ಕಾಂತಾರ ಬರೆಯಿತು ಹೊಸ ದಾಖಲೆ; ಏನದು ರಿಷಬ್ ಶೆಟ್ಟಿ ಭಾರೀ ಸಿನಿಮಾದ ಆ ಹೊಸಭಾಷ್ಯ?

ಕಾಂತಾರ ಬರೆಯಿತು ಹೊಸ ದಾಖಲೆ; ಏನದು ರಿಷಬ್ ಶೆಟ್ಟಿ ಭಾರೀ ಸಿನಿಮಾದ ಆ ಹೊಸಭಾಷ್ಯ?

Published : Sep 14, 2025, 03:00 PM IST

ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್​ 1 ಸಿನಿಮಾದ ಮೇಲಿನ ಬೇಡಿಗೆ ಎಷ್ಟಿದೆ ಅಂದ್ರೆ ‘ಕಾಂತಾರ ಚಾಪ್ಟರ್ 1’ ಒಟಿಟಿ ಹಕ್ಕಿನಿಂದ ಬಂದ ಹಣದಲ್ಲೇ ಮತ್ತೊಂದು ‘ಕೆಜಿಎಫ್ 2’ ನಿರ್ಮಿಸಬಹುದು. ಈ ಸಿನಿಮಾದ ಎಲ್ಲಾ ಭಾಷೆಗಳ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಮ್​ಗೆ ಮಾರಾಟವಾಗಿದೆ.

ಕಾಂತಾರ ಚಾಪ್ಟರ್​ 1 (Kantara Prequel) ರಿಲೀಸ್​ಗೆ ಕೌಂಟ್ ಡೌನ್ ಸ್ಟಾರ್ಸ್ ಆಗಿದೆ. ಈ ಸಿನಿಮಾ ಟಿಕೆಟ್ ಬುಕ್ಕಿಂಗ್ ಯಾವಾಗ ಓಪನ್ ಆಗುತ್ತೆ ಅಂತ ಸಿನಿ ಭಕ್ತಗಣ ಕಾಯ್ತಾ ಇದೆ. ಈ ಟೈಮ್​​ನಲಲ್ಲೇ ಕಾಂತಾರ 1 ಸಿನಿಮಾ ಬರೋ ಒಟಿಟಿ ನೀವೆಲ್ಲಾ ಆಶ್ಚರ್ಯ ಪಡೋ ವಿಚಾರವೊಂದು ರಿವಿಲ್ ಆಗಿದೆ. ಅಷ್ಟೆ ಅಲ್ಲ ಕಾಂತಾರ ಟ್ರೈಲರ್​ ರಿಲೀಸ್​ಗೆ ಡೇಟ್​ ಫಿಕ್ಸ್ ಆಗಿದೆ. ಹಾಗಾದ್ರೆ ಕಾಂತಾರದ ಹೊಸ ಅಪ್ಡೇಟ್ ಏನು..? ನೋಡೋಣ ಬನ್ನಿ...

ಭಾರತೀಯ ಚಿತ್ರರಂಗದಲ್ಲಿ ಈಗ ನಮ್ಮ ಕರ್ನಾಟಕದ ಕರಾವಳಿ ಕಥೆಗಳಿಗೆ ಭಾರಿ ಬೇಡಿಕೆ ಬಂದಿದೆ. ಅದಕ್ಕೆ ಕಾರಣ ಕಾರಾವಳಿಯ ತ್ರಿಮೂರ್ತಿಗಳಾದ ರಿಷಬ್ ಶೆಟ್ಟಿ, ರಾಜ್​ ಬಿ ಶೆಟ್ಟಿ, ರಕ್ಷಿತಯ್ ಶೆಟ್ಟಿ. ರಿಷಬ್ ​ಕಾಂತಾರ ಮಾಡಿ ಗೆದ್ದ ಮೇಲೆ ರಕ್ಷಿತ್ ಕೂಡ ಚಾರ್ಲಿ ಅನ್ನೋ ಹಿಟ್ ಸಿನಿಮಾ ಕೊಟ್ರು. ಈಗ ರಾಜ್​ ಬಿ ಶೆಟ್ಟಿ ಸು ಫ್ರಂ ಸೋ ಮಾಡಿ ಸಖತ್ ಆಗೇ ಕಮಾಲ್ ಮಾಡಿದ್ದಾರೆ. ಈಗ ಮತ್ತೆ ಸರಧಿ ಬಂದಿರೋದು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯದ್ದು..

ಕಾಂತಾರ ಬಿಡುಗಡೆಗೂ ಮೊದಲೇ ಫಿಕ್ಸ್ ಆಯ್ತಾ ಒಟಿಟಿ ಪ್ಲ್ಯಾನ್​;  ಡಿಸೆಂಬರ್​​ಗೆ ಒಟಿಟಿಗೆ ಬರುತ್ತೆ ಕಾಂತಾರ ಚಾಪ್ಟರ್​ ಒನ್ ಸಿನಿಮಾ..?

ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್​ 2ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇತ್ತ ಬಿಡುಗಡೆಗೂ ಮುನ್ನವೇ ಕಾಂತಾರ ಚಾಪ್ಟರ್ 1 ಸಿನಿಮಾದ ಒಟಿಟಿ ಎಂಟ್ರಿ ಬಗ್ಗೆ ಸುದ್ದಿಯೊಂದು ಹೊರ ಬಂದಿದೆ. ಸಿನಿಮಾ ಬಿಡುಗಡೆ ಆದ ಎಂಟು ವಾರಗಳ ನಂತರ ಓಟಿಟಿಯಲ್ಲಿ ಕಾಂತಾರ ಚಾಪ್ಟರ್​ 1 ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಅಂದ್ರೆ ಡಿಸೆಂಬರ್​ ಎರಡನೇ ವಾರ ಒಟಿಟಿಯಲ್ಲಿ ಕಾಂತಾರ ಚಾಫ್ಟರ್​ 1 ಸಿನಿಮಾ ನೋಡಬಹುದು..

125 ಕೋಟಿಗೆ ಕಾಂತಾರ ಒಟಿಟಿ ರೈಟ್ಸ್ ಮಾರಾಟ..?

ರಿಷಬ್ ಶೆಟ್ಟಿಯ ಕಾಂತಾರ ಚಾಪ್ಟರ್​ 1 ಸಿನಿಮಾದ ಮೇಲಿನ ಬೇಡಿಗೆ ಎಷ್ಟಿದೆ ಅಂದ್ರೆ ‘ಕಾಂತಾರ ಚಾಪ್ಟರ್ 1’ ಒಟಿಟಿ ಹಕ್ಕಿನಿಂದ ಬಂದ ಹಣದಲ್ಲೇ ಮತ್ತೊಂದು ‘ಕೆಜಿಎಫ್ 2’ ನಿರ್ಮಿಸಬಹುದು. ಈ ಸಿನಿಮಾದ ಎಲ್ಲಾ ಭಾಷೆಗಳ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಮ್​ಗೆ ಮಾರಾಟವಾಗಿದ್ದು, ಬರೋಬ್ಬರಿ ₹ 125 ಕೋಟಿಗೆ ಓಟಿಟಿ ರೈಟ್ಸ್ ಹಣ ಸಿಕ್ಕಿದೆಯಂತೆ.

ಸೆ. 20ಕ್ಕೆ ಕಾಂತಾರ 1 ಟ್ರೈಲರ್ ರಿಲೀಸ್; ಆಂಧ್ರದಲ್ಲಿ ಕಾಂತಾರ ವಿರಣೆಗೆ ನೂಕು ನುಗ್ಗಲು!

ಕಾಂತಾರ ಸಿನಿಮಾಗೆ ತೆಲುಗು ದೇಶದಲ್ಲಿ ಭಾರಿ ಬೇಡಿಕೆ ಇದೆ. ವಿಶಾಲ ತೆಲುಗು ನಾಡಿಗೆ ಈ ಸಿನಿಮಾ ಹಂಚಲು ಹೊಂಬಾಳೆ ಮಾಸ್ಟರ್​ ಪ್ಲ್ಯಾನ್ ಮಾಡಿದ್ದು, ಒಟ್ಟು ಆರು ವಿತರಣೆ ಸಂಸ್ಥೆಗಳಿಗೆ ಸಿನಿಮಾವನ್ನ ಮಾರಾಟ ಮಾಡಿದ್ದಾರೆ. ಹಾಗೆ ಕಾಂತಾರ ಟ್ರೈಲರ್​ ಯಾವಾಗ ಬಿಡುತ್ತೀರಾ ಅಂತ ಕೇಳುತ್ತಿದ್ದವರಿಗೆ ಇದೇ ತಿಂಗಳು 20ಕ್ಕೆ ಅನ್ನೋ ಡೇಟ್​ ಕೊಡಲಾಗಿದೆ. ಆದ್ರೆ. ಹೊಂಬಾಳೆ ಬ್ಯಾನರ್ ಇದನ್ನ ಅಧಿಕೃತ ಮಾಡಿಲ್ಲ. ಒಟ್ಟಿನಲ್ಲಿ ದೇಶಾದ್ಯಂತ ಕಾಂತಾರ ಜ್ವರ ಶುರುವಾಗ್ತಿರೋದಂತು ನಿಜ.. 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
Read more