
ಬಾಲಿವುಡ್ ತಾರಾ ದಂಪತಿ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈನಲ್ಲಿ ನಿರ್ಮಿಸಿರುವ 250 ಕೋಟಿ ಮೌಲ್ಯದ ತಮ್ಮ ಹೊಸ ಬಂಗಲೆಯಲ್ಲಿ ಅಯೋಧ್ಯೆ ರಾಮಲಲ್ಲಾನ ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತಿದ 6 ಅಡಿಯ ಹೊಯ್ಸಳ ಶೈಲಿಯ ಗಣೇಶನ ಮೂರ್ತಿಯನ್ನು ಸ್ಥಾಪಿಸಲಾಗುತ್ತಿದೆ.
ಬಾಲಿವುಡ್ ತಾರಾ ದಂಪತಿ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮುಂಬೈನಲ್ಲಿ 250 ಕೋಟಿಯ ಐಷಾರಾಮಿ ಬಂಗಲೆಯನ್ನ ಕಟ್ಟಿಸಿದ್ದು, ಸದ್ಯದಲ್ಲೇ ಗೃಹಪ್ರವೇಶ ಮಾಡ್ತಾ ಇದ್ದಾರೆ. ವಿಶೇಷ ಅಂದ್ರೆ ಈ ಬಂಗಲೆಯಲ್ಲಿ ಗಣಪನ ಮೂರ್ತಿ ಸ್ಥಾಪನೆ ಆಗಲಿದ್ದು, ಅದನ್ನ ನಮ್ಮ ಮೈಸೂರಿನ ಖ್ಯಾತ ವಾಸ್ತುಶಿಲ್ಪಿ ಅರುಣ್ ಯೋಗಿರಾಜ್ ಸಿದ್ದಪಡಿಸಿದ್ದಾರೆ.
ಯೆಸ್ ಬಾಲಿವುಡ್ ನ ಸ್ಟಾರ್ ಜೋಡಿ ರಣ್‌ಬೀರ್ ಕಪೂರ್ - ಆಲಿಯಾ ಭಟ್ ಮುಂಬೈನಲ್ಲಿ ಹೊಸ ಮನೆಯ ಗೃಹಪ್ರವೇಶ ಮಾಡ್ಲಿಕ್ಕೆ ಸಜ್ಜಾಗಿದ್ದಾರೆ. ಅಸಲಿಗೆ ಕಪೂರ್ ಕುಟುಂಬಕ್ಕೆ ಸೇರಿದ ಈ ಹಳೆಯ ಬಂಗಲೆಯನ್ನ ರಿನೋವೇಟ್ ಮಾಡಿಸಿರೋ ಈ ಜೋಡಿ, ಮಗಳ ಹೆಸರಲ್ಲಿ ಮನೆಯನ್ನ ರಿಜಿಸ್ಟರ್ ಮಾಡಿಸಿದ್ದಾರೆ ಅಂದಹಾಗೆ ಇದರ ಬೆಲೆಯೇ ಬರೊಬ್ಬರಿ 250 ಕೋಟಿ.
ರಣಬೀರ್-ಆಲಿಯಾ ಪುತ್ರಿ ರಾಹಾ ಕಪೂರ್ ಈಗ 250 ಕೋಟಿ ಬಂಗಲೆಯ ಒಡತಿ. ಮುಂದಿನ ತಿಂಗಳು ರಾಹಾಗೆ ಮೂರು ವರ್ಷ ತುಂಬಲಿದ್ದು ಅದೇ ಸಮಯದಲ್ಲಿ ಮನೆ ಗೃಹಪ್ರವೇಶ ಮಾಡಲಿಕ್ಕೆ ಕಪೂರ್ ಫ್ಯಾಮಿಲಿ ಸಜ್ಜಾಗಿದೆ. ತಮ್ಮ ನೂತನ ಗೃಹದಲ್ಲಿ ವಿಘ್ನನಿವಾರಕ ಗಣೇಶನ ವಿಗ್ರಹ ಇರಬೇಕು ಅಂತ ಆಸೆ ಪಟ್ಟ ರಣಬೀರ್-ಆಲಿಯಾ ಒಂದು ಮೂರ್ತಿಯನ್ನ ಮಾಡಿಸಿದ್ದಾರೆ. ಅದು ನಮ್ಮ ಮೈಸೂರಿನ ಹೆಸರಾಂತ ವಾಸ್ತುಶಿಲ್ಪಿ ಅರುಣ್ ಯೋಗಿರಾಜ್ ಬಳಿ.
ಅರುಣ್ ಯೋಗಿರಾಜ್ ಅಯೋಧ್ಯೆಯ ಪ್ರಭು ಶ್ರೀರಾಮನ ಮೂರ್ತಿಯನ್ನ ಕೆತ್ತಿದಂಥಾ ಖ್ಯಾತ ಶಿಲ್ಪಿ. ಇವರನ್ನ ಕಾಂಟಾಕ್ಟ್ ಮಾಡಿದ್ದ ಆಲಿಯಾ ಮತ್ತು ರಣಬೀರ್ ತಮ್ಮ ನೂತನ ಗೃಹಕ್ಕೊಂದು ಗಣೇಶನ ಮೂರ್ತಿ ಮಾಡಿಕೊಡುವಂತೆ ಕೇಳಿದ್ರಂತೆ. ಅವರ ಮನೆಯನ್ನ ನೋಡಿಕೊಂಡು ಬಂದು, ಅದಕ್ಕೆ ತಕ್ಕಂಥಾ ಆರು ಅಡಿಯ ಮೂರ್ತಿ ಸಿದ್ದಮಾಡಿದ್ದಾರೆ ಅರುಣ್ ಯೋಗಿರಾಜ್
6 ಅಡಿಯ ಮೈಸೂರು ಹೊಯ್ಸಳ ಶೈಲಿಯ ಈ ಗಣೇಶ ಮೂರ್ತಿ ಸದ್ಯದಲ್ಲೇ ಕಪೂರ್ ಬಂಗಲೆ ಸೇರಲಿದೆ. ಬಾಲಿವುಡ್ನ ತಾರಾದಂಪತಿ ಅನುದಿನ ನಮ್ಮ ಮೈಸೂರ ಗಣಪನ ಆಶಿರ್ವಾದ ಪಡೆಯಲಿದ್ದಾರೆ.
ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.