
ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದು, ಸ್ಫೋಟಕ ರಹಸ್ಯಗಳು ಒಂದೊಂದೇ ಹೊರ ಬರ್ತಾ ಇವೆ. ಈ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಜೊತೆ ರಚಿತಾ ರಾಮ್ ಇರೋ ಫೋಟೊಗಳು ಪೊಲೀಸರ ಕೈ ಸೇರಿವೆ.
ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಇತ್ತೀಚಿಗೆ ಕೊಲೆಯಾದ ರೌಡಿ ಬಿಕ್ಲು ಶಿವ ಮರ್ಡರ್ ಕೇಸ್ ಆರೋಪಿ ಜೊತೆಗೆ ರಚಿತಾ ಇರುವ ಫೋಟೋಸ್ ವೈರಲ್ ಆಗಿವೆ. ಅಷ್ಟಕ್ಕೂ ರೌಡಿಗಳ ಜೊತೆಗೆ ಬುಲ್ ಬುಲ್ಗೇನು ನಂಟು..? ಏನಿದು ರಚಿರಾ ರಗಳೆ.. ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.
ಕೆಲ ದಿನಗಳ ಹಿಂದೆ ಸಂಜು ವೆಡ್ಸ್ ಗೀತಾ-2 ಟೀಂ ರಚಿತಾ ರಾಮ್ ಮೇಲೆ ಪ್ರಚಾರಕ್ಕೆ ಬರ್ತಿಲ್ಲ ಅನ್ನೋ ಆರೋಪ ಮಾಡಿದ್ರು. ಅದರ ಬೆನ್ನಲ್ಲೇ ನಿರ್ಮಾಪಕಿ ಒಬ್ರು ರಚಿತಾ ಹಣ ಪಡೆದು ಸಿನಿಮಾ ಮಾಡದೇ ಮೋಸ ಮಾಡಿದ್ದಾರೆ ಅಂತ ದೂರು ನೀಡಿದ್ರು. ಈಗ ನೋಡಿದ್ರೆ ರಚ್ಚು ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ ತನಿಖೆಯನ್ನ ಪೊಲೀಸರು ಚುರುಕುಗೊಳಿಸಿದ್ದು, ಸ್ಫೋಟಕ ರಹಸ್ಯಗಳು ಒಂದೊಂದೇ ಹೊರ ಬರ್ತಾ ಇವೆ. ಈ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಜೊತೆ ರಚಿತಾ ರಾಮ್ ಇರೋ ಫೋಟೊಗಳು ಪೊಲೀಸರ ಕೈ ಸೇರಿವೆ.
ಹೌದು ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜಗ್ಗ ಡಿಂಪಲ್ ಕ್ವೀನ್‌ಗೆ ಸೀರೆ ಹಾಗೂ ಗೋಲ್ಡ್ ಗಿಫ್ಟ್ ಕೊಟ್ಟಿರುವ ಫೋಟೋ ವೈರಲ್ಆಗಿವೆ. ರವಿ ಬೋಪಣ್ಣ ಸಿನಿಮಾ ಶೂಟಿಂಗ್ವೇಳೆ ಜಗ್ಗ ನಟಿಗೆ ಈ ಉಡುಗೊರೆ ಕೊಟ್ಟಿದ್ದಾನೆ ಎನ್ನಲಾಗ್ತಾ ಇದೆ ನೀಡಿದ್ದಾನೆ. ಈ ಫೋಟೋದಲ್ಲಿ ಹಿರಿಯ ನಟ ರವಿಚಂದ್ರನ್ಕೂಡ ಇರೋದನ್ನ ನೋಡಬಹುದು.
ಕೊಲೆ ಆರೋಪಿ ಜಗ್ಗ ಜಸ್ಟ್ ರಚಿತಾ ಜೊತೆ ಮಾತ್ರ ಅಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಜೊತೆ ಇರುವ ಫೋಟೋಸ್ ಕೂಡ ಪೊಲೀಸರ ಕೈ ಸೇರಿವೆ. ಅಲ್ಲಿಗೆ ಈ ತಾರೆಯರಿಗೂ ಕೊಲೆ ಆರೋಪಿಗೂ ಇರುವ ನಂಟು ಏನು ಅನ್ನೋದನ್ನ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.
ರೌಡಿಸಂ ಹಿನ್ನೆಲೆಯುಳ್ಳ ಅನೇಕರು ಸಿನಿಮಾ ಫೈನಾನ್ಸ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಅನ್ನೋ ಮಾತುಗಳು ಬಹಳ ಹಿಂದಿನಿಂದಲೂ ಕೇಳಿ ಬರ್ತಾ ಇವೆ. ಸದ್ಯ ಕೊಲೆ ಆರೋಪಿಯೊಬ್ಬನ ಜೊತೆಗೆ ಸ್ಯಾಂಡಲ್ವುಡ್ ತಾರೆಯರು ಇರೋದನ್ನ ಕಂಡು ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಕೊಲೆ ಆರೋಪಿ ಜಗ್ಗನಿಗೂ ಈ ತಾರೆಯರಿಗೂ ನಂಟೇನು ಅನ್ನೋದು ತನಿಖೆಯಿಂದ ಬಯಲಾಗಲಿದೆ. ಆದ್ರೆ ಇಂಥವರ ಸಖ್ಯ ಬೆಳೆಸಿದ್ದು ಏಕೆ ಅನ್ನೋ ಫ್ಯಾನ್ಸ್ ಪ್ರಶ್ನೆಗೆ ಉತ್ತರವನ್ನ ಈ ತಾರೆಯರೇ ಕೊಡಬೇಕಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..