ರಶ್ಮಿಕಾ ಮಂದಣ್ಣ ಹೊಸ ಅವತಾರಕ್ಕೆ ಎಲ್ರೂ ಫಿದಾ, ಕನ್ನಡತಿ ಕ್ರೇಜ್‌ ನೋಡಿ ದಂಗಾದ ಬಾಲಿವುಡ್!

ರಶ್ಮಿಕಾ ಮಂದಣ್ಣ ಹೊಸ ಅವತಾರಕ್ಕೆ ಎಲ್ರೂ ಫಿದಾ, ಕನ್ನಡತಿ ಕ್ರೇಜ್‌ ನೋಡಿ ದಂಗಾದ ಬಾಲಿವುಡ್!

Published : Sep 30, 2025, 10:09 PM IST

ಕೂರ್ಗ್​ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ಕೈಗೆ ಸಿಗದ ಕರ್ಜುರಾ.. ಯಾಕಂದ್ರೆ ರಶ್ಮಿಕಾ ಬಾಲಿವುಡ್​​ ಜಗತ್ತಿನ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇದೇ ಟೈಮ್​​ನಲ್ಲಿ ರಶ್ಮು ನರ್ತಿಸಿರೋ ನೆಕ್ಸ್ಟ್​​ ಲೆವೆಲ್​ ಸಾಂಗ್ ಒಂದು ಹೊರ ಬಂದಿದೆ..

ರಶ್ಮಿಕಾ ಮಂದಣ್ಣ (Rashmika Mandanna).. ಬೋಲ್ಡ್​​ ಅನ್ನೋ ಪದಕ್ಕೆ ಮತ್ತೊಂದು ಹೆಸರು.. ಈ ಶ್ರೀವಲ್ಲಿ ಬೆಳ್ಳಿತೆರೆ ಮೇಲೆ ಹಸಿಬಿಸಿಯಾಗಿ ಕುಣಿಸೋದನ್ನ ಅಭ್ಯಾಸ ಮಾಡ್ಕೊಂಡಿದ್ದಾರೆ. ಯಾವ್ ಮಡಿವಂತಿಕೆ ಇಲ್ಲದೇ ತನಗೆ ಕೊಟ್ಟ ಪಾತ್ರಕ್ಕೆ ತನ್ನ ಜೀವ ಹಿಂಡಿಕೊಂಡು ಜೀವ ತುಂಬೋದು ರಶ್ಮುಗೆ ಕರಗತ ಆಗಿದೆ. ಈಗ ಬಾಲಿವುಡ್​​ನಲ್ಲಿ ಥಮ್ಮ ಸಿನಿಮಾ ಮೂಲಕ ಮೂರನೇ ಗೆಲುವಿಗಾಗಿ ಸಜ್ಜಾಗಿರೋ ಕೂರ್ಗ್​​ ಬ್ಯೂಟಿ, ಪಡ್ಡೆ ಹುಡುಗರು ಕುಂತಲ್ಲಿ ಕೂರಲಾಗದ ಹಾಗೆ ಮಾಡಿದ್ದಾರೆ. ಅದು ಈ ಹಾಟೆಸ್ಟ್​​​ ಹಾಡಿನ ಮೂಲಕ..

ಕೂರ್ಗ್​ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ಕೈಗೆ ಸಿಗದ ಕರ್ಜುರಾ.. ಯಾಕಂದ್ರೆ ರಶ್ಮಿಕಾ ಬಾಲಿವುಡ್​​ ಜಗತ್ತಿನ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇದೇ ಟೈಮ್​​ನಲ್ಲಿ ರಶ್ಮು ನರ್ತಿಸಿರೋ ನೆಕ್ಸ್ಟ್​​ ಲೆವೆಲ್​ ಸಾಂಗ್ ಒಂದು ಹೊರ ಬಂದಿದೆ..

ಯೆಸ್, ಇದು ರಶ್ಮಿಕಾರ ಮತ್ತೊಂದು ವರ್ಷನ್.. ಬೋಲ್ಡ್​ ಅಂದ್ರೆ ಏನು..? ಹಾಟ್​​ ಅಂದ್ರೆ ಹೇಗಿರುತ್ತೆ ಅಂತ ರಶ್ಮಿಕಾ ಈ ಹಾಡಿನಲ್ಲಿ ಬಟಾ ಬಯಲು ಮಾಡಿದ್ದಾರೆ. ಬಿಟೌನ್​​ನಲ್ಲಿ ಐಟಂ ಡಾನ್ಸ್ ಮಾಡಿಕೊಂಡು ನಾವೇ ನಂಬರ್​ ಒನ್ ಎನ್ನುತ್ತಿದ್ದ ಕೆಲ ನಟಿಯರಿಗೆ ರಶ್ಮಿಕಾ ಈ ಹಾಡಿನ ಮೂಲಕ ಟಕ್ಕರ್​ ಕೊಟ್ಟಿದ್ದಾರೆ. ಇದು ರಶ್ಮಿಕಾ ನಟನೆಯ ಥಮ್ಮ ಸಿನಿಮಾದ ಹಾಡಾಗಿದ್ದು, ಆಯುಷ್ಮಾನ್ ಖುರಾನ್ಜೊತೆ ತಯ್ಯಾ ತಕಾ ಅಂತ ಹದವಾಗಿ ಕುಣಿದಿದ್ದಾರೆ. ಕರ್ನಾಟಕದ ಈ ಬ್ಯೂಟಿಯ ಡಾನ್ಸ್​ಗೆ ಪಡ್ಡೆ ಹುಡುಗರ ಹಾರ್ಟ್​ ತಕ ತಕ ಎನ್ನುತ್ತೆ..

ತೆಲುಗು ಚಿತ್ರರಂಗವನ್ನ ಆಳುತ್ತಿರೋ ಕೂರ್ಗ್​​​​ ಕುವರಿ ರಶ್ಮಿಕಾ ಮಂದಣ್ಣ ಬಾಲಿವುಡ್​​​ನಲ್ಲಿ ಭಾರಿ ಬೆಳಕು ಚೆಲ್ಲುತ್ತಿದ್ದಾರೆ. ರಶ್ಮಿಕಾ ಸೂಸೋ ಆ ಬೆಳಕು ಹೇಗಿದೆ ಅಂದ್ರೆ, ಗಂಡ್​ ಹೈಕ್ಳ ಹೃದಯದಲ್ಲಿ ಕಲರ್​ ಕಲರ್​ ಚಿಟ್ಟೆಗಳು ಮಿತಿ ಇಲ್ಲದೇ ಹಾರಾಡ್ತಿವೆ. ಈಗ ರಶ್ಮಿಕಾ ಮಂದಣ್ಣ ಬಾಲಿವುಡ್​ ಸಿನಿಮಾ ಪ್ರೇಕ್ಷಕರನ್ನ ಹಾಟೆಸ್ಟ್ ದೆವ್ವವಾಗಿ ಕಾಡುತ್ತಿದ್ದಾರೆ. ಯಾಕಂದ್ರೆ ಥಮ್ಮ ಸಿನಿಮಾ ಹಾರರ್​ ಸ್ಟೋರಿಯ ಚಿತ್ರ. ರಶ್ಮಿಕಾ ಇಲ್ಲಿ ದೆವ್ವದ ರೋಲ್ ಮಾಡಿದ್ದಾರೆ.

ರಶ್ಮಿಕಾ ಬಾಲಿವುಡ್ ಬೆಡಗಿಯರಿಗೆ ಭಾರೀ ಪೈಪೋಟಿ ಕೊಡುತ್ತಿದ್ದಾರೆ. ಹಿಂದಿ ಸಿನಿಮಾದ ಎಲ್ಲಾ ವಿಭಾಗದಲ್ಲೂರಶ್ಮಿಕಾ ಪರ್ಫಾರ್ಮ್ ಮಾಡಿ ಗೆಲ್ಲುತ್ತಿದ್ದಾರೆ. ದೀಪಿಕಾ, ಕತ್ರಿನಾ, ಪ್ರಿಯಾಂಕ, ಅಲಿಯಾ, ಜಾಕ್ವಲೀನ್, ಯಾರೇ ಬಂದ್ರು ಅವರನ್ನೆಲ್ಲಾ ಸೈಡಿಗಟ್ಟಿ ಶ್ರೀವಲ್ಲಿ ಮೈ ಚಳಿ ಬಿಟ್ಟು ನಟಿಸುತ್ತಿದ್ದಾರೆ. ಅದು ಡಿ ಗ್ಲಾಮರ್​ ರೋಲ್ ಆಗಿರಲಿ ಕಿಸ್ಸಿಂಗ್ ಸೀನೇ ಇರಲೇ, ಹಾಟ್ ಆಗಿ ಕಾಣಿಸೋದಾಗಿರಲಿ ರಶ್ಮಿಕಾ ಹಂಡ್ರೆಡ್ ಪರ್ಸೆಂಟ್​ ನ್ಯಾಯ ಒದಗಿಸ್ತಾರೆ. ಅದಕ್ಕೆ ಈ ಹಾಡೇ ಸಾಕ್ಷಿ..

ಸಾಮಾನ್ಯವಾಗಿ ಬಾಲಿವುಡ್ ಬೆಡಗಿಯರು ಸಿಕ್ಕಾಪಟ್ಟೆ ಬಿಂದಾಸ್ ಆಗಿರ್ತಾರೆ. ರಶ್ಮಿಕಾ ಕೂಡ ಅದನ್ನೆಲ್ಲಾ ಮೈಗೂಡಿಸಿಕೊಂಡು ಕಮಾಲ್ ಮಾಡುತ್ತಿದ್ದಾರೆ. 'ಅನಿಮಲ್', 'ಛಾವ' ಚಿತ್ರಗಳ ಸಕ್ಸಸ್ ರಶ್ಮಿಕಾರನ್ನ ಬಿಟೌನ್​ ಮಹಾರಾಣಿ ಪಟ್ಟಕ್ಕೇರಿರೋ ರಶ್ಮಿಕಾಗೆ ಹಿಂದಿಯಲ್ಲಿ ಥಮ್ಮ ಐದನೇ  ಸಿನಿಮಾ. ಇದರ ಜೊತೆಗೆ ತೆಲುಗಿನಲ್ಲಿ 'ಗರ್ಲ್ ಫ್ರೆಂಡ್' ಸಿನಿಮಾ ತೆರೆಗೆ ಬರಲಿದೆ. ಸದ್ಯ 'ಕಾಕ್ಟೇಲ್'-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಅಲ್ಲು ಅರ್ಜುನ್ ಹಾಗೂ ಅಟ್ಲಿ ಜೋಡಿಯ ಬಹುಕೋಟಿ ವೆಚ್ಚದ ಸಿನಿಮಾದಲ್ಲೂ ಈ ಶ್ರೀವಲ್ಲಿ ಸಿಂಚನ ಇರಲಿದೆ. ಸಿನಿಮಾ ನಾಯಕಿಯರೇ ಸ್ಪೆಷಲ್ ಸಾಂಗ್ನಲ್ಲಿ ಕುಣಿಯುವುದು ಬಾಲಿವುಡ್ ಟ್ರೆಂಡ್. ರಶ್ಮಿಕಾ ಮಂದಣ್ಣ ಕೂಡ ಈಗ ಅದೇ ರೂಟ್​ ಹಿಟಿದು ಹಾಟ್​ ಆಗಿ ಹೆಜ್ಜೆ ಹಾಕಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ!

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
02:31ಸಮರ್ಜಿತ್ ಲಂಕೇಶ್-ಮೋಹನ್ ಲಾಲ್ ಜೋಡಿ: ವೃಷಭ ಚಿತ್ರದ ಅದ್ದೂರಿ ಟ್ರೇಲರ್ ಅನಾವರಣ
Read more