ಟೋಕಿಯೋ 2020: 'ರಾಣಿ ಪಡೆ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ರೋಮಾಂಚಕ ಅನುಭವ'

Aug 26, 2021, 4:24 PM IST

ಕೊಡಗು(ಆ.26): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸೋಲಿಸಿದ್ದು ರೋಮಾಂಚಕ ಅನುಭವ ಎಂದು ಭಾರತ ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಅಂಕಿತಾ ಸುರೇಶ್ ಏಷ್ಯಾನೆಟ್‌ ಸುವರ್ಣ ನ್ಯೂಸ್ ಜತೆ ಒಲಿಂಪಿಕ್ಸ್‌ ನ ಅನುಭವ ಹಂಚಿಕೊಂಡಿದ್ದಾರೆ.

ರಾಣಿ ರಾಂಪಾಲ್‌ ನೇತೃತ್ವದ ಭಾರತ ಮಹಿಳಾ ಹಾಕಿ ತಂಡವು ಆಸ್ಟ್ರೇಲಿಯಾ ತಂಡವನ್ನು ರೋಚಕವಾಗಿ ಮಣಿಸುವ ಮೂಲಕ ಒಲಿಂಪಿಕ್ಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿತ್ತು. ಆದರೆ ಕಂಚಿನ ಪದಕ ಗೆಲ್ಲುವ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಚೊಚ್ಚಲ ಒಲಿಂಪಿಕ್ಸ್‌ ಪದಕ ಗೆಲ್ಲುವ ಮಹಿಳಾ ಹಾಕಿ ತಂಡದ ಕನಸು ಭಗ್ನವಾಗಿತ್ತು.  

ಟೋಕಿಯೋ 2020: ಹರ್ಮನ್‌ಪ್ರೀತ್, ಶ್ರೀಜೇಶ್‌ಗೆ ವಿಶ್ವ ಹಾಕಿ ವಾರ್ಷಿಕ ಪ್ರಶಸ್ತಿ?

ಗ್ರೇಟ್ ಬ್ರಿಟನ್ ವಿರುದ್ದದ ಕಂಚಿನ ಪದಕಕ್ಕಾಗಿನ ಹೋರಾಟದಲ್ಲಿ ನಮ್ಮ ತಂಡಕ್ಕೆ ಪದಕ ಗೆಲ್ಲುವ ಅವಕಾಶ ಹೆಚ್ಚಿತ್ತು. ಆದರೆ ಅದೃಷ್ಟ ಅವರ ಪರವಾಗಿತ್ತು. ಗ್ರೇಟ್ ಬ್ರಿಟನ್ ತಂಡದವರು ನಮ್ಮನ್ನು ಸಮಾಧಾನ ಮಾಡುವಾಗ ನಮಗೆ ಹೆಮ್ಮೆ ಅನ್ನಿಸ್ತು ಎಂದು ಅಂಕಿತಾ ಸುರೇಶ್‌ ಹೇಳಿದ್ದಾರೆ. ಅಂಕಿತಾ ಸುರೇಶ್ ಸಂಪೂರ್ಣ ಸಂದರ್ಶನ ಇಲ್ಲಿದೆ.