Nov 16, 2021, 5:50 PM IST
ಬೆಂಗಳೂರು (ನ. 16): ಅದು 1975, ಮಾರ್ಚ್ 17 ರಂದು ಚೆನ್ನೈ ಆಸ್ಪತ್ರೆಯಲ್ಲಿ ಡಾ. ರಾಜ್ ದಂಪತಿಗೆ ಹುಟ್ಟಿದ ಕಂದ ಪುನೀತ್ ರಾಜ್‌ಕುಮಾರ್. ಸಹೋದರರಾದ ಶಿವಣ್ಣ, ರಾಘಣ್ಣ, ಸಹೋದರಿಯರಾದ ಪೂರ್ಣಿಮಾ, ಲಕ್ಷ್ಮೀ ಅವರ ಮುದ್ದಿನ ತಮ್ಮ, ಪ್ರೀತಿಯ ಅಪ್ಪುವಾಗಿ ಬೆಳೆಯುತ್ತಾರೆ. 6 ತಿಂಗಳಿಗೆ 'ಪ್ರೇಮದ ಕಾಣಿಕೆ' ಮೂಲಕ ತೆರೆಯೇರಿದ ಅದೃಷ್ಟವಂತ. ಆ ನಂತರ ಸಾಲು ಸಾಲು ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸುತ್ತಾರೆ. 'ಬೆಟ್ಟದ ಹೂ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಾರೆ.
Puneeth Rajkumar: ನಾಗೇಂದ್ರ ಪ್ರಸಾದ್, ಗುರುಕಿರಣ್ ನುಡಿ ನಮನಕ್ಕೆ ಕಿಚ್ಚ ಸುದೀಪ್ ಧ್ವನಿ
ಅಪ್ಪನ ಎದುರು ನಟಿಸಿ ಸೈ ಎನಿಸಿಕೊಳ್ಳುತ್ತಾರೆ. ಚಿಕ್ಕಂದಿನಲ್ಲಿಯೇ ನಟನೆ ಮಾತ್ರವಲ್ಲ ಗಾಯನದಲ್ಲಿಯೂ ಹೆಸರು ಮಾಡುತ್ತಾರೆ. 2002 ರಲ್ಲಿ ನಾಯಕನಟನಾಗಿ ತೆರೆ ಮೇಲೆ ಬರುತ್ತಾರೆ. ಅಲ್ಲಿಂದ ಇಲ್ಲಿಯವರೆಗೆ 27 ಚಿತ್ರಗಳಲ್ಲಿ ನಟಿಸಿದ್ಧಾರೆ. 6 ರಾಜ್ಯ ಪ್ರಶಸ್ತಿ, 5 ಫಿಲ್ಮ್‌ಫೇರ್ ಪ್ರಶಸ್ತಿ, 4 ಸೈಮಾ ಪ್ರಶಸ್ತಿಗಳನ್ನು ಪಡೆದಿದ್ಧಾರೆ. ಪುನೀತ್ ದಿಢೀರನೇ ನಮ್ಮನ್ನಗಲಿ ಹೋಗಿರುವುದು ಅವರ ಕುಟುಂಬಕ್ಕೆ, ಚಿತ್ರರಂಗಕ್ಕೆ, ಇಡೀ ರಾಜ್ಯಕ್ಕೆ, ಅಭಿಮಾನಿಗಳಿಗೆ ದೊಡ್ಡ ಆಘಾತ. ಅಪ್ಪು ಅವರ ನಟನೆ, ಸಮಾಜಸೇವೆ, ಒಳ್ಳೆಯ ಕೆಲಸಗಳು, ಅವರ ವ್ಯಕ್ತಿತ್ವ ಯಾವತ್ತೂ ಚಿರಸ್ಥಾಯಿ.