ದರ್ಶನ್ ಕೊಲೆ ಆರೋಪ ಹೊತ್ತು ಜೈಲಿಗೆ ಹೋದ ಮೇಲೆ ಈ ಕೃತ್ಯವನ್ನ ಗಟ್ಟಿಧ್ವನಿಯಲ್ಲಿ ಖಂಡಿಸಿ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ಹೇಳಿದವರಲ್ಲಿ ರಮ್ಯಾ ಕೂಡ ಒಬ್ರು. ರಮ್ಯಾ ಸ್ಯಾಂಡಲ್‌ವುಡ್ ನಟಿಯಷ್ಟೇ ಅಲ್ಲ ರಾಜಕಾರಣಿ ಕೂಡ…
ದರ್ಶನ್ (Darshan Thoogudeepa) ಮೇಲೆ ಕೊಲೆ ಆರೋಪ ಬಂದ ಮೇಲೆ ಅನೇಕ ಸ್ಯಾಂಡಲ್‌ವುಡ್ ನಟ-ನಟಿಯರು ಅವರಿಂದ ಅಂತರ ಕಾಯ್ದುಕೊಂಡ್ರು. ದರ್ಶನ್ ತಪ್ಪು ಮಾಡಿದ್ರೆ ಅವರಿಗೆ ಶಿಕ್ಷೆಯಾಗಲೇಬೇಕು ಅಂತ ಗಟ್ಟಿಧ್ವನಿಯಲ್ಲಿ ಹೇಳಿದ್ರು. ಆದ್ರೆ ಇನ್ನು ಕೆಲವರು ದರ್ಶನ್ ಏನೇ ಮಾಡಿದವರು ಅವರ ಸಂಗ ಬಿಡಲ್ಲ ಬೆಂಬಲಕ್ಕೆ ನಿಂತಿದ್ದಾರೆ. ರಮ್ಯಾ ಅಂಡ್ ರಕ್ಷಿತಾ ನಡುವೆ ಕೂಡ ಇದೇ ವಿಚಾರಕ್ಕೆ ವಾರ್ ನಡೀತಾ ಇದೆ.
ದರ್ಶನ್ ಪರ ರಕ್ಷಿತಾ.. ರೇಣುಕಾ ಪರ ರಮ್ಯಾ..! ರೇಣುಕಾ ಕೊಲೆ ಕೇಸ್ ವಿಚಾರದಲ್ಲಿ ‘RR’ ವಾರ್:
ಯೆಸ್ ದರ್ಶನ್ ಕೊಲೆ ಆರೋಪ ಹೊತ್ತು ಜೈಲಿಗೆ ಹೋದ ಮೇಲೆ ಈ ಕೃತ್ಯವನ್ನ ಗಟ್ಟಿಧ್ವನಿಯಲ್ಲಿ ಖಂಡಿಸಿ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ಹೇಳಿದವರಲ್ಲಿ ರಮ್ಯಾ ಕೂಡ ಒಬ್ರು. ರಮ್ಯಾ ಸ್ಯಾಂಡಲ್‌ವುಡ್ ನಟಿಯಷ್ಟೇ ಅಲ್ಲ ರಾಜಕಾರಣಿ ಕೂಡ. ಸಮಾಜದಲ್ಲಿ ನಡೆಯೋ ಆಗು ಹೋಗುಗಳ ಬಗ್ಗೆ ರಮ್ಯಾ ಮುಕ್ತವಾಗಿ ಮಾತನಾಡ್ತಾ ಇರ್ತಾರೆ ಅಂತೆಯೇ ದರ್ಶನ್ ಮೇಲೆ ಕೊಲೆ ಆರೋಪ ಬಂದಾಗಲೂ ಅವರು ದಾಸನಿಗೆ ಶಿಕ್ಷೆಯಾಗಬೇಕು ಅಂತ ಒತ್ತಾಯಿಸಿದ್ರು.
ದರ್ಶನ್ ಅರೆಸ್ಟ್ ಆದ ಆರು ತಿಂಗಳ ಬಳಿಕ ಅವರಿಗೆ ಹೈಕೋರ್ಟ್ನಿಂದ ಬೇಲ್ ಮಂಜೂರಾಯ್ತು. ದರ್ಶನ್ ಮಾತ್ರ ಅಲ್ಲ ಈ ಕೊಲೆ ಕೇಸ್ನ ಸಕಲ ಆರೋಪಿಗಳು ಸದ್ಯ ಬೇಲ್ ಪಡೆದು ಹೊರಗಿದ್ದಾರೆ. ಅಲ್ಲಿಗೆ ಈ ಕೇಸ್ ಕತೆ ಅಷ್ಟೇನಾ ಅಂತ ಜನ ಮಾತನಾಡಿಕೊಳ್ಳುವಷ್ಟರಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್ ನಡೆಯನ್ನ ಖಂಡಿಸಿ ವಿಚಾರಣೆ ನಡೆಸಿದೆ. ಈ ಬಗ್ಗೆ ಕೂಲಂಕುಶ ವಿಚಾರಣೆ ಮಾಡಿ ಹತ್ತು ದಿನಗಳಲ್ಲಿ ಆದೇಶ ಪ್ರಕಟಿಸಲಿದೆ. ಸುಪ್ರೀಂ ಕೋರ್ಟ್ನ ವಿಚಾರಣೆಯನ್ನ ನೋಡಿ ರಮ್ಯಾ ಹರ್ಷ ವ್ಯಕ್ತಪಡಿಸಿದ್ದಾರೆ.
ರಮ್ಯಾ ಪೋಸ್ಟ್ :
'ಭಾರತದಲ್ಲಿ ಜನಸಾಮಾನ್ಯರಿಗೆ ಸುಪ್ರೀಂ ಕೋರ್ಟ್ ಆಶಾಭಾವ ಮೂಡಿಸಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ'
ರಮ್ಯಾರ ಈ ಪೋಸ್ಟ್ ಸಹಜವಾಗೇ ದರ್ಶನ್ ಅಂದಾಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ. ರಮ್ಯಾ ಮೇಲೆ ಕಿಡಿಕಾರ್ತಾ ಇದ್ದಾರೆ. ರಮ್ಯಾ ಮೊದಲಿಂದಲೂ ಈ ವಿಚಾರದಲ್ಲಿ ಕ್ಲೀಯರ್ ಆಗಿದ್ದಾರೆ. ಅಚ್ಚರಿ ಅಂದ್ರೆ ಇತ್ತ ರಮ್ಯಾ ರೇಣುಕಾ ಪರ ನಿಂತ್ರೆ ಅತ್ತ ಅವರ ಗೆಳತಿ ದರ್ಶನ್ ಪರ ಗಟ್ಟಿಯಾಗಿ ನಿಂತಿದ್ದಾರೆ.
ಹೌದು ರಮ್ಯಾ ಌಂಡ್ ರಕ್ಷಿತಾ ಎರಡು ದಶಕಗಳ ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಟಾಪ್ ನಟಿಮಣಿ ಆಗಿದ್ದವರು. ಆಗ ಇಬ್ಬರ ನಡುವೆ ನಡೀತಿದ್ದ ಕೋಳಿ ಜಗಳ ಗಾಸಿಪ್ ಕಾಲಂಗಳಲ್ಲಿ ಸದ್ದು ಮಾಡ್ತಾ ಇತ್ತು. ಆದ್ರೆ ಮುಂದೆ ಈ ಇಬ್ಬರೂ ಕುಸ್ತಿ ಬಿಟ್ಟು ದೋಸ್ತಿಗಳಾದ್ರು. ತನನಂ ತನನಂ ಅನ್ನೊ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ರು.
ಇತ್ತೀಚಿಗೆ ರಕ್ಷಿತಾ ಸಹೋದರ ರಾಣಾ ಮದುವೆಗೆ ರಮ್ಯಾ ಖುದ್ದಾಗಿ ಹೋಗಿ ಶುಭ ಹಾರೈಸಿ ಬಂದಿದ್ರು. ಆದ್ರೆ ಅದೇ ಮದುವೆಗೆ ಬಂದಿದ್ದ ದರ್ಶನ್ ಕಡೆಗೆ ರಮ್ಯಾ ತಿರುಗಿಯೂ ನೋಡ್ಲಿಲ್ಲ. ರಮ್ಯಾ ದರ್ಶನ್ ವಿಚಾರದಲ್ಲಿ ತಮ್ಮ ಅಭಿಪ್ರಾಯ ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಚಾರದಲ್ಲಿ ನಾವು ತೊಂದರೆಗೊಳಗಾದ ರೇಣುಕಾ ಫ್ಯಾಮಿಲಿ ಬೆಂಬಲಕ್ಕೆ ನಿಲ್ಲಬೇಕು ಅನ್ನೊದು ರಮ್ಯಾ ನಿಲುವು. ಆದ್ರೆ ರಕ್ಷಿತಾ ಮಾತ್ರ ಈ ವಿಚಾರದಲ್ಲಿ ದಾಸನ ಪರ ನಿಂತುಕೊಂಡಿದ್ದಾರೆ.
ದರ್ಶನ್ ಜೈಲಿನಲ್ಲಿದ್ದಾಗಲೇ ರಕ್ಷಿತಾ ದರ್ಶನ್ನ ಭೇಟಿ ಮಾಡಿಕೊಂಡು ಬಂದಿದ್ರು. ದರ್ಶನ್ ಬೇಲ್ ಪಡೆದು ಹೊರಬಂದ ಮೇಲೆ ರಕ್ಷಿತಾಗೆ ಧನ್ಯವಾದ ಹೇಳಿದ್ರು. ರಕ್ಷಿತಾ ಸೋದರ ರಾಣಾ ಮದುವೆಗೂ ಹೋಗಿ ಬಂದಿದ್ರು. ಅಷ್ಟರ ಮಟ್ಟಿಗೆ ಇವರಿಬ್ಬರ ಸ್ನೇಹ ಮುಂದುವರೆದಿದೆ.
ದರ್ಶನ್ ಮತ್ತು ರಕ್ಷಿತಾ ಸ್ಯಾಂಡಲ್‌ವುಡ್ ನ ಒಂದು ಕಾಲದ ಸೂಪರ್ ಹಿಟ್ ಜೋಡಿ. ಇಬ್ಬರ ಕಾಂಬಿನೇಷನ್ನಲ್ಲಿ ಬಂದ ಕಲಾಸಿಪಾಳ್ಯ, ಸುಂಟಗಾಳಿ, ಮಂಡ್ಯ, ಅಯ್ಯ ಸಿನಿಮಾಗಳು ಸೂಪರ್ ಹಿಟ್ ಆಗಿದ್ವು.
ಹೌದು ದರ್ಶನ್‌ಗೆ ರಕ್ಷಿತಾ ಜೊತೆಗಿದ್ದಷ್ಟು ಬಾಂಧವ್ಯ ರಮ್ಯಾ ಜೊತೆಗೆ ಇರಲಿಲ್ಲ. ದರ್ಶನ್ ಅಂಡ್ ರಕ್ಷಿತಾ ಜೋಡಿ ಅತ್ತ ಫೇಮಸ್ ಆಗಿದ್ರೆ ಇತ್ತ ರಮ್ಯಾ-ಸುದೀಪ್ ಜೋಡಿ ಫೇಮಸ್ ಆಗಿತ್ತು. ದರ್ಶನ್ ರಕ್ಷಿತಾ ಜೋಡಿಯಲ್ಲಿ ನಾಲ್ಕು ಸಿನಿಮಾ ಬಂದ್ರೆ ಇತ್ತ ಸುದೀಪ್ ರಮ್ಯಾ ಜೋಡಿಯಲ್ಲೂ 4 ಸಿನಿಮಾ ಬಂದಿವೆ.
ದರ್ಶನ್ ಮತ್ತು ರಮ್ಯಾ ಒಟ್ಟಾಗಿ ನಟಿಸಿದ ಏಕೈಕ ಸಿನಿಮಾ ಅಂದ್ರೆ ಅದು ದತ್ತ. ದತ್ತ ಟೈಂನಲ್ಲಿ ಇಬ್ಬರ ನಡುವೆ ಬಾಂಧವ್ಯ ಚೆನ್ನಾಗೇ ಇತ್ತು. ಆದ್ರೆ ದರ್ಶನ್ ಮೊದಲ ಬಾರಿ ಪತ್ನಿ ಮೇಲೆ ಹಲ್ಲೆ ಮಾಡಿ ಜೈಲಿಗೆ ಹೋದಾಗಿನಿಂದಲೇ ರಮ್ಯಾ ದರ್ಶನ್ರಿಂದ ದೂರ ಆಗಿದ್ದಾರೆ.
ರೇಣುಕಾಸ್ವಾಮಿ ಮರ್ಡರ್ ವಿಚಾರದಲ್ಲಿಯಂತೂ ರಮ್ಯಾ ಸ್ಪಷ್ಟವಾಗಿ ದರ್ಶನ್ ತಪ್ಪು ಮಾಡಿದ್ರೆ ಅವರಿಗೆ ಕಠಿಣ ಶಿಕ್ಷೆಯಾಗಲೇಬೇಕು ಅಂತಿದ್ದಾರೆ. ಅತ್ತ ರಕ್ಷಿತಾ ಮಾತ್ರ ಕುಚಿಕು ಗೆಳೆಯನ ಜೊತೆಗೆ ನಿಂತಿದ್ದಾರೆ. ಈ ವಿಚಾರದಲ್ಲಿ ರಮ್ಯಾ-ರಕ್ಷಿತಾ ನಡುವೆ ಅಜಗಜಾಂತರ ವೆತ್ಯಾಸ ಇದೆ. ಸದ್ಯ ಈ ಇಬ್ಬರೂ ಗೆಳತಿಯರಾಗಿದ್ರೂ ಈ RR ವಾರ್ ಎಂದೂ ಕೊನೆಯಾಗಲ್ಲ ಅನ್ನೋದಕ್ಕ ಇದುವೇ ಸಾಕ್ಷಿ..!
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..