ರಿಲೀಸ್ ಇಷ್ಟು ಹತ್ತಿರದಲ್ಲಿದ್ರೂ ಕಾಂತಾರ ಟೀಮ್ ಪ್ರಚಾರವನ್ನೇ ಮಾಡಿಲ್ಲ. ಪ್ರಚಾರ ಮಾಡದೇ ಜಸ್ಟ್ ವಿಚಾರದ ಮೂಲಕ ಪ್ರೇಕ್ಷಕರನ್ನ ತಲುಪಬೇಕು ಅನ್ನೋದು ರಿಷಬ್ ಶೆಟ್ಟಿರ ಪಾಲಿಸಿ. ಸೋ ಇನ್ನೂ ಕೂಡ ಸಿನಿಮಾವನ್ನ ತಿದ್ದಿ ತೀಡುವುದರಲ್ಲಿ ರಿಷಬ್ ತೊಡಗಿಕೊಂಡಿದ್ದಾರೆ.
ವಿಶ್ವವೇ ಕುತೂಹಲದಿಂದ ಕಾಯ್ತಾ ಇರೋ ಕಾಂತಾರ ಚಾಪ್ಟರ್-1 ರಿಲೀಸ್ಗೆ ದಿನಗಣನೆ ಶುರುವಾಗಿದೆ. ಇನ್ನೇನು ಸಿನಿಮಾದ ಟ್ರೈಲರ್ ರಿಲೀಸ್ಗು ಮುಹೂರ್ತ ಫಿಕ್ಸ್ ಆಗಿದೆ. ಕಾಂತಾರ ಮೊದಲ ಚಾಪ್ಟರ್ನಲ್ಲಿ ಏನಿರಲಿದೆ ಅನ್ನೋ ಕುತೂಹಲಕ್ಕೆ ಸೋಮವಾರ ಉತ್ತರ ಸಿಗಲಿದೆ.
ಕಾಂತರ ಚಾಪ್ಟರ್- 1 ಟ್ರೈಲರ್ ರಿಲೀಸ್ ಗೆ ಡೇಟ್ ಫಿಕ್ಸ್; ಚಾಪ್ಟರ್-1ನಲ್ಲಿ ಏನುಂಟು..? ಬಯಲಾಗಲಿದೆ ಗುಟ್ಟು..!
ಯೆಸ್ ಕಾಂತಾರ ಚಾಪ್ಟರ್-1 ತೆರೆಗೆ ಬರಲಿಕ್ಕೆ ಇನ್ನೂ 12 ದಿನಗಳು ಮಾತ್ರ ಬಾಕಿ. ಅಕ್ಟೋಬರ್ 2ರಂದು ವಿಜಯ ದಶಮಿ ದಿವಸ ವಿಶ್ವದಾದ್ಯಂತ ದಾಖಲೆ ಸ್ಕ್ರೀನ್ ಗಳಲ್ಲಿ ತೆರೆಗೆ ಬರಲಿದೆ ಕಾಂತಾರ ಚಾಪ್ಟರ್-1. ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್ನಲ್ಲೂ ಸಜ್ಜಾಗಿರುವ ಕಾಂತಾರ-1 ವಿಶ್ವದ ನಾನಾ ದೇಶಗಳಲ್ಲಿ ತೆರೆಕಾಣಲಿದೆ.
ರಿಲೀಸ್ ಇಷ್ಟು ಹತ್ತಿರದಲ್ಲಿದ್ರೂ ಕಾಂತಾರ ಟೀಮ್ ಪ್ರಚಾರವನ್ನೇ ಮಾಡಿಲ್ಲ. ಪ್ರಚಾರ ಮಾಡದೇ ಜಸ್ಟ್ ವಿಚಾರದ ಮೂಲಕ ಪ್ರೇಕ್ಷಕರನ್ನ ತಲುಪಬೇಕು ಅನ್ನೋದು ರಿಷಬ್ ಶೆಟ್ಟಿರ ಪಾಲಿಸಿ. ಸೋ ಇನ್ನೂ ಕೂಡ ಸಿನಿಮಾವನ್ನ ತಿದ್ದಿ ತೀಡುವುದರಲ್ಲಿ ರಿಷಬ್ ತೊಡಗಿಕೊಂಡಿದ್ದಾರೆ. ಇತ್ತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ದೇಶ-ವಿದೇಶದ ವಿತರಕರ ಜೊತೆಗೆ ಸಿನಿಮಾ ಬಿಡುಗಡೆಗೆ ಒಪ್ಪಂದಗಳನ್ನ ಮಾಡಿಕೊಳ್ತಾ ಇದೆ.
ಹಾಗಾದ್ರೆ ಸಿನಿಮಾ ರಿಲೀಸ್ಗೂ ಮುನ್ನ ಪ್ರೇಕ್ಷಕರಿಗೆ ಕಾಂತಾರ-1 ಟೀಂ ಯಾವ ಗುಟ್ಟೂ ಬಿಟ್ಟುಕೊಡಲ್ವಾ ಅನ್ನೋ ಪ್ರಶ್ನೆ ಮೂಡ್ತಾ ಇದೆಯಾ..? ಖಂಡಿತ ಗುಟ್ಟು ರಟ್ಟಾಗುತ್ತೆ. ಅದು ಸೋಮವಾರ ರಿಲೀಸ್ ಆಗಲಿರೋ ಟ್ರೈಲರ್ ಮೂಲಕ.
ಹೌದು 22 ನೇ ತಾರೀಖು ಮದ್ಯಾಹ್ನ 12.45ಕ್ಕೆ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. 7 ಭಾಷೆಗಳಲ್ಲಿ ಬರಲಿರೋ ಟ್ರೈಲರ್ನ ಜಗತ್ತಿನಾದ್ಯಂತ ನೋಡಬಹುದು. ಕಾಂತಾರ ಚಾಪ್ಟರ್-1 ನಲ್ಲಿ ಏನಿರಲಿದೆ ಗಮ್ಮತ್ತು ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು.
ಅಸಲಿಗೆ ಕಾಂತಾರ-1 ಟೀಂ ಇದೂವರೆಗೂ ಸಿನಿಮಾ ಕುರಿತ ಹೆಚ್ಚಿನ ಗುಟ್ಟುಗಳನ್ನ ಬಿಟ್ಟುಕೊಟ್ಟಿಲ್ಲ. ರುಕ್ಮಿಣಿ ವಸಂತ್ ಮತ್ತು ಗುಲ್ಶನ್ ದೇವಯ್ಯ ಪಾತ್ರಗಳ ಪೋಸ್ಟರ್ಸ್ ಹೊರಬಂದಿವೆ. ಇವುಗಳನ್ನ ನೋಡ್ತಾ ಇದ್ರೆ ಇದು ರಾಜರ ಕಾಲದ ಕಥೆ ಅನ್ನೋದಂತೂ ಪಕ್ಕಾ ಆಗಿದೆ. ಕಾಂತಾರ-1ನಲ್ಲಿ ಕದಂಬರ ಕಾಲದ ಕಥೆ ಇದೆ ಎನ್ನಲಾಗ್ತಾ ಇದೆ. ಮೇಕಿಂಗ್ ನೋಡ್ತಾ ಇದ್ರೆ ಇದೊಂದು ದೊಡ್ಡ ಕ್ಯಾನ್ವಾಸ್ನ ಕಥೆ ಅನ್ನೋದಂತೂ ಗೊತ್ತಾಗ್ತಾ ಇದೆ.
ಒಟ್ಟಾರೆ ಕಾಂತಾರ ಮೊದಲ ಚಾಪ್ಟರ್ನಲ್ಲೇನಿದೆ ಅನ್ನೋದು ಟ್ರೈಲರ್ ಮೂಲಕ ಬಯಲಾಗಲಿದೆ. ಸಿನಿಮಾ ರಿಲೀಸ್ಗೂ ಹತ್ತು ದಿನ ಮೊದಲು ಬರಲಿರೋ ಟ್ರೈಲರ್ ಸಿನಿಮಾ ಕುರಿತ ನಿರೀಕ್ಷೆಯನ್ನ ಹತ್ತು ಪಟ್ಟು ಹೆಚ್ಚು ಮಾಡುತ್ತಾ..? ಕಾದುನೋಡೋಣ.