'ವೇದ'ನ ಗೆಲುವು ಮತ್ತೆ ಒಂದಾದ ಶಿವಣ್ಣ-ಹರ್ಷ: ಮತ್ತೆ ಡೈರೆಕ್ಷನ್ ಮಾಡಲು ಹೇಳಿದ ಸೆಂಚುರಿ ಸ್ಟಾರ್

'ವೇದ'ನ ಗೆಲುವು ಮತ್ತೆ ಒಂದಾದ ಶಿವಣ್ಣ-ಹರ್ಷ: ಮತ್ತೆ ಡೈರೆಕ್ಷನ್ ಮಾಡಲು ಹೇಳಿದ ಸೆಂಚುರಿ ಸ್ಟಾರ್

Published : Jan 04, 2023, 11:35 AM IST

ಒಂದು ಸಿನಿಮಾ ಹಿಟ್ ಆದ್ರೆ ಅದೇ ನಿರ್ದೇಶಕನ ಜೊತೆ ಮತ್ತೊಂದು ಸಿನಿಮಾ ಮಾಡೋದಕ್ಕೆ ಹೀರೋಗಳು ಹೆಚ್ಚು ಮುನ್ನುಗ್ಗುತ್ತಾರೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ಹಾಗೆ ಮಾಡಿದ್ದಾರೆ. ವೇದ ಸಿನಿಮಾದ ದೊಡ್ಡ ಗೆಲುವು ನಿರ್ದೇಶಕ ಎ. ಹರ್ಷಗೆ ಶಿವಣ್ಣನಿಗಾಗಿ ಮತ್ತೊಂದು ಸಿನಿಮಾ ಮಾಡೋ ಅವಕಾಶ ಸಿಕ್ಕಿದೆ.

ಒಂದು ಸಿನಿಮಾ ಹಿಟ್ ಆದ್ರೆ ಅದೇ ನಿರ್ದೇಶಕನ ಜೊತೆ ಮತ್ತೊಂದು ಸಿನಿಮಾ ಮಾಡೋದಕ್ಕೆ ಹೀರೋಗಳು ಹೆಚ್ಚು ಮುನ್ನುಗ್ಗುತ್ತಾರೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ಹಾಗೆ ಮಾಡಿದ್ದಾರೆ. ವೇದ ಸಿನಿಮಾದ ದೊಡ್ಡ ಗೆಲುವು ನಿರ್ದೇಶಕ ಎ. ಹರ್ಷಗೆ ಶಿವಣ್ಣನಿಗಾಗಿ ಮತ್ತೊಂದು ಸಿನಿಮಾ ಮಾಡೋ ಅವಕಾಶ ಸಿಕ್ಕಿದೆ. ಈ ಬಗ್ಗೆ ಎಕ್ಸ್‌ಕ್ಲೂಸಿವ್ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಬೆಳ್ಳಿತೆರೆ ಮೇಲೆ ವೇದನ ಸಕ್ಸಸ್ಫುಲ್ ಜರ್ನಿಯನ್ನ ಕಂಟಿನ್ಯೂ ಮಾಡಿದ್ದಾರೆ. ವೇದನ ಎಮೋಷನಲ್ ಅಬ್ಬರಕ್ಕೆ ಪ್ರೇಕ್ಷಕ ಗಣ ಮನಸೋ ಇಚ್ಚೆ ಮನಸೋತು ಚಿತ್ರಮಂದಿರಗಳು ಹೌಸ್ ಫುಲ್ ಆಗುವಂತೆ ಮಾಡುತ್ತಿದ್ದಾರೆ. 

ಈ ಸಕ್ಸಸ್ ಈಗ ಶಿವಣ್ಣ ಮತ್ತು ಹರ್ಷನ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ಮಾಡೋಕೆ ಹರದಾರಿ ಮಾಡಿಕೊಟ್ಟಿದೆ. ನಿರ್ದೇಶಕ ಎ.ಹರ್ಷ ಸಿನಿಮಾ ಮೇಕಿಂಗ್ ಸ್ಟೈಲ್ ಶಿವಣ್ಣನ್ನ ಭಜರಂಗಿ ಸಿನಿಮಾದಲ್ಲೇ ಇಂಪ್ರೆಸ್ ಮಾಡಿತ್ತು. ಹರ್ಷನ ಡೈರೆಕ್ಷನ್ ಆಫ್ ಸ್ಟೈಲ್ಅನ್ನ ಕೊಂಡಾಡಿದ್ದ ಸೆಂಚುರಿ ಸ್ಟಾರ್ ವಜ್ರಕಾಯ ಸಿನಿಮಾದಲ್ಲಿ ಮತ್ತೆ ನಿರ್ದೇಶನಕ್ಕೆ ಅವಕಾಶ ಕೊಟ್ರು. ಆದ್ರೆ ವಜ್ರಕಾಯ ಹೇಳಿಕೊಳ್ಳುವಷ್ಟು ಗೆಲುವು ತಂದುಕೊಡ್ಲಿಲ್ಲ. ಆದರೆ ಹರ್ಷ ಶಿವಣ್ಣನ ಜೊತೆ ಭಜರಂಗಿ-2 ಮಾಡಿ ಮತ್ತೆ ಟ್ರ್ಯಾಕ್‌ಗೆ ಮರಳಿದ್ರು. ಅಷ್ಟರಲ್ಲೇ ಅಪ್ಪು ನಿಧನ ಹೊಂದಿದ್ದು ಭಜರಂಗಿ-2 ಸಿನಿಮಾ ಕಣ್ಮರೆಯಾಗುವಂತೆ ಆಯ್ತು. 

ಒಂದು ಕಡೆ ಅಪ್ಪು ಇಲ್ಲವಾದ ಮೇಲೆ ಶಿವಣ್ಣ ಅಪ್ಪು ಅನುಪಸ್ಥಿತಿಯಲ್ಲೇ ತಮ್ಮ ಕುಟುಂಬದ ಗೀತಾ ಪಿಕ್ಚರ್ಸ್ ಬ್ಯಾನರ್ ಶುರುಮಾಡಿದ್ರು. ಆ ಬ್ಯಾನರ್‌ನ ಮೊದಲ ಸಿನಿಮಾ ಯಾರು ಡೈರೆಕ್ಷನ್ ಮಾಡೋದು ಅಂತ ಹುಡುಕುವಾಗ್ಲೆ ಶಿವಣ್ಣನಿಗಾಗಿ ನಿರ್ದೇಶಕ ವೇದ ಅನ್ನೋ ಅದ್ಧೂರಿ ಎಮೋಷಲ್ ಸ್ಟೋರಿಯನ್ನ ರೆಡಿ ಮಾಡಿದ್ರು. ಕೊನೆಗೆ ಇದೇ ಬೆಸ್ಟ್ ಅಂತ ಶಿವಣ್ಣ ವೇದ ಸಿನಿಮಾ ಮಾಡಿ ಗೆದ್ದಿದ್ದಾರೆ. ಈ ಗೆಲುವು ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್‌ಗೆ ಖುಷಿ ಕೊಟ್ಟಿದ್ದು ಈಗ ಮತ್ತೆ ಅದೇ ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಎ. ಹರ್ಷ ನಿರ್ದೇಶನದಲ್ಲಿ ಹೊಸ ಸಿನಿಮಾ ಮಾಡೋ ಬಗ್ಗೆ ಮಾತುಕತೆ ನಡೆದಿದೆ. ಅಲ್ಲಿ ಆ ಸಿನಿಮಾ ಏನಾದ್ರು ಶುರುವಾದ್ರೆ ಶಿವರಾಜ್ ಕುಮಾರ್ ಹಾಗು ನಿರ್ದೇಶಕ ಎ. ಹರ್ಷ ಐದನೇ ಬಾರಿ ಒಂದಾದ ಹಾಗಾಗುತ್ತೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
Read more