ಈ ವರ್ಷಾರಂಭದಿಂದ ಇಲ್ಲೀತನಕ ಕನ್ನಡ ಸಿನಿರಂಗ ಒಂದೇ ಒಂದು ಯಶಸ್ಸು ನೋಡಿರಲಿಲ್ಲ. 100ಕ್ಕೂ ಅಧಿಕ ಸಿನಿಮಾಗಳು ತೆರೆಗೆ ಬಂದರೂ ಯಾವ ಚಿತ್ರವೂ ಪ್ರೇಕ್ಷಕನ್ನ ಚಿತ್ರಮಂದಿರಕ್ಕೆ ಕರೆತರೋದ್ರಲ್ಲಿ ಯಶಸ್ವಿ ಆಗಿರಲಿಲ್ಲ. ಹೀಗಾದ್ರೆ ಮುಂದೇನು ಗತಿ ಅಂತ ಕಂಗಾಲಾಗಿದ್ದ ಕನ್ನಡ ಚಿತ್ರರಂಗ ಈಗ ನಿಟ್ಟುಸಿರು ಬಿಟ್ಟಿದೆ.
ಅಂತೂ ಇಂತೂ ಸ್ಯಾಂಡಲ್‌ವುಡ್ ಸಕ್ಸಸ್ ಹಳಿಗೆ ಮರಳಿದೆ. ಈ ಇಡೀ ವರ್ಷ ಪ್ರೇಕ್ಷಕರಿಲ್ಲದೇ ಭಣಗುಟ್ಟಿದ್ದ ಚಿತ್ರಮಂದಿರಗಳು ಕಳೆದ ವಾರಾಂತ್ಯ ಹೌಸ್ ಫುಲ್ ಆಗಿವೆ. ಒಂದರ ಬಳಿ ಒಂದು ತೆರೆಗೆ ಬಂದ ಎಕ್ಕ, ಜೂನಿಯರ್ ಮತ್ತು 'ಸು ಫ್ರಂ ಸೋ' ಸಿನಿಮಾಗಳು ಪ್ರೇಕ್ಷರರನ್ನ ಚಿತ್ರಮಂದಿರಕ್ಕೆ ಮರಳಿ ಕರೆತಂದಿವೆ.
ಈ ವರ್ಷಾರಂಭದಿಂದ ಇಲ್ಲೀತನಕ ಕನ್ನಡ ಸಿನಿರಂಗ ಒಂದೇ ಒಂದು ಯಶಸ್ಸು ನೋಡಿರಲಿಲ್ಲ. 100ಕ್ಕೂ ಅಧಿಕ ಸಿನಿಮಾಗಳು ತೆರೆಗೆ ಬಂದರೂ ಯಾವ ಚಿತ್ರವೂ ಪ್ರೇಕ್ಷಕನ್ನ ಚಿತ್ರಮಂದಿರಕ್ಕೆ ಕರೆತರೋದ್ರಲ್ಲಿ ಯಶಸ್ವಿ ಆಗಿರಲಿಲ್ಲ. ಹೀಗಾದ್ರೆ ಮುಂದೇನು ಗತಿ ಅಂತ ಕಂಗಾಲಾಗಿದ್ದ ಕನ್ನಡ ಚಿತ್ರಕರ್ಮಿಗಳು ಈಗ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ವಾರಾಂತ್ಯ ಸು ಫ್ರಂ ಸೋ ಸಿನಿಮಾದ ಬಹುತೇಕ ಎಲ್ಲಾ ಶೋಗಳು ಹೌಸ್ಫುಲ್ ಆಗಿದೆ.
ಕರಾವಳಿ ಫ್ಲೆವರ್ ಉಳ್ಳ ಹಾರರ್ ಕಾಮಿಡಿ ಸಿನಿಮಾ ಸು ಫ್ರಂ ಸೋ ಚಿತ್ರವನ್ನ ಜನ ಮುಗಿಬಿದ್ದು ನೋಡ್ತಾ ಇದ್ದಾರೆ. ಹೆಚ್ಚು ಪ್ರಚಾರವೇ ಇಲ್ಲದೇ ಬಂದ ಈ ಸಿನಿಮಾ ತನ್ನ ಕಂಟೆಂಟ್ನಿಂದಲೇ ಗೆದ್ದು ಬೀಗಿದೆ. ಒಳ್ಳೆ ಸಿನಿಮಾ ಬಂದ್ರೆ ಜನ ಚಿತ್ರಮಂದಿರಕ್ಕೆ ಬಂದೇ ಬರ್ತಾರೆ ಅನ್ನೋದು ಮತ್ತೆ ಪ್ರೂವ್ ಆಗಿದೆ.
ಇನ್ನೂ ಇದಕ್ಕೂ ಒಂದು ವಾರ ಮುನ್ನ ತೆರೆಗೆ ಬಂದ ಎಕ್ಕ, ಜೂನಿಯರ್ ಸಿನಿಮಾಗಳು ಕೂಡ ಸಕ್ಸಸ್ ಕಂಡಿವೆ. ಯುವರಾಜ್ಕುಮಾರ್ ನಟನೆಯ ಎಕ್ಕ ಸಿನಿಮಾಗೆ ಪ್ರೇಕ್ಷಕರ ಮೆಚ್ಚುಗೆ ಸಿಕ್ಕಿದೆ. ಎಕ್ಕ ಬಾಕ್ಸಾಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡ್ತಾ ಇದೆ.
ಇನ್ನೂ ಕಿರೀಟಿ ರೆಡ್ಡಿ ನಟನೆಯ ಜೂನಿಯರ್ ಮೂವಿ ಫ್ಯಾಮಿಲಿ ಆಡಿಯನ್ಸ್ ಮನಸು ಗೆದ್ದಿದೆ. ರವಿಚಂದ್ರನ್, ಸುಧಾರಾಣಿ, ಜೆನಿಲಿಯಾ ಶ್ರೀಲೀಲಾ ನಟಿಸಿರೋ ಈ ಮೂವಿ ಪಕ್ಕಾ ಫ್ಯಾಮಿಲಿ ಎಂಟರ್ಟೈನರ್ ಅನ್ನಿಸಿಕೊಂಡಿದೆ.
ಮತ್ತೀಗ ಸು ಫ್ರಂ ಸೋ ಕೂಡ ಭರ್ಜರಿ ಪ್ರದರ್ಶನ ಕಾಣ್ತಾ ಇದ್ದು, ಒಂದರ ನಂತರ ಒಂದು ಹ್ಯಾಟ್ರಿಕ್ ಸಿನಿಮಾಗಳು ಗೆಲುವು ಕಂಡಿವೆ. ಓಟಿಟಿ ಭರಾಟೆ ನಡುವೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರೋದನ್ನೇ ಮರೆತಿದ್ದಾರೆ ಅಂತ ನಿರಾಶರಾಗಿದ್ದ ಸ್ಯಾಂಡಲ್‌ವುಡ್ ಫಿಲ್ಮ್ ಮೇಕರ್ಸ್ಗೆ ಈ ಗೆಲುವುಗಳು ಹೊಸ ಜೋಶ್ ತಂದುಕೊಟ್ಟಿವೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..