ಎರಡನೇ ಹೆಜ್ಜೆಯಿಟ್ಟ ಮಾಲಾಶ್ರೀ ಮಗಳು; ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಕೊಟ್ಟ ಆರಾಧನಾ!

ಎರಡನೇ ಹೆಜ್ಜೆಯಿಟ್ಟ ಮಾಲಾಶ್ರೀ ಮಗಳು; ಕಾಯುತ್ತಿದ್ದವರಿಗೆ ಸಿಹಿ ಸುದ್ದಿ ಕೊಟ್ಟ ಆರಾಧನಾ!

Published : Aug 07, 2025, 12:25 PM IST

ಕಾಟೇರ ಸಿನಿಮಾದಲ್ಲಿ ದರ್ಶನ್​ರಂಥಾ ಜನಪ್ರಿಯ ಸ್ಟಾರ್ ಜೊತೆ ನಟಿಸೋ ಅವಕಾಶ ಪಡೆದ ಆರಾಧನಾ ಮೊದಲ ಹೆಜ್ಜೆಯಲ್ಲೇ ಸೂಪರ್ ಹಿಟ್ ಕೊಟ್ರು. ಕಾಟೇರ ಮೂವಿ ಇಂಡಸ್ಟ್ರಿ ಹಿಟ್ ಆಯ್ತು. ಪಸಂದಾಗವ್ನೆ ಅಂತ ಹಾಡಿ ಕುಣಿದ ಆರಾಧನಾ ನಟನೆಯೂ ಪಸಂದಾಗೇ ಇತ್ತು.

ಕಾಟೇರ ಸಿನಿಮಾ ಮೂಲಕ ಬಣ್ಣದ ದುನಿಯಾಗೆ ಬಂದ ಆರಾಧನಾ (Aradhana) ಅದಾದ್ ಮೇಲೆ ಎಲ್ಲಿ ಕಾಣೆಯಾದ್ರು ಅಂತ ಫ್ಯಾನ್ಸ್ ಹುಡುಕ್ತಾ ಇದ್ರು. ಇದೀಗ ಆರಾಧನಾ ಮತ್ತೊಂದು ಸ್ಟಾರ್ ಸಿನಿಮಾ ಮೂಲಕವೇ ಮತ್ತೆ ಸಿನಿಪ್ರಿಯರ ಮುಂದೆ ಬರೋದಕ್ಕೆ ಸಜ್ಜಾಗಿದ್ದಾರೆ.

ಮತ್ತೊಂದು ಸ್ಟಾರ್ ಚಿತ್ರಕ್ಕೆ ನಾಯಕಿಯಾದ ಆರಾಧನಾ
ಹೌದು, ಕಾಟೇರ ಸಿನಿಮಾದಲ್ಲಿ ದರ್ಶನ್ ಜೊತೆ ನಾಯಕಿಯಾಗೋ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದು ಆರಾಧನಾ. ಕನಸಿನ ರಾಣಿ  ಮಾಲಾಶ್ರೀ (Malashri) ಮತ್ತು ಕೋಟಿ ನಿರ್ಮಾಪಕ ರಾಮು ಅವರ ಪುತ್ರಿ ಈಕೆ. ಸೋ ಚಿಕ್ಕಂದಿನಿಂದಲೂ ಸಿನಿರಂಗದ ಒಡನಾಟದೊಂದಿಗೆ ಬೆಳೆದ ಆರಾಧನಾ ನಾಯಕಿಯಾಗ್ತಿನಿ ಅಂದಾಗ ಸಿಕ್ಕಿದ್ದು ಬಿಗ್ ಸ್ಟಾರ್ ಸಿನಿಮಾ.

ಕಾಟೇರ ಸಿನಿಮಾದಲ್ಲಿ ದರ್ಶನ್​ರಂಥಾ ಜನಪ್ರಿಯ ಸ್ಟಾರ್ ಜೊತೆ ನಟಿಸೋ ಅವಕಾಶ ಪಡೆದ ಆರಾಧನಾ ಮೊದಲ ಹೆಜ್ಜೆಯಲ್ಲೇ ಸೂಪರ್ ಹಿಟ್ ಕೊಟ್ರು. ಕಾಟೇರ ಮೂವಿ ಇಂಡಸ್ಟ್ರಿ ಹಿಟ್ ಆಯ್ತು. ಪಸಂದಾಗವ್ನೆ ಅಂತ ಹಾಡಿ ಕುಣಿದ ಆರಾಧನಾ ನಟನೆಯೂ ಪಸಂದಾಗೇ ಇತ್ತು.

ಆದ್ರೆ ಇಷ್ಟು ದೊಡ್ಡ ಹಿಟ್ ಸಿನಿಮಾ ಕೊಟ್ಟ ಮೇಲೂ ಆರಾಧನಾ ಸೈಲೆಂಟ್ ಆಗಿದ್ದೇಕೆ..? ಕಾಟೇರ ಬಂದು ಒಂದೂವರೇ ವರ್ಷ ಕಳೆದರೂ ಒಂದೇ ಒಂದು ಸಿನಿಮಾ ಮಾಡಿಲ್ಲವೇಕೆ..? ಈ ಪಸಂದ್ ಚೆಲುವೆಗೆ ಆಫರ್ಸ್ ಬರ್ತಾ ಇಲ್ವಾ..? ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ರು. ಅದಕ್ಕೀಗ ಉತ್ತರ ಸಿಕ್ಕಿದೆ.

ರಿಯಲ್ ಸ್ಟಾರ್ ಉಪ್ಪಿಗೆ (Real Star Upendra) ನಾಯಕಿಯಾದ ಆರಾಧನಾ, ಉಪೇಂದ್ರ ನೆಕ್ಸ್ಟ್ ಲೆವೆಲ್ ಮೂವಿನಲ್ಲಿ ಕಾಟೇರ ಬ್ಯೂಟಿ:
ಯೆಸ್ ಉಪೇಂದ್ರ ನಟನೆಯಲ್ಲಿ ಬರಲಿರೋ ನೆಕ್ಸ್ಟ್ ಲೆವೆಲ್​ ಸಿನಿಮಾಗೆ ಆರಾಧನಾ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ತರುಣ್ ಶಿವಪ್ಪ ನಿರ್ಮಾಣ ಮಾಡ್ತಾ ಇರೋ ಅರವಿಂದ್ ಕೌಶಿಕ್ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ ಜೊತೆಗೆ ಆರಾಧನಾ ನಾಯಕಿಯಾಗಿ ನಟಿಸಲಿದ್ದಾರೆ.

ಅಲ್ಲಿಗೆ ಇಷ್ಟು ದಿನ ಕಾದಿದ್ದಕ್ಕೂ ಆರಾಧನಾಗೆ ಮತ್ತೊಂದು ಸ್ಟಾರ್ ಸಿನಿಮಾನೇ ಸಿಕ್ಕಿದೆ. ಕಾಟೇರ ಬ್ಯೂಟಿ ರಿಯಲ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದು, ನೆಕ್ಸ್ಟ್ ಲೆವಲ್ ಮೂವಿ ಬಗ್ಗೆ ನೆಕ್ಸ್ಟ್ ಲೆವೆಲ್ ನಿರೀಕ್ಷೆ ಮೂಡ್ತಾ ಇದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...
 

24:18ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
Read more