ದರ್ಶನ್ ರ ಈಗಿನ ಸ್ಥಿತಿ ನೋಡಿದ್ರೆ ಸೊಗಸುಗಾರ ಸಿನಿಮಾದ ಈ ಹಾಡು ಈಗ ನೆನಪಿಗೆ ಬರುತ್ತೆ. ಯಾಕಂದ್ರೆ, ದರ್ಶನ್ ಜೈಲಲ್ಲಿ ಒಬ್ಬೊಂಟಿಯಾಗಿ ಬಿಸಿಲು ಬೆಳಕು ನೋಡದೇ ನೊಂದು ಬೇಯುತ್ತಿದ್ದಾರೆ. ಹೀಗಾಗೆ ನ್ಯಾಯಾಧೀಶರ ಮುಂದೆ ನಟ ದರ್ಶನ್ ‘ನನಗೊಂದಿಷ್ಟು ವಿಷ ಕೊಡಿ’ ಅಂತ ಕೇಳಿದ್ರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ (Darshan Thoogudepa) ನರಳಾಟ ದಿನೇ ದಿನೆ ಹೆಚ್ಚಾಗ್ತಿದೆ. ಈ ನೋವು ಕಂಡು ದಚ್ಚು ಆಪ್ತರೆಲ್ಲಾ ನೋವುಣ್ಣುತ್ತಿದ್ದಾರೆ. ದಾಸ ಇದರಿಂದ ಆದಷ್ಟು ಬೇಗ ಆಚೆ ಬರಲಿ ಅಂತ ಪಾರ್ಥನೆ ಮಾಡುತ್ತಿದ್ದಾರೆ. ಇದರ ಮಧ್ಯೆ ದರ್ಶನ್ ಜೈಲಲ್ಲಿದ್ದು, ದಾಸನ ಸುತ್ತ ಸರ್ಪಕೋಟೆ ಕಟ್ಟಿದ್ದಾರೆ ಅನ್ನೋ ಸುದ್ದಿಯೊಂದು ಪರಪ್ಪನನ ಅಗ್ರಹಾರದಿಂದ ಹೊರ ಬರ್ತಾ ಇದೆ. ಹಾಗಾದ್ರೆ ದಾಸನ ಈ ಕಣ್ಣೀರ ಕಥೆಯನ್ನೊಮ್ಮೆ ನೋಡೋಣ ಬನ್ನಿ...
ದರ್ಶನ್ ರ ಈಗಿನ ಸ್ಥಿತಿ ನೋಡಿದ್ರೆ ಸೊಗಸುಗಾರ ಸಿನಿಮಾದ ಈ ಹಾಡು ಈಗ ನೆನಪಿಗೆ ಬರುತ್ತೆ. ಯಾಕಂದ್ರೆ, ದರ್ಶನ್ ಜೈಲಲ್ಲಿ ಒಬ್ಬೊಂಟಿಯಾಗಿ ಬಿಸಿಲು ಬೆಳಕು ನೋಡದೇ ನೊಂದು ಬೇಯುತ್ತಿದ್ದಾರೆ. ಹೀಗಾಗೆ ನ್ಯಾಯಾಧೀಶರ ಮುಂದೆ ನಟ ದರ್ಶನ್ ಸೂರ್ಯನ ಬೆಳಕು ಬೀಳದೇ ನನ್ನ ಚರ್ಮವೆಲ್ಲಾ ಫಂಗಸ್ ಆಗಿದೆ. ನನಗೊಂದಿಷ್ಟು ವಿಷ ಕೊಡಿ ಅಂತ ಕೇಳಿದ್ರು. ಆದ್ರೆ ದಾಸನ ಈ ಮಾತು ಈಗ ದರ್ಶನ್ ಆಪ್ತ ಬಳಗವನ್ನೇ ನೋವಿಗೆ ದೂಡಿದೆ.
ಜೈಲಿನಲ್ಲಿ ನಟ ದರ್ಶನ್‌ಗೆ ಸರ್ಪ ಗಾವಲು; 5 ಜನ ಅಧಿಕಾರಿಗಳ ಕಣ್ಗಾವಲಿನಲ್ಲಿ ದಾಸ..!
VO : ಪರಪ್ಪನ ಅಗ್ರಹಾರ ಸೇರಿರೋ ದರ್ಶನ್ ಭದ್ರತೆಗೆ ಎಎಸ್ಪಿ ನೇತೃತ್ವದಲ್ಲಿ ಜೈಲರ್, ಮುಖ್ಯ ವಾರ್ಡನ್ ಹಾಗೂ ವಾರ್ಡನ್ ಸೇರಿ 15 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾಮಾನ್ಯವಾಗಿ 200 ಕೈದಿಗಳ ಭದ್ರತೆಗೆ ಒಂದಿಬ್ಬರನ್ನು ನೇಮಿಸಲಾಗುತ್ತೆ. ಆದ್ರೆ ದರ್ಶನ್ ಕೇಸಲ್ಲಿ ಮಾತ್ರ ಸುಪ್ರೀಂ ಕೋರ್ಟ್ ಎಚ್ಚರಿಕೆ ಹಿನ್ನೆಲೆಯಲ್ಲಿ ಪ್ರತಿದಿನ ಮೂರು ಪಾಳಿಯಲ್ಲಿ ಐವರಂತೆ ತಂಡ ಕಾವಲು ಕಾಯುತ್ತಿದ್ದಾರೆ. ಬೆಳಗ್ಗೆ 6.30 ರಿಂದ 2 ಗಂಟೆ, ಮಧ್ಯಾಹ್ನ 2 ರಿಂದ ರಾತ್ರಿ 10 ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6.30ರವರೆಗೆ ಹೀಗೆ ಮೂರು ಪಾಳಿಯದಲ್ಲಿ ಅಧಿಕಾರಿ-ಸಿಬ್ಬಂದಿ ಕೆಲಸ ಮಾಡುತ್ತಿದ್ದಾರಂತೆ. ಪ್ರತಿದಿನ ಸಂಜೆ ದರ್ಶನ್ ಬ್ಯಾರಕ್‌ಗೆ ಮುಖ್ಯ ಅಧೀಕ್ಷಕರು ಭೇಟಿ ಕೊಡುತ್ತಾರೆ. ಒಂದ್ ರೀತಿಯಲ್ಲಿ ದಾಸ ಸರ್ಪಗಾವಲಿನಲ್ಲಿದ್ದಂತಿದೆ.
ದಾಸನ ಕಣ್ಣೀರ ಕಥೆಗೆ ನಂದು ಬೆಂದ ಆಪ್ತ ಬಳಗ; ದರ್ಶನ್ ನೋವು ತೋರಿಸಲ್ಲ ಎಂದ ತರುಣ್..!
ದರ್ಶನ್ ಜೈಲಿನಲ್ಲಿ ನೊಂದು ಬೆಯುತ್ತಿದ್ದಾರೆ. ದರ್ಶನ್ರ ಕಠಿಣ ಜೈಲುವಾಸ ವಿಷ ಕೊಟ್ಟುಬಿಡಿ ಅಂತ ಹೇಳೋ ಮಟ್ಟಕ್ಕೆ ಬಂದಿದೆ. ಒಂಟಿಯಾಗಿರೋ ಜೈಲು ಜೀವನ ದಾಸನ ಮಾನಸಿಕ ಸ್ಥಿತಿಯನ್ನೇ ಕಟ್ಟಿ ಹಾಕಿದಂತಿದೆ. ಈ ಬಗ್ಗೆ ದರ್ಶನ್ ನೆಚ್ಚಿನ ನಿರ್ದೇಶಕ ತರುಣ್ ಸುಧೀರ್ ಮಾತನಾಡಿದ್ದು, ದರ್ಶನ್ ಎಷ್ಟು ನೊಂದು ಬೆಂದಿದ್ದಾರೆ ಅಂತ ಗೊತ್ತಾಗ್ತಿದೆ ಎಂದಿದ್ದಾರೆ.
ದರ್ಶನ್ ವಿಷ ವಿಚಾರಕ್ಕೆ ಬೇಸರಗೊಂಡ ರಮೇಶ್ ಅರವಿಂದ್..!
ನಟ ದರ್ಶನ್ ಗೆ ಜೈಲು ನರಕ ಆಗಿದೆ. ದರ್ಶನ್ ದೈಹಿಕವಾಗಿ ತುಂಬಾ ಸ್ಟ್ರಾಂಗ್. ಆದ್ರೆ ಮಾನಸಿಕವಾಗಿ ಅವರು ವೀಕ್ ಇದನ್ನ ದರ್ಶನ್ ಆಪ್ತ ಬಳಗದಲ್ಲಿ ಕಾಣಿಸಿಕೊಂಡ ನಟ ರಾಜವರ್ಧನ್ ಹೇಳಿದ್ರು. ದರ್ಶನ್ ರನ್ನ ಪ್ರೀತಿಸೋ ಕೋಟ್ಯಾಂತರ ಫ್ಯಾನ್ಸ್ ಇದ್ದಾರೆ. ಅವರಿಗಾಗಿ ಪ್ರತಿ ದಿನ ಪ್ರಾರ್ಥಿಸುತ್ತಾರೆ. ಆದ್ರೆ ಕಾನೂನಿನ ಮುಂದೆ ಎಲ್ಲರೂ ಒಂದೇ ಒಂದಿದ್ದು ಅನುಭವಿಸಬೇಕು ಅಂತ ಹಿರಿಯ ನಟ ರಮೇಶ್ ಅರವಿಂದ್ ಹೇಳಿದ್ದಾರೆ.
ಒಂದ್ ಕಡೆ ಫ್ಯಾನ್ಸ್ ದರ್ಶನ್ರ ಡೆವಿಲ್ ದರ್ಶನಕ್ಕೆ ದಿನ ಎಣಿಸುತ್ತಿದ್ದಾರೆ. ಈ ಕಡೆ ದಾಸ ಪರಪ್ಪನ ಅಗ್ರಹಾರ ಬ್ಯಾರಕ್ನಲ್ಲಿರೋ ಕಂಬಿ ಎಣಿಸುತ್ತಿದ್ದಾರೆ. ಮಂಧ್ಯಂತರ ಜಾಮೀನು ರದ್ದಾಗಿರೋ ದಾಸನಿಗೆ ರೆಗ್ಯೂಲರ್ ಜಾಮೀನು ಸಿಗೋ ಸಾಧ್ಯತೆಯೂ ಇದೆ. ಆದಷ್ಟು ಬೇಗ ದರ್ಶನ್ ಬರಲಿದ್ದಾರೆ ಅನ್ನೋ ಆಶಾ ಭಾವನೆಯಲ್ಲಿ ದಾಸನ ಹುಚ್ಚು ಅಭಿಮಾನಿಗಳು ಕಾಯ್ತಾ ಇದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ…