ಧ್ರುವ ಸರ್ಜಾ 'ಕೆಡಿ' ಚಿತ್ರಕ್ಕೆ ಕಿಚ್ಚ ಸುದೀಪ್; ಈ ಎಂಟ್ರಿ ಹಿಂದಿದ್ಯಾ ಏನೋ ಸೀಕ್ರೆಟ್ ಸ್ಟೋರಿ..?

ಧ್ರುವ ಸರ್ಜಾ 'ಕೆಡಿ' ಚಿತ್ರಕ್ಕೆ ಕಿಚ್ಚ ಸುದೀಪ್; ಈ ಎಂಟ್ರಿ ಹಿಂದಿದ್ಯಾ ಏನೋ ಸೀಕ್ರೆಟ್ ಸ್ಟೋರಿ..?

Published : Sep 14, 2025, 03:41 PM IST

ಕೆಡಿ ಸಿನಿಮಾ ನಿರ್ಮಾಣ ಮಾಡ್ತಿರೋದು ಕೂಡ ಇದೇ ಕೆವಿಎನ್ ಪ್ರೊಡಕ್ಷನ್ಸ್. ಆಗಲೇ ಪ್ರೇಮ್ ಕೆಡಿನಲ್ಲೂ ಬರುವ ಸ್ಪೆಷಲ್​ ರೋಲ್​ನ ದರ್ಶನ್ ಕೈಲಿ ಮಾಡಿಸೋದು ಅಂತ ಫಿಕ್ಸ್ ಆಗಿದ್ರು. ಆದ್ರೆ ಅಷ್ಟೊತ್ತಿಗಾಗಲೇ ಧ್ರುವ ಮತ್ತು ದರ್ಶನ್ ನಡುವಿನ ಸಂಬಂಧ ಮುರಿದುಬಿದ್ದಿತ್ತು.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್ ಸ್ಪೆಷಲ್ ರೋಲ್​ವೊಂದನ್ನ ಮಾಡಿರೋ ವಿಷ್ಯ ಈಗಾಗ್ಲೇ ಗೊತ್ತಾಗಿದೆ. ಆದ್ರೆ ಸುದೀಪ್ ಮಾಡಿರೋ ಆ ಪಾತ್ರವನ್ನ ಮೊದಲು ದರ್ಶನ್ ಮಾಡಬೇಕಿತ್ತಾ,.? ದಾಸನ ಜಾಗಕ್ಕೆ ಕಿಚ್ಚ ಬಂದ್ರಾ,.? ಆ ಕುರಿತ ಎಕ್ಸ್​ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಕೆಡಿ ಅಡ್ಡಾಗೆ ಎಂಟ್ರಿ ಕೊಟ್ಟಿದ್ಹೇಗೆ ಕಿಚ್ಚ ಸುದೀಪ್..?
ಯೆಸ್ ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ, ಶೋಮ್ಯಾನ್ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಸ್ಪೆಷಲ್ ಅಪೀಯರೆನ್ಸ್ ಇದೆ. ಎರಡು ಭಾಗಗಳ ಅಂಡರ್​ವರ್ಲ್ಡ್  ರೆಟ್ರೋ ಕಥೆ ಹೊಂದಿರುವ  ಕೆಡಿ ಸಿನಿಮಾದಲ್ಲಿ ಸುದೀಪ್​ಗೆ ದೊಡ್ಡ ಪಾತ್ರವೇ ಇದೆ. ಆಧ್ರೆ ಮೊದಲ ಭಾಗದಲ್ಲಿ ಕಿಚ್ಚನ ಚಿಕ್ಕ ಅಪೀಯರೆನ್ಸ್ ಮಾತ್ರ ಇರಲಿದೆ. ಪಾರ್ಟ್​​-2ನಲ್ಲಿ ಸುದೀಪ್ ಇಡೀ ಚಿತ್ರದುದ್ದಕ್ಕೂ ಮಿಂಚಿಲಿದ್ದಾರೆ.

ಕೆಡಿ ಪಾರ್ಟ್​​-1 ನಲ್ಲಿನ ಸುದೀಪ್ ಭಾಗದ ಶೂಟಿಂಗ್ ಈಗಾಗ್ಲೇ ಮುಗಿದಿದೆ. ಪ್ರೇಮ್ ಈ ಹಿಂದೆ ಸುದೀಪ್ ಜೊತೆಗೆ ದಿ ವಿಲನ್ ಸಿನಿಮಾ ಮಾಡಿದ್ರು. ವಿಲನ್ ಮೆಚ್ಚಿದ್ದ ಕಿಚ್ಚ ಪ್ರೇಮ್ ಯಾವ ಚಿತ್ರಕ್ಕೆ ಕರೆದರೂ ನಟಿಸ್ತಿನಿ ಅಂದಿದ್ರು. ಧ್ರುವ ಜೊತೆಗೂ ಸುದೀಪ್​ಗೆ ಒಳ್ಳೆ ನಂಟಿದೆ. ಸೋ ಸುದೀಪ್ ಇವರಿಬ್ಬರಿಗಾಗಿ ಕೆಡಿ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ.

ದಾಸ ಮಾಡಬೇಕಿದ್ದ ಪಾತ್ರ ಕಿಚ್ಚನಿಗೆ ಒಲಿಯಿತಾ..?
ಯೆಸ್ ಸದ್ಯ ಸುದೀಪ್ ಮಾಡಿರೋ ಪಾತ್ರವನ್ನ  ಈ ಹಿಂದೆ ದರ್ಶನ್ ಮಾಡೋದು ಅಂತ ಫಿಕ್ಸ್ ಆಗಿತ್ತಾ,? ಹೌದು ಅಂತಾರೆ ಹತ್ತಿರದವರು. ಅಸಲಿಗೆ ಪ್ರೇಮ್ ಮತ್ತು ದರ್ಶನ್ ನಡುವಿನ ಸಂಬಂಧ ಹಳಸಿ ಇಬ್ಬರೂ ಹಾವು ಮುಂಗಸಿಯಂತೆ ಆಗಿದ್ರು. ಈ ನಡುವೆ ಕಳೆದ ವರ್ಷ ಫೆಬ್ರುವರಿನಲ್ಲಿ ರಕ್ಷಿತಾ ಇಬ್ಬರಿಗೂ ಕಾಂಪ್ರಮೈಸ್ ಮಾಡ್ಸಿ, ಕೆವಿಎನ್ ಪ್ರೊಡಕ್ಷನ್ಸ್​​ನಲ್ಲಿ ಒಂದು ಸಿನಿಮಾ ಮಾಡ್ಲಿಕ್ಕೆ ಕಮಿಟ್ ಮಾಡಿಸಿದ್ರು.

ಕೆಡಿ ಸಿನಿಮಾ ನಿರ್ಮಾಣ ಮಾಡ್ತಿರೋದು ಕೂಡ ಇದೇ ಕೆವಿಎನ್ ಪ್ರೊಡಕ್ಷನ್ಸ್. ಆಗಲೇ ಪ್ರೇಮ್ ಕೆಡಿನಲ್ಲೂ ಬರುವ ಸ್ಪೆಷಲ್​ ರೋಲ್​ನ ದರ್ಶನ್ ಕೈಲಿ ಮಾಡಿಸೋದು ಅಂತ ಫಿಕ್ಸ್ ಆಗಿದ್ರು. ಆದ್ರೆ ಅಷ್ಟೊತ್ತಿಗಾಗಲೇ ಧ್ರುವ ಮತ್ತು ದರ್ಶನ್ ನಡುವಿನ ಸಂಬಂಧ ಮುರಿದುಬಿದ್ದಿತ್ತು. ಖುದ್ದು ಧ್ರುವ , ದರ್ಶನ್​ಗೂ ತನಗೂ ಕೆಲ ಮನಸ್ಥಾಪ ಇವೆ ಅಂತ ಓಪನ್ ಆಗೇ ಹೇಳಿದ್ರು.

ಸೋ ಧ್ರುವ ಅಂಡ್ ದರ್ಶನ್ ಕಾಂಬಿನೇಷನ್​ ಒಂದು ಮಾಡೋಕೆ ಆಗ್ಲಿಲ್ಲ. ಈ ನಡುವೆ ದರ್ಶನ್ ಬೇರೆ ಜೈಲು ಸೇರಿದ್ದರಿಂದ ಕೆಡಿ ನಲ್ಲಿ ದಾಸ ನಟಿಸೋದು ಅಸಾಧ್ಯ  ಅನ್ನೋ ಪರಿಸ್ಥಿತಿ ಬಂತು. ಆಗ ಕಿಚ್ಚನನ್ನ ಆ ಜಾಗಕ್ಕೆ ಕರೆತರಲಾಯ್ತು.

ದೀಪಾವಳಿಗೆ ಪ್ಯಾನ್ ಇಂಡಿಯಾ ಕೆಡಿ ಎಂಟ್ರಿ..!
ಈಗಾಗ್ಲೇ ಪ್ಯಾನ್ ಇಂಡಿಯ ಪ್ರೆಸ್ ಮೀಟ್ ಮಾಡಿ ಹವಾ ಸೃಷ್ಟಿಸಿರೋ ಕೆಡಿ ಬಹುತೇಕ ದೀಪಾವಳಿಗೆ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಧ್ರುವ ಜೊತೆಗೆ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿದಂತೆ ಬಹುಭಾಷಾ ತಾರೆಯರ ದಂಡೇ ಇದೆ. ಜೊತೆಗೆ ಕಿಚ್ಚನ ಮಾಸ್ ಆಪೀಯರೆನ್ಸ್ ಬೇರೆ ಇದೆ.

ಕ್ರಿಸ್​ಮಸ್​ಗೆ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಸಿನಿಮಾ ರಿಲೀಸ್ ಆಗೋದು ಫಿಕ್ಸ್ ಆಗಿದೆ. ಈಗ ಕೆಡಿ ದೀಪಾವಳಿಗೆ ಬಂದ್ರೆ ಕಿಚ್ಚನ ಫ್ಯಾನ್ಸ್​ಗೆ ಡಬಲ್ ಧಮಾಕಾ. ಮಾರ್ಕ್​​ಗೂ ಮುನ್ನ ಕೆಡಿಯಲ್ಲಿ ಕಿಚ್ಚನ ದರ್ಶನ ಆಗಲಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more