Aug 27, 2023, 12:53 PM IST
ನಟ ರಾಕ್ಷಸ ಧನಂಜಯ್ ತನ್ನ ಚಿತ್ರರಂಗದ ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದಾರೆ. ಮೊನ್ನೆ ಆಗಸ್ಟ್ 23ಕ್ಕೆ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಡಾಲಿ ನೆಕ್ಟ್ಸ್ ಡೇನೆ ಬಣ್ಣದ ಜಗತ್ತಿನ ತನ್ನ ಸ್ನೇಃಹಿತರಿಗೆ ಬರ್ತ್ಡೇ ಪಾರ್ಟಿ ಕೊಟ್ಟಿದ್ದಾರೆ. ಡಾಲಿ ಬರ್ತಡೇ ಪಾರ್ಟಿ ಬಲು ಜೋರಾಗೆ ನಡೆದಿದೆ. ಈ ನೈಟ್ ಪಾರ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೆ ಅಲ್ಲ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಅಭಿಷೇಕ್ ಅಂಬರೀಷ್, ಲಲ್ವಿ ಸ್ಟಾರ್ ಪ್ರೇಮ್, ಸಿಂಗಾರ ಸಿರಿ ಸಪ್ತಮಿ ಗೌಡ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ದೇವರಾಜ್, ರಮೇಶ್ ಅರವಿಂದ್, ದುನಿಯಾ ವಿಜಯ್, ನಟಿ ಅಮೃತಾ ಐಯ್ಯರ್, ಚೈತ್ರಾ ಆಚಾರ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಸ್ಟಾರ್ ಕಲಾವಿಧರು ಆಗಮನಿಸಿ ಡಾಲಿಗೆ ಬರ್ತ್ಡೇ ವಿಶ್ ಮಾಡಿದ್ದಾರೆ. ಧನಂಜಯ್ ಹುಟ್ಟುಹಬ್ಬದ ನೆಪದಲ್ಲಿ ಕನ್ನಡದ ಎಲ್ಲಾ ಸ್ಟಾರ್ ಒಂದೆಡೆ ಸೇರಿರೋ ಫೋಟೋಗಳು ಈಗ ಸೋಷಿಯಲ್ ಮೀಡಿಯಾ ಸಮುದ್ರದಲ್ಲಿ ತೇಲಾಡುತ್ತಿವೆ.