
ದರ್ಶನ್ ಫ್ಯಾನ್ಸ್ ಇಲ್ಲಿಗೆ ಹೋಗಿ ಫೋಟೋ, ವಿಡಿಯೋ ತೆಗೆದುಕೊಂಡು ಖುಷಿ ಪಡ್ತಾರೆ. ಈ ರೆಸ್ಟೋರೆಂಟ್ನ ಖುದ್ದು ದರ್ಶನ್ ಉದ್ಘಾಟನೆ ಮಾಡಿದ್ರು. ಹಲವು ಸಾರಿ ದರ್ಶನ್ ಕೂಡ ಇಲ್ಲಿಗೆ ಭೇಟಿ ಕೊಡ್ತಾರೆ. ದರ್ಶನ್ ಸ್ನೇಹಿತ ವಿನಯ್ ಇದರ ಒಡೆಯನಾಗಿದ್ದು, ಇದರ ಜೊತೆಗೆ ದರ್ಶನ್‌ಗೆ ಬಹಳಾನೇ ನಂಟಿದೆ ಎನ್ನಲಾಗಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಎ-1 ಆಗಿರೋ ಪವಿತ್ರಾ ಗೌಡ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಪವಿತ್ರಾ ಡಿ ಬಾಸ್ ಸಫಾರಿಗೆ ವಿಸಿಟ್ ಕೊಟ್ಟಿದ್ದಾರೆ. ಈ ಡಿ ಬಾಸ್ ಸಫಾರಿ ಇರೋದು ಆರ್ ಆರ್ ನಗರದ ಸ್ಟೋನಿ ಬ್ರೂಕ್ ಪಬ್ನಲ್ಲಿ. ರೇಣುಕಾಸ್ವಾಮಿ ಮರ್ಡರ್ ಗೆ ಸ್ಕೆಚ್ ಹಾಕಿದ್ದೇ ಈ ಜಾಗದಲ್ಲಿ ಅಂತ ಹೇಳಲಾಗುತ್ತೆ. ಆಗ ಸುಪಾರಿ ಕೊಟ್ಟ ಜಾಗದಲ್ಲಿ ಈಗ ಸಫಾರಿ ಮಾಡ್ತಿದ್ದಾರೆ ಪವಿತ್ರಾ ಗೌಡ.
ಹೌದು, ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿರೋ ಪವಿತ್ರಾ ಇತ್ತೀಚಿಗೆ ದಿ ಬಾಸ್ ಸಫಾರಿಗೆ ಹೋಗಿ ರೀಲ್ಸ್ ಮಾಡಿದ್ದಾರೆ. ಡಿ ಬಾಸ್ ಅನ್ನೋ ಬೋರ್ಡ್ ಮುಂದೆ ನಾಚುತ್ತಾ, ನಲಿಯುತ್ತಾ ಪೋಸ್ ಕೊಟ್ಟಿದ್ದಾರೆ.
ಅಷ್ಟಕ್ಕೂ ಈ ಡಿ ಬಾಸ್ ಸಫಾರಿ ಇರೋದು ಬೆಂಗಳೂರಿನ ಆರ್ ಆರ್ ನಗರದಲ್ಲಿರೋ ಸ್ಟೋನಿ ಬ್ರೂಕ್ ಪಬ್ನಲ್ಲಿ. ಇದು ಭಾರತದ ಫಸ್ಟ್ ಸ್ಟ್ರೀಮ್ ರೆಸ್ಟೋರೆಂಟ್. ಇದಕ್ಕೆ ಡಿ ಬಾಸ್ ಸಫಾರಿ ಅಂತ ಹೆಸರು ಇಡಲಾಗಿದೆ. ಈ ಸ್ಟೋನಿ ಬ್ರೂಕ್ ಡಿ ಬಾಸ್ ಸಫಾರಿಯ ವಿಶೇಷತೆ ಏನೆಂದರೆ ಖುದ್ದು ದರ್ಶನ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ಪ್ರಾಣಿಗಳ ಹಾಗೂ ಪಕ್ಷಿಗಳ ಫೋಟೋಗಳ ಫ್ರೇಮ್ಗಳನ್ನ ಅಳವಡಿಸಲಾಗಿದೆ. ಈ ರೆಸ್ಟೋರೆಂಟ್ನಲ್ಲಿರೋ ಆನೆ, ಚಿರತೆ, ಹಲವಾರು ವಿಧಧ ಪಕ್ಷಿಗಳ ಫೋಟೋಗಳನ್ನು ಖುದ್ದು ದರ್ಶನ್ ಅವರೇ ಕ್ಲಿಕ್ಕಿಸಿದ್ದಾರೆ. ದರ್ಶನ್ ಅವರ ಅಭಿಮಾನಿಗಳ ಗಮನ ಸೆಳೆಯುವ ಸಲುವಾಗಿ ಹೀಗೆ ಮಾಡಿದ್ದಾರೆ ಇದರ ಮಾಲೀಕರು.
ದರ್ಶನ್ ಫ್ಯಾನ್ಸ್ ಇಲ್ಲಿಗೆ ಹೋಗಿ ಫೋಟೋ, ವಿಡಿಯೋ ತೆಗೆದುಕೊಂಡು ಖುಷಿ ಪಡ್ತಾರೆ. ಈ ರೆಸ್ಟೋರೆಂಟ್ನ ಖುದ್ದು ದರ್ಶನ್ ಉದ್ಘಾಟನೆ ಮಾಡಿದ್ರು. ಹಲವು ಸಾರಿ ದರ್ಶನ್ ಕೂಡ ಇಲ್ಲಿಗೆ ಭೇಟಿ ಕೊಡ್ತಾರೆ. ದರ್ಶನ್ ಸ್ನೇಹಿತ ವಿನಯ್ ಇದರ ಒಡೆಯನಾಗಿದ್ದು, ಇದರ ಜೊತೆಗೆ ದಾಸನಿಗೆ ಬಹಳಾನೇ ನಂಟಿದೆ.
ಹೌದು ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಅರೆಸ್ಟ್ ಆದ ಮೇಲೆ ಪೊಲೀಸರು ಈ ಸ್ಟೋನಿ ಬ್ರೂಕ್ ಪಬ್ನ ಸೀಜ್ ಮಾಡಿಸಿದ್ರು. ಯಾಕಂದ್ರೆ ಕೊಲೆಗೂ ಮುನ್ನಾ ದರ್ಶನ್ , ವಿನಯ್ ಮತ್ತು ಇತರರು ಇದೇ ಪಬ್ನಲ್ಲಿ ಪಾರ್ಟಿ ಮಾಡಿದ್ರು ಅನ್ನೋ ವಿಷ್ಯ ಪೊಲೀಸ್ ತನಿಖೆಯಲ್ಲಿ ಬಯಲಿಗೆ ಬಂದಿತ್ತು. ಸೋ ಇಲ್ಲಿ ಸ್ಥಳ ಮಹಜರು ಮಾಡಿಸಿ ಕೆಲ ಕಾಲ ಪಬ್ನ ಬಂದ್ ಮಾಡಿಸಲಾಗಿತ್ತು. ಈ ಪಬ್ನ ಒಡೆಯ ವಿನಯ್ ಕೂಡ ಈ ಕೊಲೆ ಕೇಸ್ನಲ್ಲಿ ಆರೋಪಿ ಆಗಿದ್ದಾರೆ.
ಸದ್ಯ ವಿನಯ್ ಕೂಡ ಬೇಲ್ ಪಡೆದು ಹೊರಬಂದಿದ್ದು ಈ ಪಬ್ ಮತ್ತೆ ರೀ ಓಪನ್ ಆಗಿದೆ. ಅಚ್ಚರಿ ಅಂದ್ರೆ ಶುಕ್ರವಾರ ಪವಿತ್ರಾ ಗೌಡ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ. ದರ್ಶನ್ ಸೆರೆಹಿಡಿದ ಪೋಟೋಗಳ ಮಂದೆ ನಿಂತು ರೀಲ್ಸ್ ಮಾಡಿದ್ದಾರೆ.
ಒಟ್ಟಾರೆ ಡಿ ಬಾಸ್ ಸಫಾರಿಯಲ್ಲಿ ಪವಿತ್ರಾ ಗೌಡ ಸವಾರಿ ಮಾಡಿರೋದು ಸಖತ್ ಸದ್ದು ಸುದ್ದಿ ಮಾಡ್ತಾ ಇದೆ. ದರ್ಶನ್ ಅಡ್ಡಾಗೆ ಬಂದಿರೋ ಪವಿತ್ರಾ ಮತ್ತೆ ದಾಸನಿಗೆ ಹತ್ತಿರವಾದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.