'ರೆಬೆಲ್ ಸ್ಟಾರ್‌' ಅಂಬಿ ಜನ್ಮದಿನಕ್ಕೆ ಫ್ಯಾನ್ಸ್‌ಗೆ ಗುಡ್‌ ನ್ಯೂಸ್: ಹೊಸ ರೂಪದಲ್ಲಿ 'ಅಂತ' ಸಿನಿಮಾ ರೀ-ರಿಲೀಸ್!

May 25, 2023, 1:40 PM IST

ನಟ ಅಂಬರೀಶ್‌ಗೆ ರೆಬಲ್ ಸ್ಟಾರ್ ಎಂದು ಬಿರುದು ತಂದುಕೊಟ್ಟ ಸಿನಿಮಾ 'ಅಂತ' .  1981ರಲ್ಲಿ ತೆರೆಕಂಡಿದ್ದ ಈ ಸಿನಿಮಾ ರಿಲೀಸ್ ಆಗಿ 42 ವರ್ಷಗಳೇ ಕಳೆದಿವೆ. ಆದರೂ ಈ ಸಿನಿಮಾದ ಕ್ರೇಜ್ ಇನ್ನೂ ಇದೆ. ಅಂಬರೀಶ್ ಅಂದ ಕೂಡಲೇ ಅಂತ ಸಿನಿಮಾ ಕಣ್ಮುಂದೆ ಬರುತ್ತದೆ. ಇದು ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಐದನೇ ಸಿನಿಮಾವಾಗಿತ್ತು. ಅಂಬರೀಷ್ ಜತೆಗೆ 4ನೇ ಸಿನಿಮಾವಾಗಿತ್ತು.  ಅಂದಹಾಗೆ, ಚಿತ್ರದಲ್ಲಿನ ಹೀರೋಗೆ ಟಾರ್ಚರ್‌ ಕೊಡುವ ಸೀನ್‌ಗಳಿಂದಾಗಿ, ಸೆನ್ಸಾರ್ ಪ್ರಮಾಣ ಪತ್ರ ಸಿಗುವುದು ಕಷ್ಟವಾಗಿತ್ತು. ಸಾಕಷ್ಟು ಜಟಾಪಟಿ ಬಳಿಕ 'ಎ' ಪ್ರಮಾಣ ಪತ್ರ ಸಿಕ್ಕಿತ್ತು. ಅಂಬರೀಷ್ ನಟನೆಗೆ ರಾಜ್ಯ ಪ್ರಶಸ್ತಿ ದಕ್ಕಿತ್ತು80 ರ ದಶಕದಲ್ಲಿ ಅಷ್ಟೊಂದು ಪ್ರಭಾವ ಬೀರಿರೋ ಈ ಚಿತ್ರದಲ್ಲಿ ಅಂಬರೀಶ್ ಡಬಲ್ ರೋಲ್ ಮಾಡಿದ್ದರು. ಅದನ್ನ ಕಂಡು  ಜನ ತುಂಬಾ ಇಷ್ಟಪಟ್ಟಿದ್ದರು. ಅದರಲ್ಲೂ ವಿಲನ್ ಪಾತ್ರದ ಅಂಬಿ ರೋಲ್‌ನ ಕನ್ವರ್‌ ಲಾಲ್ ಡೈಲಾಗ್ ಈಗಲೂ ವಿಶೇಷವಾಗಿಯೇ ಸೆಳೆಯುತ್ತದೆ.

ಕನ್ನಡ ಕ್ಲಾಸಿಕ್ ಸಿನಿಮಾ  ಅಂತ ರೀ ರಿಲೀಸ್ ಆಗುತ್ತಿದ್ದು, ಅಂಬಿ ಹುಟ್ಟುಹಬ್ಬಕ್ಕೆಅವರ ಅಭಿಮಾಣಿಗಳಿಗೆ ಇದು ಸ್ಪೆಷಲ್ ಗಿಫ್ಟ್ ಎನ್ನುತ್ತಿದ್ದಾರೆ ಚಿತ್ರದ ನಿರ್ದೇಶಕ ಎಸ್ವಿ  ರಾಜೇಂದ್ರ ಸಿಂಗ್ ಬಾಬು. ಅಂತ ಸಿನಿಮಾದ ಕಥೆಯನ್ನ ಎಚ್.ಕೆ. ಅನಂತ್‌ ರಾವ್ ಸರಣಿ ರೂಪದಲ್ಲಿ ಸುಧಾ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅದೇ ಕಥೆಯನ್ನ ಓದುತ್ತಿದ್ದ ಡೈರೆಕ್ಟರ್ ಬಾಬು ಅವರು ಸಿನಿಮಾ ಮಾಡಬೇಕು ಅಂತ ಪ್ಲಾನ್ ಮಾಡಿದ್ದರು. ಕೊನೆಗೆ ಎಚ್.ಎನ್. ಮಾರುತಿ ಮತ್ತು ವೇಣುಗೋಪಾಲ್ ಮನಸ್ಸು ಮಾಡಿದರು. ಆಗಲೇ ಕನ್ನಡದಲ್ಲಿ ಅಂತ ಸಿನಿಮಾ ರೆಡಿ ಆಗಲು ಸಾಧ್ಯವಾಯಿತು. ಸಾಕಷ್ಟು ಸಮಸ್ಯೆಗಳನ್ನ ಎದುರಿಸಿಕೊಂಡೇ ರಿಲೀಸ್ ಆಗಿದ್ದ ಅಂತ ಸಿನಿಮಾ ಸೂಪರ್ ಹಿಟ್ ಆಯಿತು. ಆ ಬಳಿಕ ಪರ ಭಾಷೆಯಲ್ಲೂ ರಿಲೀಸ್ ಆಯಿತು. 1981 ರಲ್ಲಿ ರಿಲೀಸ್ ಆಗಿದ್ದ ಅಂತ ಸಿನಿಮಾ ಈಗ ಮತ್ತೊಮ್ಮೆ ರಿಲೀಸ್ ಆಗುತ್ತಿದೆ.

ಅಂತ' ಸಿನಿಮಾವನ್ನು ತಮಿಳಿಗೆ ಸಿ ವಿ ರಾಜೇಂದ್ರನ್ 'ತ್ಯಾಗಿ' ಹೆಸರಿನಲ್ಲಿ ರಿಮೇಕ್ ಮಾಡಿದ್ದರು. ಹೀರೋ ಆಗಿ ಶಿವಾಜಿ ಗಣೇಶನ್ ನಟಿಸಿದ್ದರೆ, ನಾಯಕಿಯಾಗಿ ಸುಜಾತಾ ನಟಿಸಿದ್ದರು. ತೆಲುಗಿಗೆ 'ಅಂತಂ ಕಾದಿದಿ ಆರಂಭಂ' ಹೆಸರಿನಲ್ಲಿ ವಿಜಯಾ ನಿರ್ಮಲಾ ರಿಮೇಕ್ ಮಾಡಿದ್ದರು. ಹೀರೋ ಆಗಿ 'ಸೂಪರ್ ಸ್ಟಾರ್' ಕೃಷ್ಣ ಬಣ್ಣ ಹಚ್ಚಿದ್ದರು. ಹಿಂದಿಯಲ್ಲಿ 'ಮೇರಿ ಅವಾಜ್‌ ಸುನೋ' ಎಂಬ ಹೆಸರಿನಲ್ಲಿ 'ಅಂತ' ರಿಮೇಕ್ ಆಗಿತ್ತು. ಸ್ವತಃ ಎಸ್‌ ವಿ ರಾಜೇಂದ್ರ ಸಿಂಗ್ ಬಾಬು ಅವರೇ ಹಿಂದಿಯಲ್ಲೂ ನಿರ್ದೇಶನ ಮಾಡಿದ್ದರು.ಆದರೆ ಅಂತ ಸಿನಿಮಾ ಈ ಸಲ ಹೊಸ ಸ್ಪರ್ಶದೊಂದಿಗೆ ಬರ್ತಿದೆ. ಇಲ್ಲಿಯವರೆಗೆ ಕಲರ್ ಆಗಿದ್ದ ಈ ಚಿತ್ರಕ್ಕೆ ಸಿನಿಮಾ ಸ್ಕೋಪ್ ಬಂದಿದೆ. 5.1 ಸೌಂಡ್ ವ್ಯವಸ್ಥೆಯನ್ನ ಈ ಚಿತ್ರಕ್ಕೆ ಅಳವಡಿಸಲಾಗಿದೆ. ಸಿನಿಮಾದ ಈ ಒಂದು ಮಾಹಿತಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ಸಮೇತ ಹರಿದಾಡುತ್ತಿದೆ. ದೇ 26 ರಂದು ಸಿನಿಮಾ ರಿಲೀಸ್ ಆಗುತ್ತಿದೆ. ಇದೇ ತಿಂಗಳ 29 ರಂದು ಅಂಬರೀಶ್ ಅವರ 71ನೇ ಜನ್ಮ ದಿನ ಇದೆ. ಈ ಹಿನ್ನೆಲೆಯಲ್ಲಿ ಅಂತ ಸಿನಿಮಾ ರೀ-ರಿಲೀಸ್ ಅಗುತ್ತಿದೆ.