ಜಂಟಲ್‌ಮ್ಯಾನ್ ಅಪ್ಪು:  ರಮ್ಯಾ ಕನಸನ್ನು ನನಸು ಮಾಡ್ಲೇ ಇಲ್ಲ!

ಜಂಟಲ್‌ಮ್ಯಾನ್ ಅಪ್ಪು: ರಮ್ಯಾ ಕನಸನ್ನು ನನಸು ಮಾಡ್ಲೇ ಇಲ್ಲ!

Published : Oct 31, 2022, 08:33 PM IST

ಅಪ್ಪು ಜೊತೆ 'ಆಕಾಶ್', 'ಅಭಿ', 'ಅರಸು' ಸಿನಿಮಾಗಳಲ್ಲಿ ಮೋಹಕ ತಾರೆ ರಮ್ಯಾ ನಟಿಸಿದ್ದರು. ನಾನು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವಾಗ ನಾವಿಬ್ಬರೂ ಒಟ್ಟಿಗೆ ನಟಿಸೋಣ ಎಂದು ಅಪ್ಪು ರಮ್ಯಾ ಅವರಿಗೆ ಹೇಳಿದ್ದರಂತೆ.

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ ಒಂದು ವರ್ಷವಾಗಿದೆ. ಬರೀ ಅವರ ಸಮಾಧಿ ಬಳಿ ಅಲ್ಲದೇ ರಾಜ್ಯಾದ್ಯಂತ ಅವರ ಒಂದನೇ ವರ್ಷದ ಪುಣ್ಯ ತಿಥಿ  ನಡೆದಿದೆ. ಈ ವೇಳೆ ಬರೀ ಚಿತ್ರರಂಗವಷ್ಟೇ ಅಲ್ಲದೇ, ವಿವಿಧ ಕ್ಷೇತ್ರದ ಗಣ್ಯರು ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ವಿಶೇಷವಾಗಿ ಅಪ್ಪು ಜೊತೆ 'ಆಕಾಶ್', 'ಅಭಿ', 'ಅರಸು' ಸಿನಿಮಾಗಳಲ್ಲಿ ಮೋಹಕ ತಾರೆ ರಮ್ಯಾ ನಟಿಸಿದ್ದರು. ನಾನು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವಾಗ ನಾವಿಬ್ಬರೂ ಒಟ್ಟಿಗೆ ನಟಿಸೋಣ ಎಂದು ಅಪ್ಪು ರಮ್ಯಾ ಅವರಿಗೆ ಹೇಳಿದ್ದರಂತೆ. ಆ ಕನಸನ್ನು ಪುನೀತ್ ನನಸು ಮಾಡ್ಲೇ ಇಲ್ಲ!

ಇನ್ನು ಪುನೀತ್ ರಾಜ್‌ಕುಮಾರ್ ಜೊತೆ ನಾನು ಸಾಕಷ್ಟು ವಿಷಯ ಚರ್ಚೆ ಮಾಡಿದ್ದೆ. ಅಪ್ಪು ಡೈರೆಕ್ಷನ್ ಮಾಡಿದ್ರೆ ನಾನೇ ಹೀರೋಯಿನ್ ಅಂತ ಹೇಳಿದ್ದರು. ಶಿವಣ್ಣ ಅವರ ಹಾಡಿಗೆ ನಾನು ಕೊರಿಯೋಗ್ರಫಿ ಮಾಡಬೇಕು ಎಂದು ಪುನೀತ್ ಆಸೆಪಟ್ಟಿದ್ದರು ಎಂದು ರಮ್ಯಾ ಹೇಳಿದ್ದಾರೆ. ಜೊತೆಗೆ ಇತ್ತೀಚೆಗಷ್ಟೇ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಅಪ್ಪು ಬಗ್ಗೆ ರಮ್ಯಾ ಕೆಲವೊಂದು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಶೂಟಿಂಗ್ ವೇಳೆ ಅಪ್ಪು ನಡೆದುಕೊಳ್ಳುತ್ತಿದ್ದ ರೀತಿ, ವ್ಯಕ್ತಿತ್ವದ ಕುರಿತು ಅಪ್ಪು ಅವರೇ ನನಗೆ ಡಾನ್ಸ್ ಹೇಳಿಕೊಡುತ್ತಿದ್ದರು. ನನಗೆ ಡ್ಯಾನ್ಸ್ ಸ್ಟೆಪ್ಸ್ ಬರುತ್ತಿಲ್ಲ ಅಂದಾಗ ಮಾಸ್ಟರ್ ಬಳಿ ಹೋಗಿ ಕೆಲವು ಸ್ಟೆಪ್ಸ್ ಬದಲಾಯಿಸುತ್ತಿದ್ದರು. ಇವತ್ತು ಈ ವೇದಿಕೆ ಮೇಲೆ‌ ಇದ್ದೇನೆ ಅಂದ್ರೆ ಅದಕ್ಕೆ ಅಣ್ಣಾವ್ರ ಕುಟುಂಬವೇ ಕಾರಣ ಅಂತಾ ರಮ್ಯಾ ತಿಳಿಸಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more