ಅಸಲಿಗೆ 2009ರಲ್ಲಿ ತೆರೆಗೆ ಬಂದ ಅರುಂಧತಿ ಸಿನಿಮಾ ಆಗ ಇಡೀ ಸೌತ್ ಇಂಡಿಯಾ ತುಂಬಾ ಸದ್ದು ಮಾಡಿತ್ತು. ಕೋಡಿ ರಾಮಕೃಷ್ಣ ಡೈರೆಕ್ಟ್ ಮಾಡಿದ್ದ ಈ ಈ ಹಾರರ್ ಫ್ಯಾಂಟಸಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳ್ ಎಬ್ಬಿಸಿತ್ತು. 14 ಕೋಟಿ ಬಜೆಟ್ನಲ್ಲಿ ಸಿದ್ದವಾದ ಈ ಸಿನಿಮಾ ಬರೊಬ್ಬರಿ 70 ಕೋಟಿ ಲೂಟಿ ಮಾಡಿತ್ತು.
ಕಿಸ್ ಬ್ಯೂಟಿ ಶ್ರೀಲೀಲಾ (Sreeleela) ಬಾಲಿವುಡ್ನಲ್ಲಿ ಬ್ಯುಸಿಯಾಗಿರೋ ಸಂಗತಿ ಗೊತ್ತೇ ಇದೆ. ಮತ್ತೀಗ ಶ್ರೀಲೀಲಾಗೆ ಮತ್ತೊಂದು ವಿಶೇಷ ಚಿತ್ರ - ಅದ್ಭುತ ಪಾತ್ರ ಒಲಿದುಬಂದಿದೆ. ಟಾಲಿವುಡ್ನ ಸೂಪರ್ ಹಿಟ್ ಸಿನಿಮಾ ಅರುಂಧತಿ ಬಾಲಿವುಡ್ಗೆ ರಿಮೇಕ್ ಆಗ್ತಾ ಇದ್ದು, ಅದ್ರಲ್ಲಿ ಜೇಜಮ್ಮನ ಪಾತ್ರ ಮಾಡಲಿದ್ದಾರೆ ಶ್ರೀಲೀಲಾ.
ಕಿಸ್ ಬ್ಯೂಟಿ ಈಗ ಬಾಲಿವುಡ್ ಜೇಜಮ್ಮ; ಅರುಂಧತಿ ಹಿಂದಿ ರಿಮೇಕ್ಗೆ ಶ್ರೀಲೀಲಾ ಬಣ್ಣ!
ಯೆಸ್ ಕಿಸ್ ಬ್ಯೂಟಿ ಶ್ರೀಲೀಲಾ ಅಕೌಂಟ್ಗೆ ಮತ್ತೊಂದು ವಿಶೇಷ ಚಿತ್ರ - ಅದ್ಭುತ ಪಾತ್ರ ಪಾತ್ರ ಸೇರ್ತಾ ಇದೆ. ಟಾಲಿವುಡ್ನ ಸೂಪರ್ ಹಿಟ್ ಮೂವಿ ಅರುಂಧತಿ ಬಾಲಿವುಡ್ಗೆ ರಿಮೇಕ್ ಆಗ್ತಾ ಇದ್ದು ಜೇಜಮ್ಮನ ಪಾತ್ರದ ಆಫರ್ ಶ್ರೀಲೀಲಾಗೆ ಬಂದಿದೆ.
ಅಸಲಿಗೆ 2009ರಲ್ಲಿ ತೆರೆಗೆ ಬಂದ ಅರುಂಧತಿ ಸಿನಿಮಾ ಆಗ ಇಡೀ ಸೌತ್ ಇಂಡಿಯಾ ತುಂಬಾ ಸದ್ದು ಮಾಡಿತ್ತು. ಕೋಡಿ ರಾಮಕೃಷ್ಣ ಡೈರೆಕ್ಟ್ ಮಾಡಿದ್ದ ಈ ಈ ಹಾರರ್ ಫ್ಯಾಂಟಸಿ ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳ್ ಎಬ್ಬಿಸಿತ್ತು. 14 ಕೋಟಿ ಬಜೆಟ್ನಲ್ಲಿ ಸಿದ್ದವಾದ ಈ ಸಿನಿಮಾ ಬರೊಬ್ಬರಿ 70 ಕೋಟಿ ಲೂಟಿ ಮಾಡಿತ್ತು.
ಈ ಸಿನಿಮಾ ಬಳಿಕ ಅನುಷ್ಕಾ ಶೆಟ್ಟಿ ಸಾಲು ಸಾಲು ನಾಯಕಿಪ್ರಧಾನ ಚಿತ್ರಗಳಲ್ಲಿ ಮಿಂಚತೊಡಗಿದ್ರು. ಆ ಕಾಲದಲ್ಲಿ ನಾಯಕರನ್ನೂ ಮೀರಿಸುವಷ್ಟು ಸಂಭಾವನೆ ಪಡೆಯುವ ಲೇಡಿ ಸೂಪರ್ ಸ್ಟಾರ್ ಆಗಿದ್ರು.
ಅರಂಧತಿ ಸೌತ್ನಲ್ಲಿ ಈ ಪರಿ ಸಕ್ಸಸ್ ಕಂಡಿದ್ದನ್ನ ನೋಡಿ ಆಗಲೇ ಬಾಲಿವುಡ್ನಲ್ಲಿ ರಿಮೇಕ್ ಮಾಡುವ ಪ್ರಯತ್ನ ನಡೆದಿದ್ವು. ಕರೀನಾ ಕಪೂರ್ ನಟನೆಯಲ್ಲಿ ಅರುಂಧತಿ ಸೆಟ್ಟೇರುತ್ತೆ ಅಂತ ಸುದ್ದಿಯಾಗಿತ್ತು. ಆದ್ರೆ ಅದ್ಯಾಕೋ ಆ ಪ್ರಾಜೆಕ್ಟ್ ಟೇಕ್ ಆಫ್ ಆಗಿರಲಿಲ್ಲ. ಈಗ ಮತ್ತೆ ಅರುಂಧತಿ ಪ್ರಾಜೆಕ್ಟ್ಗೆ ಜೀವ ಬಂದಿದ್ದು ಸೌತ್ ನಿರ್ದೇಶಕ ಮೋಹನ ರಾಜಾ ಈ ಸಿನಿಮಾವನ್ನ ನಿರ್ದೇಶನ ಮಾಡಲಿದ್ದಾರಂತೆ.
ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಶ್ರೀಲೀಲಾ..!
ಯೆಸ್ ಶ್ರೀಲೀಲಾ ಈಗಾಗ್ಲೇ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ ಉಸ್ತಾದ್ ಭಗತ್ಸಿಂಗ್, ಮಾಸ್ ಜಾತರಾ ಸಿನಿಮಾಗಳು ರಿಲೀಸ್ಗೆ ರೆಡಿಯಿವೆ. ತಮಿಳಿನ ಪರಾಶಕ್ತಿ ಕಂಪ್ಲೀಟ್ ಆಗಿದೆ. ಈ ಸೌತ್ ಸಿನಿಮಾಗಳ ಬಳಿಕ ಶ್ರೀಲೀಲಾ ಬಾಲಿವುಡ್ ನಲ್ಲಿ 2-3 ಪ್ರಾಜೆಕ್ಟ್ಗಳನ್ನ ಓಕೆ ಮಾಡಿದ್ದು ಮುಂಬೈನಲ್ಲೇ ಬೀಡು ಬಿಟ್ಟಿದ್ದಾರೆ.
ಕಾರ್ತಿಕ್ ಆರ್ಯನ್ ಜೊತೆ ನಟಿಸ್ತಾ ಇರೋ ಆಶಿಕಿ-3 ಶೂಟಿಂಗ್ ನಡೀತಾ ಇದೆ. ಇದರ ನಡುವೆ ಅರುಂಧತಿ ಬಾಲಿವುಡ್ ರಿಮೇಕ್ನ ಆಫರ್ ಬೇರೆ ಕಿಸ್ ಬ್ಯೂಟಿಗೆ ಒಲಿದುಬಂದಿದೆ.
ರಶ್ಮಿಕಾ ಹಾದಿಯಲ್ಲೇ ಸಾಗುತ್ತಿರೋ ಶ್ರೀಲೀಲಾ
ಹೌದು ರಶ್ಮಿಕಾ ಹೇಗೆ ಕನ್ನಡದಿಂದ ಸಿನಿದುನಿಯಾಗೆ ಬಂದು ಟಾಲಿವುಡ್ ನಲ್ಲಿ ಆಳಿ ಬಾಲಿವುಡ್ನಲ್ಲಿ ಮಿನುಗಿದ್ರೋ, ಶ್ರೀಲೀಲಾ ಕೂಡ ಅದೇ ಹಾದಿಯಲ್ಲಿ ಸಾಗ್ತಾ ಇದ್ದಾರೆ. ವಿಶೇಷ ಅಂದ್ರೆ ರಶ್ಮಿಕಾ ಕೂಡ ಸದ್ಯ ಮೈಸಾ ಅನ್ನೋ ನಾಯಕಿ ಪ್ರಧಾನ ಸಿನಿಮಾ ಮಾಡ್ತಾ ಇದ್ದಾರೆ.
ರಶ್ಮಿಕಾ ರೀತಿಯೇ ಶ್ರೀಲೀಲಾ ಕೂಡ ನಾಯಕಿಪ್ರಧಾನ ಸಿನಿಮಾ ಅರುಂಧತಿಗೆ ಬಣ್ಣ ಹಚ್ತಾ ಇದ್ದು ಜೇಜಮ್ಮನಾಗೋದಕ್ಕೆ ರೆಡಿಯಾಗಿದ್ದಾರೆ. ಈ ಚಿತ್ರ ಮತ್ತು ಪಾತ್ರ ಶ್ರೀಲೀಲಾ ಕರೀಯರ್ನ ಮತ್ತೊಂದು ಲೆವೆಲ್ಗೆ ತೆಗೆದುಕೊಂಡು ಹೋಗೋದ್ರಲ್ಲಿ ಅಚ್ಚರಿಯೇ ಇಲ್ಲ ಅಂತಿದ್ದಾರೆ ಸಿನಿಪಂಡಿತರು.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..