ವೈನ್ ಹೀರಿ ವೈನಾಗಿ ಕುಣಿಯಲಾಂಭಿಸೋ ರಶ್ಮಿಕಾ, ಮಲೈಕಾ ಜೊತೆ ಸೌಂದರ್ಯ ಸಮರವೇ?

ವೈನ್ ಹೀರಿ ವೈನಾಗಿ ಕುಣಿಯಲಾಂಭಿಸೋ ರಶ್ಮಿಕಾ, ಮಲೈಕಾ ಜೊತೆ ಸೌಂದರ್ಯ ಸಮರವೇ?

Published : Oct 15, 2025, 12:44 PM IST

ಥಮ ಟ್ರೈಲರ್​ ನೋಡ್ತಿದ್ರೆ ಇದರಲ್ಲೊಂದು ಮಜವಾದ ಹಾರರ್ ಕಾಮಿಡಿ ಕಹಾನಿ ಇದೆ ಅನ್ನೋದು ಗೊತ್ತಾಗುತ್ತೆ. ರಶ್ಮಿಕಾ ಇಲ್ಲಿ ಬೇತಾಳವಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆಂದಿಗಿಂತಲೂ ಹಾಟ್ ಅವತಾರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಈ ಮಾದಕ ಬೇತಾಳವನ್ನ ನೋಡೋದಕ್ಕೆ ಫ್ಯಾನ್ಸ್ ಕಾತುರದಿಂದ ಕಾಯ್ತಾ ಇದ್ದಾರೆ.

ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಹಾರರ್ ಕಾಮಿಡಿ ಸಿನಿಮಾ ಥಾಮಾ ದೀಪಾವಳಿಗೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಈ ಸಿನಿಮಾದ ಪಾರ್ಟಿ ಸಾಂಗ್ ಪಾಯ್ಸನ್ ಬೇಬಿ ರಿಲೀಸ್ ಆಗಿದ್ದು ಅಕ್ಷರಶಃ ಬಿರುಗಾಳಿ ಎಬ್ಬಿಸಿದೆ. ಮುನ್ನಿ ಕುಣಿತ.. ಕಿರಿಕ್ ಬ್ಯೂಟಿ ಕುಡಿತವಿರುವ ಈ ಹಾಡು ಅದೆಷ್ಟು ಮಾದಕವಾಗಿದೆ ಅಂದ್ರೆ ಪಡ್ಡೆ ಹುಡುಗರು ನಶೆಯಲ್ಲಿ ತೇಲ್ತಾ ಇದ್ದಾರೆ. ರಶ್ಮಿಕಾ-ಮಲೈಕಾರ ಈ  ಸೌಂದರ್ಯ ಸಮರ ಸದ್ಯ ಹಾಟ್ ಟಾಪಿಕ್ ಆಗಿದೆ.

ಯೆಸ್ ಬಾಲಿವುಡ್​ನ ರೊಮ್ಯಾಂಟಿಕ್ ಹಾರರ್ ಕಾಮಿಡಿ ಸಿನಿಮಾ 'ಥಮ' ರಿಲೀಸ್​ಗೆ ಸಜ್ಜಾಗಿದ್ದು, ತನ್ನ ಬತ್ತಳಿಕೆಯಲ್ಲಿರೋ ಒಂದೊಂದೇ ಅಸ್ತ್ರವನ್ನ ಸ್ಯಾಂಪಲ್ ರೂಪದಲ್ಲಿ ತೋರಿಸ್ತಾ ಇದೆ. ಸದ್ಯ ಮಲೈಕಾ & ರಶ್ಮಿಕಾ ಮಾದಕ ಕುಣಿತವಿರುವ ಪಾಯ್ಸನ್ ಬೇಬಿ ಅನ್ನೋ ಪಾರ್ಟಿ ಸಾಂಗ್ ರಿಲೀಸ್ ಆಗಿದ್ದು ಪಡ್ಡೆ ಹೈಕಳನ್ನ ಪಾರ್ಟಿಗೆ ಸಜ್ಜಾಗುವಂತೆ ಕರೆನೀಡಿದೆ.

ಬಾಲಿವುಡ್​ನ ಚಿರಯುವತಿ.. ಮುನ್ನಿ ಬದನಾಮ್ ಹುಯಿ ಅಂತ ಕುಣಿದು ಪಡ್ಡೆ ಹುಡುಗರ ಹೃದಯದಲ್ಲಿ ಮಾಯದ ಗಾಯ ಮಾಡಿದ ಮಲೈಕಾ ಥಾಮಾ ಸಿನಿಮಾದ ಈ ಪಾರ್ಟಿ ಸಾಂಗ್​ನಲ್ಲಿ ಹೆಜ್ಜೆ ಹಾಕಿದ್ದಾರೆ. 3 ನಿಮಿಷ 2 ಸೆಕೆಂಡ್​​ಗಳ ಈ ಹಾಡು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಕಿಚ್ಚು ಹಚ್ಚಿದೆ.

ಹಾಡಿನ ಆರಂಭದಲ್ಲಿ ಮಲೈಕಾ ಮಾದಕ ಕುಣಿತ ಇದೆ. ಪಾರ್ಟಿಗೆ ಎಂಟ್ರಿ ಕೊಡುವ ಆಯುಷ್ಮಾನ್ ಖುರಾನ- ರಶ್ಮಿಕಾ ಹಾಡಿನ  ಭಾಗವಾಗ್ತಾರೆ. ವೈನ್ ಹೀರಿ ವೈನಾಗಿ ಕುಣಿಯಲಾಂಭಿಸೋ ರಶ್ಮಿಕಾ , ಬಳಿಕ ಮಲೈಕಾ ಜೊತೆ ಸೌಂದರ್ಯ ಸಮರಕ್ಕೆ ಬೀಳ್ತಾರೆ.

ಪಾಯ್ಸನ್ ಬೇಬಿ  ಹಾಡಿನ ಕೊನೆಕೊನೆಗೆ ಒಂದೇ ಫ್ರೆಮ್​ನಲ್ಲಿ ಮಲೈಕಾ-ರಶ್ಮಿಕಾ ಹೆಜ್ಜೆ ಹಾಕ್ತಾರೆ. ಒಂದೇ ಫ್ರೆಮ್​ನಲ್ಲಿ ಎರಡೆರಡು ಬಿಜಲಿ.. ಯಾರನ್ನ ನೋಡೋದು.. ಯಾರನ್ನ ಬಿಡೋದು ಅಂತ ಕಣ್ಣು ಮಿಟುಕಿಸದೇ ಪಡ್ಡೆ ಹುಡುಗರು ಕಂಗಾಲಾಗ್ತಾರೆ.

ಆಹಾ ಇವರಿಬ್ಬರ ಸೌಂದರ್ಯ ಸಮರ ಮತ್ತೆ ಮತ್ತೆ ನೋಡಿದವರೇ ಅಮರ ಅಂತ ಮತ್ತೆ ಮತ್ತೆ ಸಾಂಗ್​ನ ನೋಡ್ತಾನೇ ಇದ್ದಾರೆ ರಸಿಕರು. ಸೋ ಪಾಯ್ಸನ್ ಬೇಬಿ ಸಾಂಗ್ ಈಗಾಗ್ಲೇ 15 ಮಿಲಿಯನ್​ಗೂ ಅಧಿಕ ವಿವ್ಸ್ ಪಡೆದು ಮುನ್ನುಗ್ತಾ ಇದೆ.

ಮಲೈಕಾ ಅರೋರಾಗೆ ಈಗ 51ರ ಹರೆಯ. 29ರ ಕಿರಿಕ್ ಬ್ಯೂಟಿ ಎದುರು ಈ ಮಾದಕ ಚೆಲುವೆ ಕುಣಿದಿರೋ ಪರಿ ಬೊಂಬಾಟ್ ಆಗಿದೆ. ಇಬ್ಬರಲ್ಲಿ ಯಾರು ಹೆಚ್ಚು ಅಂದ.. ಯಾರು ಹೆಚ್ಚು ಮೋಹಕ ಅಂತ ಫ್ಯಾನ್ಸ್ ಪೈಪೋಟಿಗೆ ಬಿದ್ದಂತೆ ಕಾಮೆಂಟ್ ಮಾಡ್ತಿದ್ದಾರೆ.

ಯೆಸ್ ಥಾಮಾ ಮ್ಯೂಸಿಕ್ ಲಾಂಚ್ ಇವೆಂಟ್​ನಲ್ಲೂ ಈ ಮಾದಕ ಕನ್ಯೆಯರು ವೇದಿಕೆ ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಕೂಡ ಇಬ್ಬರೂ ನರ್ತಿಸಿ ನಶೆ ಏರಿಸಿದ್ದಾರೆ.

ಅಂದಹಾಗೆ ಥಾಮಾ ‘ಮ್ಯಾಡೋಕ್ ಹಾರರ್ ಕಾಮಿಡಿ ಯುನಿವರ್ಸ್’ ನ ಹೊಸ ಸಿನಿಮಾ. ವಿಶೇಷ ಅಂದ್ರೆ ಈ ಮೂವಿ ತುಂಬಾ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ. ಆಯುಷ್ಮಾನ್ ಖುರಾನಾ, ನವಾಜುದ್ದಿನ್ ಸಿದ್ದಿಕಿ, ಪರೇಶ್ ರಾವಲ್  ಜೊತೆಗೆ ನಮ್ಮ ಕಿರಿಕ್ ಬ್ಯೂಟಿ ರಶ್ಮಿಕಾ ಕೂಡಾ ಇದ್ದಾರೆ. ಮುಂಜ್ಯಾ ಖ್ಯಾತಿಯ ಆದಿತ್ಯ ಈ ಸಿನಿಮಾಗೆ ಌಕ್ಷನ್ ಕಟ್ ಹೇಳಿದ್ದಾರೆ.

ಥಾಮಾ ಟ್ರೈಲರ್​ ನೋಡ್ತಿದ್ರೆ ಇದರಲ್ಲೊಂದು ಮಜವಾದ ಹಾರರ್ ಕಾಮಿಡಿ ಕಹಾನಿ ಇದೆ ಅನ್ನೋದು ಗೊತ್ತಾಗುತ್ತೆ. ರಶ್ಮಿಕಾ ಇಲ್ಲಿ  ಬೇತಾಳವಾಗಿ ಕಾಣಿಸಿಕೊಂಡಿದ್ದಾರೆ. ಹಿಂದೆಂದಿಗಿಂತಲೂ ಹಾಟ್ ಅವತಾರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಈ ಮಾದಕ ಬೇತಾಳವನ್ನ ನೋಡೋದಕ್ಕೆ ಫ್ಯಾನ್ಸ್ ಕಾತುರದಿಂದ ಕಾಯ್ತಾ ಇದ್ದಾರೆ.

ಥಾಮಾ ಸಿನಿಮಾ ದೀಪಾವಳಿಗೆ ವರ್ಲ್ಡ್​ವೈಡ್ ತೆರೆಗೆ ಬರಲಿದೆ. ಸದ್ಯ ರಿಲೀಸ್ ಆಗಿರೋ ಪಾಯ್ಸನ್ ಬೇಬಿ ಸಾಂಗ್​ ನೋಡಿದ ಮೇಲೆ, ಈ ಸಾರಿ ದೀಪಾವಳಿಗೆ ನಮ್ಮ ಹುಡುಗರು ಪಟಾಕಿ ಹಚ್ಚೋದೇ ಡೌಟು.  ಈ ಬಿಜಲಿಗಳ ಬಾಣ ಬಿರುಸಿನಂಥ ನರ್ತನದೆದ್ರು ಅದೆಂಥಾ ಪಟಾಕಿನೂ ಸಪ್ಪೇನೇ..ಏನಂತೀರಿ..! 
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
Read more