ಕಿತ್ತೋಗಿರೋ ನನ್ ಮಕ್ಕಳ ಬಗ್ಗೆ ತಲೆಕೆಡಿಸಿಕೋಬೇಡಿ ಅಂದಿದ್ಯಾಕೆ ಕಿಚ್ಚ ಸುದೀಪ್; ಗೂಡಾರ್ಥ ಏನಿದೆ?

ಕಿತ್ತೋಗಿರೋ ನನ್ ಮಕ್ಕಳ ಬಗ್ಗೆ ತಲೆಕೆಡಿಸಿಕೋಬೇಡಿ ಅಂದಿದ್ಯಾಕೆ ಕಿಚ್ಚ ಸುದೀಪ್; ಗೂಡಾರ್ಥ ಏನಿದೆ?

Published : Sep 03, 2025, 01:06 PM IST

ಕಳೆದ ತಿಂಗಳು ದರ್ಶನ್ ಫ್ಯಾನ್ಸ್ ಮತ್ತು ರಮ್ಯಾ ನಡುವೆ ಮಹಾಕದನವೇ ನಡೆದು ಹೋಯ್ತು. ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಅಂದಿದ್ದಕ್ಕೆ ರಮ್ಯಾಗೆ ಕೆಟ್ಟಾಕೊಳಕಾಗಿ ಸಂದೇಶ ಕಳಿಸಿದ್ರು ದರ್ಶನ್ ಫ್ಯಾನ್ಸ್. ರಮ್ಯಾ ಅವುಗಳನ್ನ ನೋಡಿಕೊಂಡು ಸುಮ್ಮನೇ ಇರಲಿಲ್ಲ.

ಇತ್ತೀಚಿಗೆ ದರ್ಶನ್ ಅಭಿಮಾನಿಗಳು ಮತ್ತು ರಮ್ಯಾ ನಡುವೆ ನಡೆದ ಸೋಷಿಯಲ್ ಮಿಡಿಯಾ ವಾರ್ ಬಗ್ಗೆ ಗೊತ್ತೇ ಇದೆ. ಕೆಟ್ಟ ಕಾಮೆಂಟ್ ಮಾಡಿದ್ದ ಕೆಡಿ ಫ್ಯಾನ್ಸ್​ಗೆ ರಮ್ಯಾ ಜೈಲು ದರ್ಶನ ಮಾಡಿಸಿದ್ದಾರೆ. ಈ ನಡುವೆ ಕಿಚ್ಚ ಸುದೀಪ್ ತಮ್ಮ ಫ್ಯಾನ್ಸ್​ಗೆ ಈ ಬಗ್ಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಫ್ಯಾನ್ಸ್​ ವಾರ್​ಗೆ ಫುಲ್ ಸ್ಟಾಪ್ ಇಟ್ಟ ಸುದೀಪ್..!
ಯೆಸ್ ಕಿಚ್ಚ ಸುದೀಪ್ ಬರ್ತ್​​ಡೇ ಬೆಂಗಳೂರಿನ ನಂದಿ ಲಿಂಕ್ಸ್​ ಗ್ರೌಂಡ್​ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಅಭಿಮಾನಿಗಳ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಿಸಿರೋ ಕಿಚ್ಚ, ಅದರ ಜೊತೆಗೆ ಫ್ಯಾನ್ಸ್​ಗೆ ಒಂದು ವಾರ್ನಿಂಗ್ ಕೂಡ ಮಾಡಿದ್ದಾರೆ. ತನ್ನ ಬಗ್ಗೆ ಯಾರೇ , ಎಷ್ಟೇ ಕೆಟ್ಟದಾಗಿ ಮಾತನಾಡಿದರೂ ನೀವು ಮಾತ್ರ ಪ್ರತಿಕ್ರಿಯೆ ಕೊಡಬೇಡಿ ಅಂತ ಫ್ಯಾನ್ಸ್​ಗೆ ತಾಕೀತು ಮಾಡಿದ್ದಾರೆ.

ಕಿತ್ತೋಗಿರೋ ನನ್ ಮಕ್ಳು.. ಅಂದಿದ್ಯಾರಿಗೆ ಕಿಚ್ಚ..?
ಕಿತ್ತೋಗಿರೋ ನನ್ ಮಕ್ಕಳ ಬಗ್ಗೆ ತಲೆಕೆಡಿಸಿಕೋಬೇಡಿ ಅಂತ ಅಂದಿರೋ ಕಿಚ್ಚನ ಮಾತು ಎಲ್ಲರ ಹುಬ್ಬೇರುವಂತೆ ಮಾಡಿದೆ. ಅಷ್ಟಕ್ಕೂ  ಕಿತ್ತೋಗಿರೋ ನನ್ ಮಕ್ಳು ಅಂತ ಕಿಚ್ಚ ಅಂದಿದ್ಯಾರಿಗೆ ಅಂತ ಸಪರೇಟಾಗಿ ಹೇಳೊದೇ ಬೇಡ ಅಲ್ವಾ. ಯಾಕಂದ್ರೆ ಕಳೆದ ಕೆಲ ದಿನಗಳಿಂದ ನಡೆದ ಫ್ಯಾನ್ಸ್ ವಾರ್ ವಿಷ್ಯ ನಿಮಗೆ ಗೊತ್ತೇ ಇದೆ.

ರಮ್ಯಾಗೆ ಅಶ್ಲೀಲ ಕಾಮೆಂಟ್​​ ಮಾಡಿದ್ದ  ‘ಡಿ’ ಫ್ಯಾನ್ಸ್, ದಾಸನ ಕಿಡಿಗೇಡಿ ಫ್ಯಾನ್ಸ್​ಗೆ ಜೈಲಿನ ‘ದರ್ಶನ:
ಹೌದು ಕಳೆದ ತಿಂಗಳು ದರ್ಶನ್ ಫ್ಯಾನ್ಸ್ ಮತ್ತು ರಮ್ಯಾ ನಡುವೆ ಮಹಾಕದನವೇ ನಡೆದು ಹೋಯ್ತು. ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಅಂದಿದ್ದಕ್ಕೆ ರಮ್ಯಾಗೆ ಕೆಟ್ಟಾಕೊಳಕಾಗಿ ಸಂದೇಶ ಕಳಿಸಿದ್ರು ದರ್ಶನ್ ಫ್ಯಾನ್ಸ್. ರಮ್ಯಾ ಅವುಗಳನ್ನ ನೋಡಿಕೊಂಡು ಸುಮ್ಮನೇ ಇರಲಿಲ್ಲ. ಕಮೀಷನರ್​ಗೆ ದೂರು ಕೊಟ್ಟು ಕಿಡಿಗೇಡಿ ಫ್ಯಾನ್ಸ್​ಗೆ ಜೈಲಿನ ದರ್ಶನ ಆಗುವಂತೆ ಮಾಡಿದ್ರು.

ಈ ವಿಚಾರದ ಬಗ್ಗೆ ಮಾತನಾಡುವಾಗ ರಮ್ಯಾ ಒಂದು ವಿಷ್ಯ ಹೇಳಿದ್ರು.  ದರ್ಶನ್ ಫ್ಯಾನ್ಸ್​​ ತನಗೆ ಮಾತ್ರ ಅಲ್ಲ ಸುದೀಪ್ ಮತ್ತು ಯಶ್​​ ಬಗ್ಗೆ ಮತ್ತವರ ಫ್ಯಾಮಿಲಿ ಬಗ್ಗೆನೂ ಅಶ್ಲೀಲ ಕಾಮೆಂಟ್ ಮಾಡ್ತಾರೆ ಅನ್ನೋದನ್ನ ಹೇಳಿಕೊಂಡಿದ್ರು.

ಕಿಚ್ಚ-ದಾಸನ ಫ್ಯಾನ್ಸ್ ನಡುವೆ ದೋಸ್ತಿ-ಕುಸ್ತಿ..!
ಹೌದು ದರ್ಶನ್ ಮತ್ತು ಸುದೀಪ್ ಫ್ಯಾನ್ಸ್​​​ ನಡುವಿನ ದೋಸ್ತಿ ಅಂಡ್ ಕುಸ್ತಿಗೆ ತುಂಬಾ ದೊಡ್ಡ ಇತಿಹಾಸ ಇದೆ. ಸುದೀಪ್ ಮತ್ತು ದರ್ಶನ್ ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಚಿತ್ರರಂಗಕ್ಕೆ ಬಂದವರು. ಇಬ್ಬರೂ ಒಟ್ಟೋಟ್ಟಿಗೆ ಸ್ಟಾರ್ ಆಗಿ ಬೆಳೆದವರು. ಇಬ್ಬರ ನಡುವೆ ಪೈಪೋಟಿ ಇದ್ದ ಕಾಲದಲ್ಲಿ ಫ್ಯಾನ್ಸ್ ನಡುವೆಯೂ ಜಟಾಪಟಿ ಇತ್ತು. ಆದ್ರೆ ಯಾವಾಗ ದರ್ಶನ್ ಮತ್ತು ಸುದೀಪ್ ಕುಚಿಕುಗಳಾದ್ರೋ ಇವರ ಫ್ಯಾನ್ಸ್ ಕೂಡ ಕುಚಿಕುಗಳಾಗಿಬಿಟ್ರು.

8 ವರ್ಷ ಹಿಂದೆ ದರ್ಶನ್ ಮತ್ತು ಸುದೀಪ್ ದೋಸ್ತಿ ಮುರಿದು ಬಿತ್ತು. ಅಲ್ಲಿಂದ ಅಗೈನ್ ದಾಸ & ಕಿಚ್ಚನ ಫ್ಯಾನ್ಸ್ ನಡುವೆ ಕುಸ್ತಿ ಶುರುವಾಯ್ತು. ಅದು ಈಗಲೂ ಮುಂದುವರೆದಿದೆ. ಕಿಚ್ಚ ಌಂಡ್ ದಾಸನ ಫ್ಯಾನ್ಸ್ ನಡುವೆ ಸೋಷಿಯಲ್ ಮಿಡಿಯಾ ವಾರ್ ನಡೀತಾನೇ ಇರುತ್ತೆ.

ಈ ಟೈಂನಲ್ಲೇ ಸುದೀಪ್ ತಮ್ಮ ಫ್ಯಾನ್ಸ್​ಗೆ ಬುದ್ದಿಮಾತು ಹೇಳಿದ್ದಾರೆ. ಯಾರು ಏನಾದ್ರೂ ಅಂದುಕೊಳ್ಳಲಿ ನೀವು ಸುಮ್ಮನೆ ಇರಿ ಅಂತ ಸಂದೇಶ ಕೊಟ್ಟಿದ್ದಾರೆ. ದರ್ಶನ್ ಕೂಡ ಇದೇ ರೀತಿ ತಮ್ಮ ಫ್ಯಾನ್ಸ್​ಗೆ ಬುದ್ದಿ ಮಾತು ಹೇಳಿಬಿಟ್ಟಿದ್ರೆ, ಇವತ್ತು ಅವರ ಅಭಿಮಾನಿಗಳು ಜೈಲ್ ದರ್ಶನ ಮಾಡುವ ಪ್ರಮೇಯವೇ ಬರ್ತಾ ಇರಲಿಲ್ಲ..!

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more