ಸ್ಟಾರ್ ಆದ ಮೇಲೆ ಅನೇಕ ಯುವ ಕಲಾವಿದರನ್ನ ಬೆಂಬಲಿಸ್ತಾ ಬಂದಿದ್ರು. ಹಲವು ಹೊಸ ನಟರ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿ ದೊಡ್ಡ ಸಪೋರ್ಟ್ ನೀಡಿದ್ರು. ಹೊಸ ನಟರ ಟೀಸರ್, ಟ್ರೈಲರ್, ಆಡಿಯೋ ಲಾಂಚ್ ಇವೆಂಟ್ಗಳಿಗೆ ಬಂದು ಬೆಂಬಲ ಕೊಡ್ತಾ ಇದ್ರು. ಅನೇಕ ಯುವನಟರಿಗೆ ದಾಸನ ಬೆಂಬಲ ದೊಡ್ಡ ಬಲ ತಂದುಕೊಡ್ತಾ ಇತ್ತು.
ಪರಪ್ಪನ ಅಗ್ರಹಾರದಲ್ಲಿ 'ದಾಸ'ನ ಪರದಾಟ ಮುಂದುವರೆದಿದೆ. ನಟ ದರ್ಶನ್ (Darshan Thoogudeepa) ಜೈಲಿನಲ್ಲಿ ಪಡ್ತಾ ಇರೋ ಸಂಕಷ್ಟಗಳ ಕಥೆ ಕೇಳಿದ ಅವರ ಆಪ್ತರು ಹೇಗಿದ್ದ ದಾಸ ಹೇಗಾದ ಅಂತ ವ್ಯಥೆ ಪಡ್ತಾ ಇದ್ದಾರೆ. ದರ್ಶನ್ ಪ್ರತಿ ವರ್ಷ ತಪ್ಪದೇ ಇಫ್ತಾರ್ ಪಾರ್ಟಿಗೆ ಹೋಗ್ತಾ ಇದ್ದಿದ್ದು, ಶಾಸಕ ಜಮೀರ್ ಅಹಮದ್ ಮನೆಗೆ. ಅಂತಹಾ ಜಮೀರ್ ಪುತ್ರ ನಟ ಝೈದ್ ಖಾನ್ ದರ್ಶನ್ ಇಂದಿನ ಸ್ಥಿತಿ ಬಗ್ಗೆ ಹೇಳಿದ್ದೇನು..? ನೋಡೋಣ ಬನ್ನಿ.
ಮುಂದೂಡಿಕೆಯಾಯ್ತು ಕೇಸ್.. ದಾಸನಿಗಿಲ್ಲ ರಿಲೀಫ್..!
ಯೆಸ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ದೋಷಾರೋಪಣೆ ನಿಗದಿ ಕುರಿತ ವಿಚಾರಣೆಯನ್ನ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ಸೆಪ್ಟೆಂಬರ್ 25ಕ್ಕೆ ಮುಂದೂಡಿದೆ. ಶುಕ್ರವಾರ ಪವಿತ್ರಾ ಗೌಡ, ದರ್ಶನ್ ಮತ್ತಿತರ ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪವಿತ್ರಾ ಗೌಡ ಪರ ವಕೀಲರು ತಮ್ಮ ಕಕ್ಷಿದಾರರ ಪರ ದೋಷಾರೋಪಣೆ ನಿಗದಿಗೆ ಮನವಿ ಸಲ್ಲಿಸಿದ್ರು. .ಆದರೆ ಆರೋಪಿಗಳಾದ ಕಾರ್ತಿಕ್ ಹಾಗೂ ಕೇಶವಮೂರ್ತಿ ಗೈರು ಹಾಜರಾಗಿದ್ದು ನ್ಯಾಯಾಲಯ ವಿಚಾರಣೆಯನ್ನ ಮುಂದೂಡಿತು.
ಇನ್ನೂ ಹಾಸಿಗೆ , ದಿಂಬಿನ ಬೇಡಿಕೆ ವಿಚಾರವಾಗಿ ಆದೇಶ ಹೊರಬಂದು ತನಗೆ ರಿಲೀಫ್ ಸಿಗುತ್ತೆ ಅಂದುಕೊಂಡಿದ್ದ ದರ್ಶನ್ಗ ನಿರಾಸೆ ಆಗಿದೆ. ಅಸಲಿಗೆ ಕೋರ್ಟ್ನಿಂದ ಸೌಲತ್ತು ನೀಡುವಂತೆ ಆದೇಶ ಕೊಟ್ಟರೂ ಜೈಲು ಅಧಿಕಾರಿಗಳು ಸೌಲತ್ತು ಕೊಡ್ತಾ ಇಲ್ಲ ಅಂತ ದಾಸನ ಪರ ವಕೀಲರು ವಾದ ಮಂಡಿಸಿದ್ದಾರೆ. ಪಕ್ಕದ ಸೆಲ್ನಲ್ಲಿರೋ ಪಾಕಿಸ್ತಾನಿ ಟೆರೆರಿಸ್ಟ್ಗಳಿಗೆ ಕೊಡುವಷ್ಟು ಸೌಲಭ್ಯವೂ ದರ್ಶನ್ಗೆ ಕೊಡ್ತಿಲ್ಲ ಅಂತ ಆರೋಪ ಮಾಡಿದ್ದಾರೆ. ಆದ್ರೆ ಇದಕ್ಕೆ ವಿವರಣೆ ಕೊಟ್ಟಿರೋ ಜೈಲು ಅಧಿಕಾರಿಗಳು ಜೈಲಿನ ಮ್ಯಾನ್ಯುಯಲ್ ಪ್ರಕಾರ ಸೌಲಭ್ಯ ಒದಗಿಸಲಾಗ್ತಾ ಇದೆ ಅಂತ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.
ದಾಸನ ಪರದಾಟದ ಕಥೆ ಕೇಳಿ ಆಪ್ತರ ಬೇಸರ..!
ಹೌದು ದರ್ಶನ್ ಹೊರಗೆ ರಾಯಲ್ ಆಗಿ ಬದುಕ್ತಾ ಇದ್ದಿದ್ದನ್ನ ನೋಡಿದವರಿಗೆ ಈಗ ದರ್ಶನ್ ಇರೋ ಸ್ಥಿತಿಯನ್ನ ಒಪ್ಪಿಕೊಳ್ಳೋದು ಕಷ್ಟ. ದರ್ಶನ್ ಸಚಿವ ಜಮೀರ್ ಅಹ್ಮದ್ ಪಾಲಿಗೆ ಅದೆಷ್ಟು ಆಪ್ತರು ಅನ್ನೋದು ಗೊತ್ತೇ ಇದೆ. ಜಮೀರ್ ಮನೆಯಲ್ಲಿ ನಡೆವ ಇಫ್ತಾರ್ ಕೂಟಕ್ಕೆ ದರ್ಶನ್ ಪ್ರತಿವರ್ಷ ಮಿಸ್ ಇಲ್ಲದೇ ಹಾಜರಾಗ್ತಾ ಇದ್ರು.
ಜಮೀರ್ ಪುತ್ರ ಝೈದ್ ಖಾನ್ ಬನಾರಸ್ ಸಿನಿಮಾ ಮೂಲಕ ನಾಯಕನ ನಟನಾದಾಗ ಅದನ್ನ ನೋಡಿ, ದರ್ಶನ್ ಬೆನ್ನು ತಟ್ಟಿದ್ರು. ಜೈದ್ ಸಪೋರ್ಟ್ಗೆ ನಿಂತುಕೊಂಡಿದ್ರು. ಈಗ ಝೈದ್ ನಟನೆಯ ಕಲ್ಟ್ ಸಿನಿಮಾ ರಿಲೀಸ್ಗೆ ಸಜ್ಜಾಗ್ತಾ ಇದೆ. ಆದ್ರೆ ಈಗ ಝೈದ್ ಗೆ ಸಪೋರ್ಟ್ ಮಾಡೋ ಸ್ಥಿತಿಯಲ್ಲಿ ದರ್ಶನ್ ಇಲ್ಲ. ಖುದ್ದು ತನ್ನದೇ ದಿ ಡೆವಿಲ್ ಸಿನಿಮಾದ ಪ್ರಚಾರಕ್ಕೂ ದರ್ಶನ್ಗೆ ಬರಲಾಗ್ತಾ ಇಲ್ಲ.
ದರ್ಶನ್, ಸ್ಟಾರ್ ಆದ ಮೇಲೆ ಅನೇಕ ಯುವ ಕಲಾವಿದರನ್ನ ಬೆಂಬಲಿಸ್ತಾ ಬಂದಿದ್ರು. ಹಲವು ಹೊಸ ನಟರ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಿ ದೊಡ್ಡ ಸಪೋರ್ಟ್ ನೀಡಿದ್ರು. ಹೊಸ ನಟರ ಟೀಸರ್, ಟ್ರೈಲರ್, ಆಡಿಯೋ ಲಾಂಚ್ ಇವೆಂಟ್ಗಳಿಗೆ ಬಂದು ಬೆಂಬಲ ಕೊಡ್ತಾ ಇದ್ರು. ಅನೇಕ ಯುವನಟರಿಗೆ ದಾಸನ ಬೆಂಬಲ ದೊಡ್ಡ ಬಲ ತಂದುಕೊಡ್ತಾ ಇತ್ತು.
ಅಂತೆಯೇ ದರ್ಶನ್ರಿಂದ ಇಂಥಾ ಸಹಾಯ ಪಡೆದವರು ಇವತ್ತು ದಾಸನ ಪರಿಸ್ಥಿತಿ ಕಂಡು ಬೇಸರ ಪಡ್ತಾ ಇದ್ದಾರೆ. ಚಕ್ರವರ್ತಿಯಂತೆ ಮೆರೀತಿದ್ದ ದರ್ಶನ್ ಜೈಲಿನಲ್ಲಿ ದಿಂಬು, ಹಾಸಿಗೆಗೆ ಪರದಾಡ್ತಾ ಇರೋದು ಸಹಜವಾಗೇ ಅವರ ಆಪ್ತರಿಗೆಲ್ಲಾ ನೋವು ತಂದಿದೆ.