸಂಬಂಧ; ಅದು ಕಲ್ಪನೆಗೂ ಮೀರಿದ ಬಂಧ!

Oct 15, 2019, 8:50 PM IST

ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಸ್ಫೂರ್ತಿ ತುಂಬಿದ ವ್ಯಕ್ತಿ ಭಾರತದ ಮಾಜಿ ರಾಷ್ಟ್ರಪತಿ ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ. ಅವರ 88ನೇ ಜನ್ಮ ದಿನೋತ್ಸವದಂದು ಈ ಮಹಾನ್ ವ್ಯಕ್ತಿ ಬಗ್ಗೆ ಗೊತ್ತಿರದ 5 ವಿಷಯಗಳನ್ನು ತಿಳಿಯೋಣ....

1. ಕಲಾಂ ಮೊದಲಿನಿಂದಲೂ ಶ್ರಮ ಜೀವಿ. 5ನೇ ವಯಸ್ಸಿನಲ್ಲಿ, ಅವರು ಕುಟುಂಬವನ್ನು ಪೋಷಿಸಲು ತಂದೆಗೆ ನೆರವಾಗಲು ಪತ್ರಿಕೆ ಮಾರುತ್ತಿದ್ದರು. ಶಾಲೆ ಮುಗಿಸಿ ಕಲಾಂ ಈ ಕೆಲಸ ಮಾಡುತ್ತಿದ್ದರು.

2. ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗುವ ಅವಕಾಶ ಕೂದಲೆಳೆ ಅಂತರದಲ್ಲಿ ಕಲಾಂ ಕೈ ತಪ್ಪಿತ್ತು. ಒಟ್ಟು 8 ಉದ್ಯೋಗ ಅವಕಾಶಗಳಿದ್ದ ಈ ಪಟ್ಟಿಯಲ್ಲಿ ಕಲಾಂ ಹೆಸರು 9ನೇಯದ್ದಾಗಿತ್ತು.  ಪಟ್ಟಿಯಲ್ಲಿದ್ದ ಮೊದಲ ಎಂಟು ಮಂದಿ ಪೈಲಟ್ ಪೋಸ್ಟಿಗೆ ನೇಮಕವಾದರು.

3.  ಕಲಾಂ ಅವರು ಸ್ವಿಟ್ಜರ್‌ಲ್ಯಾಂಡ್‌ಗೆ ನೀಡಿದ ಭೇಟಿಯ ದಿನವನ್ನು ಆ ದೇಶದಲ್ಲಿ ವಿಜ್ಞಾನ ದಿನವೆಂದು ಆಚರಿಸುತ್ತಾರೆ. ಈ ಮಹಾನ್ ವ್ಯಕ್ತಿತ್ವ ಕೊನೆಯುಸಿರೆಳೆದ ನಂತರ ಸ್ವಿಸ್ ಸರಕಾರ ಈ ದಿನವನ್ನು ವಿಜ್ಞಾನ ದಿನವನ್ನಾಗಿ ಘೋಷಿಸಿತು.

4. ಕಲಾಂ ತಮಿಳಿನಲ್ಲಿ ಸಾಕಷ್ಟು ಕವನ ಬರೆದಿದ್ದಾರೆ. ಮತ್ತು ವೀಣೆ ನುಡಿಸುವುದರಲ್ಲಿಯೂ ಸಿದ್ಧಹಸ್ತರಾಗಿದ್ದರು.

5. ಕಲಾಂ ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಒಟ್ಟು 38 ಮಂದಿಯನ್ನು ಫಾಲೋ ಮಾಡುತ್ತಿದ್ದರು. ಅದರಲ್ಲೇ ಒಬ್ಬರೇ ಒಬ್ಬ ಕ್ರಿಕೆಟರ್ ವಿವಿಎಸ್ ಲಕ್ಷ್ಮಣ್ ಅವರನ್ನು ಫಾಲೋ ಮಾಡುತ್ತಿದ್ದರು.