ಇವರೇನಾ 'ಕಾಂತಾರ ಪ್ರೀಕ್ವೆಲ್' ಚೆಲುವೆ? ರಿಷಬ್ ಶೆಟ್ಟಿ 'ಪ್ಯಾನ್ ವರ್ಲ್ಡ್' ಸಿನಿಮಾದಲ್ಲಿ ರುಕ್ಮಿಣಿ ವಸಂತ್...?

ಇವರೇನಾ 'ಕಾಂತಾರ ಪ್ರೀಕ್ವೆಲ್' ಚೆಲುವೆ? ರಿಷಬ್ ಶೆಟ್ಟಿ 'ಪ್ಯಾನ್ ವರ್ಲ್ಡ್' ಸಿನಿಮಾದಲ್ಲಿ ರುಕ್ಮಿಣಿ ವಸಂತ್...?

Published : Jul 26, 2025, 12:50 PM IST

ಕಾಂತಾರ ಚಾಪ್ಟರ್ -1 ತಾರಾಗಣದ ಬಗ್ಗೆ ರಿಷಬ್ ಅಂಡ್ ಟೀಂ ಯಾವೊಂದು ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ರಿಷಬ್ ಶೆಟ್ಟಿ ಬಿಟ್ರೆ ಸಿನಿಮಾದಲ್ಲಿ ಇನ್ಯಾರೆಲ್ಲಾ ಇದ್ದಾರೆ ಅನ್ನೋದನ್ನ ಇಲ್ಲಿತನಕ ರಿವೀಲ್ ಮಾಡಿಲ್ಲ. ಅದ್ರಲ್ಲೂ ಈ ಸಿನಿಮಾ ನಾಯಕಿ ಯಾರು ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ರು. ಈಗ.. 

ಕಾಂತಾರ ಚಾಪ್ಟರ್-1 ರಿಲೀಸ್​​ಗೆ ಕೌಂಟ್​ ಡೌನ್ ಶುರುವಾಗಿದೆ. ಇತ್ತೀಚಿಗೆ ರಿಲೀಸ್ ಆಗಿರೋ ಮೇಕಿಂಗ್ ಝಲಕ್ ನೋಡಿದವರು ಈ ಸಾರಿ ಕಾಂತಾರ ವರ್ಲ್ಡ್ ವೈಡ್ ಕಿಚ್ಚು ಹಚ್ಚಲಿದೆ ಅಂತ ಫಿಕ್ಸ್ ಆಗಿದ್ದಾರೆ. ಇನ್ನೂ ಈ ಮೇಕಿಂಗ್ ವಿಡಿಯೋ ಬಂದ ಮೇಲೆ ಶೆಟ್ರು ಗುಟ್ಟಾಗೇ ಇಟ್ಟಿದ್ದ ಒಂದು ಮ್ಯಾಟ್ರು ರಟ್ಟಾಗಿದೆ. ಏನದು ಅಂತೀರಾ ಈ ಸ್ಟೋರಿ ನೋಡಿ.

ಯೆಸ್, ಕಾಂತಾರ ಚಾಪ್ಟರ್ -1 ತಾರಾಗಣದ ಬಗ್ಗೆ ರಿಷಬ್ ಅಂಡ್ ಟೀಂ ಯಾವೊಂದು ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ರಿಷಬ್ ಶೆಟ್ಟಿ ಬಿಟ್ರೆ ಸಿನಿಮಾದಲ್ಲಿ ಇನ್ಯಾರೆಲ್ಲಾ ಇದ್ದಾರೆ ಅನ್ನೋದನ್ನ ಇಲ್ಲಿತನಕ ರಿವೀಲ್ ಮಾಡಿಲ್ಲ. ಅದ್ರಲ್ಲೂ ಈ ಸಿನಿಮಾ ನಾಯಕಿ ಯಾರು ಅಂತ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ರು.

ರುಕ್ಮಿಣಿ ವಸಂತ್ ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನೋ ಗುಸು ಗುಸು ಇತ್ತಾದ್ರೂ ಇದನ್ನ ಚಿತ್ರತಂಡ ಆಫೀಷಿಯಲ್ ಆಗಿ ಕನ್ಫರ್ಮ್ ಮಾಡಿರಲಿಲ್ಲ. ಆದ್ರೆ ಸದ್ಯ ರಿಲೀಸ್ ಆಗಿರೋ ಮೇಕಿಂಗ್ ಝಲಕ್​ನಿಂದ ಆ ಗುಟ್ಟು ರಟ್ಟಾಗಿದೆ. ರುಕ್ಕುನೇ ಈ ಸಿನಿಮಾದ ನಾಯಕಿ ಅಂತ ಫ್ಯಾನ್ಸ್ ಕಾಮೆಂಟ್ ಮಾಡ್ತಾ ಇದ್ದಾರೆ.

ಅಸಲಿಗೆ ಮೇಕಿಂಗ್ ವಿಡಿಯೋನ ಎಚ್ಚರದಿಂದ ಎಡಿಟ್ ಮಾಡ್ಸಿರೋ ರಿಷಬ್ ಶೆಟ್ಟಿ, ಎಲ್ಲಿಯೂ ಬೇರೆ ಕಲಾವಿದರು ಕಾಣಿಸಿಕೊಳ್ಳದಂತೆ ನೋಡಿಕೊಂಡಿದ್ದಾರೆ. ಆದ್ರೆ ಲಾಂಗ್ ಡ್ರೋನ್ ಶಾಟ್​ವೊಂದರಲ್ಲಿ ರುಕ್ಮಿಣಿ ಇರೋದನ್ನ ಫ್ಯಾನ್ಸ್ ಪತ್ತೆ ಮಾಡಿದ್ದಾರೆ.

ಬೀರಬಲ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ರುಕ್ಮಿಣಿ ವಸಂತ್, ಎಲ್ಲರ ಪ್ರೀತಿ, ಮೆಚ್ಚುಗೆ ಗಳಿಸಿದ್ದು ಸಪ್ತಸಾಗರದಾಚೆ ಎಲ್ಲೋ ಸೈಡ್ ಮತ್ತು ಸೈಡ್ ಬಿ ಚಿತ್ರಗಳಿಂದ. ಈ ಚಿತ್ರಗಳಲ್ಲಿ ಮನು ಌಂಡ್ ಪ್ರಿಯಾ ಆಗಿ ನಟಿಸಿ ಸಿನಿಪ್ರಿಯರ ಹೃದಯದಲ್ಲಿ ಸ್ಥಾನ ಪಡೆದಿದ್ದು ರಕ್ಷಿತ್ ಌಂಡ್ ರುಕ್ಮಿಣಿ.

ಸಪ್ತಸಾಗರದಾಚೆ ಎಲ್ಲೋ ಬಳಿಕ ರುಕ್ಕುಗೆ ಪರಭಾಷೆಗಳಿಂದಲೂ ಸಿಕ್ಕಾಪಟ್ಟೆ ಆಫರ್ಸ್ ಬರ್ತಾ ಇವೆ. ತಮಿಳು, ತೆಲುಗಿನಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್​​ಗಳಲ್ಲಿ ನಟಿಸ್ತಾ ಇರೋ ರುಕ್ಮಿಣಿ ಎನ್.ಟಿ.ಆರ್ ನಟನೆಯ ಹೊಸ ಚಿತ್ರದ ಬಿಗ್ ಆಫರ್ ಕೂಡ ಗಿಟ್ಟಿಸಿಕೊಂಡಿದ್ದಾರೆ.

ಸದ್ಯ ಕಾಂತಾರ ಚಾಪ್ಟರ್-1ನಲ್ಲಿ  ಕೂಡ ಅವರೇ ನಾಯಕಿ ಆಗಿದ್ದು ರುಕ್ಕು ಲಕ್ ನಾ ಎಲ್ಲರೂ ಕೊಂಡಾಡ್ತಾ ಇದ್ದಾರೆ. ಕಾಂತಾರದಲ್ಲಿ ನಾಯಕಿಯಾಗಿ ನಟಿಸಿದ್ದ ಸಪ್ತಮಿ ಗೌಡಗೂ ಅಲ್ಲಿಂದ ಲಕ್ ಖುಲಾಯಿಸಿತ್ತು. ಕಾಂತಾರದ ಗೆಲುವು ಸಪ್ತಮಿಗೆ ಟಾಲಿವುಡ್, ಬಾಲಿವುಡ್​​ ಬಾಗಿಲುಗಳನ್ನ ಓಪನ್ ಮಾಡಿತ್ತು.

ಮತ್ತೀಗ ಕಾಂತಾರ ಚಾಪ್ಟರ್ 1 ಅಂತೂ ವರ್ಲ್ಡ್ ವೈಡ್ ರಿಲೀಸ್ ಆಗ್ತಾ ಇದೆ. 6 ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್​ನಲ್ಲೂ ತೆರೆಕಾಣಲಿದೆ. ಸೋ ಈ ಬಿಗ್ ಸಿನಿಮಾ ಮೂಲಕ ರುಕ್ಮಿಣಿ ಮತ್ತೊಂದು ಲೆವೆಲ್ ಎತ್ತರಕ್ಕೆ ಬೆಳೆಯೋದ್ರಲ್ಲಿ ದೂಸ್ರಾ ಮಾತೇ ಇಲ್ಲ ಅಂತಿದ್ದಾರೆ. 

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

24:18ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:0445, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ
05:19ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
02:50ಅವತಾರ್​ 3 ವರ್ಲ್ಡ್​​ವೈಡ್ ಮೆಗಾ ಓಪನಿಂಗ್: ಬೆಂಗಳೂರಿನಲ್ಲಿಂದು ಬಿಗ್ಗೆಸ್ಟ್ ಮ್ಯೂಸಿಕಲ್ ನೈಟ್
05:01ಸಾಕಪ್ಪಾ ಸಾಕು ಎಂಬ ಮಟ್ಟಕ್ಕೆ ಟಾರ್ಚರ್.. ಸಿಕ್ಕಿದ್ದೇ ಚಾನ್ಸ್​ ಎಂದು ನಟಿ ನಿಧಿನ ಎಳೆದಾಡಿದ ಜನ!
Read more