ಉರಿಗೌಡ - ನಂಜೇಗೌಡ ಸಿನಿಮಾ: ಮುನಿರತ್ನಗೆ ಆದಿಚುಂಚನಗಿರಿ ಶ್ರೀ ಆಹ್ವಾನ

Mar 19, 2023, 12:58 PM IST

ಬೆಂಗಳೂರು (ಮಾ.19): ರಾಜ್ಯದಲ್ಲಿ ಟಿಪ್ಪುವನ್ನು ಕೊಂದಿದ್ದಾರೆಂಬ ಉರಿಗೌಡ ಮತ್ತು ನಂಜೇಗೌಡರ ಕುರಿತ ಸಿನಿಮಾವನ್ನು ಮಾಡಲು ಮುನಿರತ್ನ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆದಿಚುಂಚನಗಿರಿ ನಿರ್ಮಲಾನಂದರನಾಥ ಸ್ವಾಮೀಜಿಗಳು ತಮ್ಮನ್ನು ಭೇಟಿಯಾಗುವಂತೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುನಿರತ್ನ ಅವರು, ಕಾಲ್ಪನಿಕ ಕಥೆಗಳನ್ನ ಯಾರು ಹುಟ್ಟು ಹಾಕೋದಕ್ಕೆ ಆಗಲ್ಲ. 1940-50 ನೇ ಇಸವಿಗೂ ಹಿಂದೆಯಿಂದಲೂ ಉರಿಗೌಡ್ರು, ನಂಜೇಗೌಡರ ಬಗ್ಗೆ ಲಾವಣಿ ಹಾಡುಗಳಿವೆ. ಲಾವಣಿ ಹಾಡುಗಳ ಆಧಾರದಲ್ಲಿ ಉರಿಗೌಡ ನಂಜೇಗೌಡರು ಇದದ್ದು ಸತ್ಯ. ಮೈಸೂರು ಸಂಸ್ಥಾನದ ಪರವಾಗಿ ಕೆಲಸ ಮಾಡಿದ್ದು ನಿಜ. ಅದಕ್ಕೆ ಬೇಕಾದ ಸಾಕ್ಷಿಗಳು ಸಾಕಷ್ಟಿವೆ. ಈ ಕುರಿತು ಅಶ್ವಥ್ ನಾರಾಯಣ ಅವರು ಸಂಶೋಧನೆ ಮಾಡ್ತಿದ್ದಾರೆ ಎಂದು ಹೇಳಿದರು. ಇನ್ನು ಸಿನಿಮಾ ಕುರಿತಂತೆ ಆದಿಚುಂಚನಗಿರಿ ಶ್ರೀಗಳು ತಮ್ಮನ್ನು ಭೇಟಿಯಾಗುವಂತೆ ಹೇಳಿದ್ದಾರೆ ಎಂದು ತಿಳಿಸಿದರು.

ಬೆಳ್ಳಿ ತೆರೆಮೇಲೆ ಬರಲಿದ್ದಾರೆ ಉರಿಗೌಡ ನಂಜೇಗೌಡ: ಒಕ್ಕಲಿಗ ವೀರರ ಬಗ್ಗೆ ಮುನಿರತ್ನ ಸಿನಿಮಾ ನಿರ್ಮಾಣ

ಕುಮಾರಸ್ವಾಮಿಯಿಂದಲೇ ಸಿನಿಮಾ ಹುಟ್ಟಿಕೊಂಡಿದೆ: ಕುಮಾರಸ್ವಾಮಿಯ ಟೀಕೆ ಮಾಡುವಾಗ, ಮುನಿರತ್ನನಿಗೆ ಸಿನಿಮಾ ಮಾಡಲು ಅಶ್ವಥನಾರಯಣ್ ಮತ್ತು ಅಶೋಕ್ ಸಿನಿಮಾ ಹೇಳಿದ್ದಾರೆ ಎಂದಾಗಲೇ ನನಗೆ ಸಿನಿಮಾ ಆಲೋಚನೆ ಬಂದಿದೆ. ಕುಮಾರಸ್ವಾಮಿ ಅವರಿಂದಲೇ ಈ ಸಿನಿಮಾ ಹುಟ್ಟಿಕೊಂಡಿದೆ. ರಾಜಕಾರಣಿಯಾಗಿ ಸಿನಿಮಾ ಮಾಡ್ತೀನಿ ಅಂದ್ರೆ ದುಡ್ಡಿಗೋ, ಓಟಿಗೋ ಎನ್ನಬಹುದು. ನಾನು 25 ವರ್ಷದಿಂದ ಸಿನಿಮಾ ಮಾಡ್ತಿದ್ದೇನೆ. ನನ್ನ ಕೊನೆ ಸಿನಿಮಾ ಕುರುಕ್ಷೇತ್ರ, ಈ ಸಿನಿಮಾ ಮಹಾಭಾರತಕ್ಕೆ ಸಂಭಂಧಪಟ್ಟಿದ್ದು ಆಗಿತ್ತು. ಇನ್ನು ನನ್ನ ಪೋಸ್ಟರ್‌ನಲ್ಲಿ ಉರಿಗೌಡ ಮತ್ತು ನಂಜೇಗೌಡರ ಪೋಟೋಗಳು ಇವೆ. ಆದರೆ, ಅವುಗಳನ್ನು ಯಾರಿಗೂ ಹೋಲಿಕೆ ಮಾಡಬಾರುದು ಎಂದು ಮನವಿ ಮಾಡಿದರು.