ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ ನಾಗ್: ಚಿತ್ರರಂಗದ ನೆನಪಿನ ಬುತ್ತಿ ಬಿಚ್ಚಿಟ್ಟ ಖ್ಯಾತ ನಟ

ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಅನಂತ್‌ ನಾಗ್: ಚಿತ್ರರಂಗದ ನೆನಪಿನ ಬುತ್ತಿ ಬಿಚ್ಚಿಟ್ಟ ಖ್ಯಾತ ನಟ

Published : Aug 14, 2023, 11:21 PM IST

ಚಿತ್ರರಂಗದಲ್ಲಿ ಐದು ದಶಕಗಳನ್ನು ಕಳೆದ ಕನ್ನಡದ ಮೇರು ನಟ ಅನಂತ್‌ನಾಗ್‌ರಿಗೆ ಕನ್ನಡದ ಪ್ರತಿಷ್ಠಿತ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ ಗೌರವ ಸಮರ್ಪಿಸಿದೆ. ಅನಂತ್‌ನಾಗ್‌ ಮತ್ತು ಗಾಯತ್ರಿ ಅನಂತ್‌ನಾಗ್‌ ದಂಪತಿಗೆ ಸನ್ಮಾನ ನಡೆಸುವ ಮೂಲಕ ಅಪರೂಪದ ದಂಪತಿಗೆ ಕೃತಜ್ಞತೆ ಸಲ್ಲಿಸಿದೆ. 

ಬೆಂಗಳೂರು (ಆ.14): ಚಿತ್ರರಂಗದಲ್ಲಿ ಐದು ದಶಕಗಳನ್ನು ಕಳೆದ ಕನ್ನಡದ ಮೇರು ನಟ ಅನಂತ್‌ನಾಗ್‌ರಿಗೆ ಕನ್ನಡದ ಪ್ರತಿಷ್ಠಿತ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿ ಗೌರವ ಸಮರ್ಪಿಸಿದೆ. ಅನಂತ್‌ನಾಗ್‌ ಮತ್ತು ಗಾಯತ್ರಿ ಅನಂತ್‌ನಾಗ್‌ ದಂಪತಿಗೆ ಸನ್ಮಾನ ನಡೆಸುವ ಮೂಲಕ ಅಪರೂಪದ ದಂಪತಿಗೆ ಕೃತಜ್ಞತೆ ಸಲ್ಲಿಸಿದೆ. ಭಾವಪೂರ್ಣವಾಗಿ ನಡೆದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಖ್ಯಾತ ನಟ ರಮೇಶ್‌ ಅರವಿಂದ್‌ ಅವರು ಅನಂತ್‌ನಾಗ್‌ ಅವರ ಸಂದರ್ಶನ ನಡೆಸಿದರು. ವಿಭಿನ್ನ ಪ್ರಶ್ನೆಗಳ ಮೂಲಕ ಅನಂತ್‌ನಾಗ್‌ರ ಆಂತರ್ಯವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದರು. 

ಅನಂತ್‌ನಾಗ್‌ರನ್ನು ಹಾಡಿಸುವ ಮೂಲಕ ಕಾರ್ಯಕ್ರಮಕ್ಕೆ ವಿಶಿಷ್ಟಮೆರುಗನ್ನು ತಂದುಕೊಟ್ಟರು. ಸಂದರ್ಶನದಲ್ಲಿ ಮಾತನಾಡುತ್ತಾ ಅನಂತ್‌ನಾಗ್‌, ಅಧ್ಯಾತ್ಮಿಕ ವಾತಾವರಣದಲ್ಲಿ ಬಾಲ್ಯವನ್ನು ಕಳೆದೆ. ಅಲ್ಲಿಯೇ ಅಪರೂಪದ ವ್ಯಕ್ತಿಗಳನ್ನು ಇಮಿಟೇಟ್‌ ಮಾಡುತ್ತಿದ್ದೆ, ಅವರ ಮಿಮಿಕ್ರಿ ಮಾಡುತ್ತಿದ್ದೆ. ಮುಂದೆ ಮುಂಬೈಯಲ್ಲಿ ನಿಜ ಜೀವನಕ್ಕೆ ಎದುರುಗೊಂಡೆ. ಕಾಲೇಜಿನಲ್ಲಿ ಸರಿಯಾಗಿ ಓದದೆ ಟೀಕೆಗೆ ಒಳಗಾದೆ. ಆಗ ನನಗೆ ನಾಟಕಗಳು, ಪಾತ್ರಗಳು ಆನಂದಕೊಟ್ಟವು. ಅಲ್ಲಿಂದ ಇಲ್ಲಿಯವರೆಗೆ 50 ವರ್ಷ ಸಂದಿದೆ. ನಾನು ಎಲ್ಲವನ್ನೂ ಮಾಡಿದೆ ಎಂದರೆ ಅಹಂಕಾರ ಆಗುತ್ತದೆ. 

ಯಾವುದೇ ಒಂದು ಶಕ್ತಿ ನನ್ನಿಂದ ಇದನ್ನೆಲ್ಲಾ ಮಾಡಿಸಿತು ಎಂದು ಹೇಳುವುದೇ ಸರಿ. ನನ್ನ ಈ ಪ್ರಯಾಣದಲ್ಲಿ ಚಿತ್ರರಂಗದ ಮಂದಿ ಮತ್ತು ಪತ್ರಕರ್ತರೇ ನನ್ನ ಸ್ನೇಹಿತರು, ಸರಿದಾರಿ ತೋರಿ ಮುನ್ನಡೆಸಿದವರು ಎಂದರು. ರಾಘವೇಂದ್ರ ಚಿತ್ರವಾಣಿಯ ಕುರಿತು ಮಾತನಾಡಿದ ಅವರು, ನನ್ನ ಮತ್ತು ರಾಘವೇಂದ್ರ ಚಿತ್ರವಾಣಿ ಸಂಬಂಧ ಸುದೀರ್ಘವಾದದ್ದು. ಡಿವಿ ಸುಧೀಂದ್ರ ನನ್ನ ಈ ಪ್ರಯಾಣದ ಆರಂಭ ಕಾಲದಲ್ಲಿ ಇದ್ದರು. ಅವರ ನಿರ್ಮಾಣದ ಸಿನಿಮಾದಲ್ಲಿಯೂ ನಟಿಸಿದ್ದೇನೆ ಎಂದು ಹೇಳಿದರು. ಸಂಸ್ಥೆಯ ಮುಖ್ಯಸ್ಥ ಸುಧೀಂದ್ರ ವೆಂಕಟೇಶ್‌, ಸುನಿಲ್‌ ಸುಧೀಂದ್ರ, ಡಿ.ಜಿ. ವಾಸುದೇವ ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
Read more