5 ನೇ ದಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಕುಟುಂಬದ ಸದಸ್ಯರಿಂದ ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿತು. ಪುನೀತ್ ಅವರ ಮಾವ ಗೋವಿಂದ ರಾಜ್ ನೇತೃತ್ವದಲ್ಲಿ ಈ ಕಾರ್ಯ ನೆರವೇರಿತು.
ಬೆಂಗಳೂರು (ನ. 03): 5 ನೇ ದಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಕುಟುಂಬದ ಸದಸ್ಯರಿಂದ ಹಾಲು ತುಪ್ಪ ಬಿಡುವ ಶಾಸ್ತ್ರ ನೆರವೇರಿತು. ಪುನೀತ್ (Puneeth Rajkumar) ಅವರ ಮಾವ ಗೋವಿಂದ ರಾಜ್ ನೇತೃತ್ವದಲ್ಲಿ ಈ ಕಾರ್ಯ ನೆರವೇರಿತು.
ಪುನೀತ್‌ಗೆ ಇಷ್ಟವಾದ ತಿಂಡಿಗಳನ್ನು ಎಡೆಗೆ ಇಡಲಾಯಿತು. ಕುಟುಂಬದ ಸದಸ್ಯರು ಒಬ್ಬೊಬ್ಬರು ಒಂದೊಂದು ಖಾದ್ಯಗಳನ್ನು ಇಟ್ಟು ನಮಿಸಿದರು. ಪೂಜೆ ಮುಗಿದ ತಕ್ಷಣ ಪತ್ನಿ ಅಶ್ವಿನಿ ಕಣ್ಣೀರಿಡುತ್ತಾ ಹೊರ ಬಂದರು. ರಾಘಣ್ಣ ಭಜನೆ ಮಾಡಿ ಸಹೋದರನಿಗೆ ವಿದಾಯ ಕೋರಿದರು.