Dec 7, 2022, 1:36 PM IST
ಧನಂಜಯ್.. ಹೀಗಂತ ಕರೆದರೆ ಸಿನಿ ಪ್ರೇಕ್ಷಕ ಬಣಕ್ಕೆ ತಟ್ ಅಂತ ಗೊತ್ತಾಗೋದೆ ಇಲ್ಲ. ಅದೇ ಡಾಲಿ ಧನಂಜಯ್ ಅಂತ ಹೇಳಿದ್ರೆ ಕಣ್ಮುಂದೆ ಹಂಗೆ ಬಂದ್ಬಿಡ್ತಾರೆ ಟಗರು ವಿಲನ್ ಡಾಲಿ ಧನಂಜಯ್. ಇದೆ ಅಲ್ವಾ ಗ್ರೋತ್ ಅಂದ್ರೆ. ಯೆಸ್ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ನಟ ರಾಕ್ಷಸ ಧನಂಜಯ್. ಆದ್ರೆ ಈಗ ಡಾಲಿ ಮೇಲೆ ದೊಡ್ಡ ಆರೋಪ ಶುರುವಾಗಿದೆ. ಧನಂಜಯ್ ಚಿತ್ರರಂಗದಲ್ಲಿ ನೆಪೋಟೀಸಂ ಮಾಡ್ತಿದ್ದಾರೆ ಅನ್ನೋ ಆರೋಪ ಅದು. ನೆಪೋಟಿಸಂ ಅಂದ್ರೆ ಏನ್ ಗೊತ್ತಾ.? ಸಿಂಪಲ್ಲಾಗಿ ಹೇಳ್ಬೇಕು ಅಂದ್ರೆ ಕಲಾವಿಧರ ಮಕ್ಕಳನ್ನೇ ದೊಡ್ಡ ಕಲಾವಿಧರನ್ನಾಗಿ ಬೆಳೆಸೋದು. ಇದು ತಪ್ಪು ಅನ್ನೋ ವಾದ ಚಿತ್ರರಂಗದಲ್ಲಿದೆ. ಈ ತಪ್ಪನ್ನ ಈಗ ಡಾಲಿ ಧನಂಜಯ್ ಕೂಡ ಮಾಡಿದ್ದಾರಂತೆ. ಡಾಲಿ ಟಗರು ಪಲ್ಯಾ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಟಗರು ಪಲ್ಯಾದಲ್ಲಿ ಹೀರೋಯಿನ್ ಯಾರು ಅಂತ ನಿಮ್ಗೆಲ್ಲಾ ಗೊತ್ತಲ್ವಾ.? ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ ಪ್ರೇಮ್. ಡಾಲಿ ಧನಂಜಯ್ ಪ್ರೇಮ್ ಮಗಳಿಗೆ ತನ್ನ ಸಿನಿಮಾದಲ್ಲಿ ಅವಕಾಶ ಕೊಟ್ಟು ಚಿತ್ರರಂಗದಲ್ಲಿ ನೆಪೋಟಿಸಂ ಮಾಡುತ್ತಿದ್ದಾರೆ ಅಂತ ಕೆಲ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಆದ್ರೆ ಇಲ್ಲಿ ಒಂದ್ ವಿಷಯ ನೆನಪಿಟ್ಟುಕೊಳ್ಳಬೇಕು. ನಟ ಲಲ್ವಿ ಸ್ಟಾರ್ ಪ್ರೇಮ್ ಸಿನಿಮಾ ಕುಟುಂಬದಿಂದ ಬಂದು ಸ್ಟಾರ್ ಹೀರೋ ಆದವರಲ್ಲ. ಡಾಲಿ ಧನಂಜಯ್ಗೂ ಯಾವ್ದೇ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲವೇ ಇಲ್ಲ. ತಮ್ಮ ಸ್ವಂತ ಟ್ಯಾಲೆಂಟ್ನಿಂದ ಬಣ್ಣದ ಜಗತ್ತಲ್ಲಿ ಬೆಳೆದವರು ಪ್ರೇಮ್ ಹಾಗು ಡಾಲಿ ಧನಂಜಯ್. ನಟ ಧನಂಜಯ್ ಮತ್ತು ಪ್ರೇಮ್ ಬಡ ಕುಟುಂಬದಿಂದ ಬಂದು ಬೆಳೆದವರು. ಹೀಗಾಗೆ ಡಾಲಿ ಎಲ್ಲೇ ಹೋದ್ರು ಬಡವರು ಮಕ್ಕಳು ಬೆಳಿಬೇಕು ಕಣ್ರಯ್ಯಾ ಅಂತ ಹೇಳ್ತಾನೆ ಇರ್ತಾರೆ. ಹೇಳೋದಷ್ಟೆ ಅಲ್ಲ ಬಡವರ ಮಕ್ಕಳನ್ನ ಬೆಳೆಸುತ್ತಾನು ಇದ್ದಾರೆ.
ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಟಗರು ಪಲ್ಯಾ ಸಿನಿಮಾದ ನಿರ್ದೇಶಕ ಉಮೇಶ್ ಕೆ. ಕೃಪ. ಯಾವ್ದೇ ಸಿನಿಮಾ ಹಿನ್ನೆಲೆ ಇಲ್ಲದೆ ಬಡ ಕುಟುಂಬದಿಂದ ಬಂದವರು ಉಮೇಶ್ ಕೆ. ಕೃಪಾ. ಅಷ್ಟೆ ಅಲ್ಲ ಟಗರು ಪಲ್ಯಾ ಹೀರೋ ನಾಗಭೂಷಣ್‌ಗೂ ಯಾವ್ದೇ ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲ. ಆದ್ರೂ ಡಾಲಿ ವಿರುದ್ಧ ನೆಪೋಟಿಸಂ ಅನ್ನೋ ಅಸ್ತ್ರ ಪ್ರಯೋಗ ಆಗುತ್ತಿದೆ. ಇತ್ತೀಚೆಗಷ್ಟೆ ಟಗರು ಪಲ್ಯಾ ಸಿನಿಮಾದ ಮಹೂರ್ತ ಆಗಿತ್ತು. ಆ ಮಹೂರ್ತಕ್ಕೆ ಬಂದಿದ್ದ ಲವ್ಲಿ ಸ್ಟಾರ್ ಪ್ರೇಮ್ ಒಂದು ಮಾತು ಹೇಳಿದ್ರು. ಡಾಲಿ ಧನಂಜಯ್ ಟಗರು ಪಲ್ಯಾ ಸಿನಿಮಾಗೆ ನಾಯಕಿ ನಿಮ್ಮ ಮಗಳಾದ್ರೆ ಚೆನ್ನಾಗಿರುತ್ತೆ ಅಂತ ಕೇಳಿದ್ರಂತೆ. ಆಗ ಪ್ರೇಮ್ ನನ್ನ ಮಗಳಿಗೆ ಟ್ಯಾಲೆಂಟ್ ಇದ್ರೆ ಮಾತ್ರ ಅವಕಾಶ ಕೊಡಿ ಅಂತ ಹೇಳಿದ್ರಂತೆ. ಕೊನೆಗೆ ಧನಂಜಯ್ ಟೀಂ ಅಮೃತಾ ಪ್ರೇಮ್ರ ಲುಕ್ ಟೆಸ್ಟ್ ಮಾಡಿ, ನಟನಾ ಕೌಶ್ಯಲ್ಯಾ ಇದೆಯಾ ಅಂತ ನೋಡಿಕೊಂಡು ಅವಕಾಶ ಕೊಟ್ಟಿದ್ದಾರೆ. ಸೋ ಡಾಲಿ ಮೇಲೆ ಇನ್ನೆಲ್ಲಿಂದ ಬಂತು ನೆಪೋಟಿಸಂ ಅನ್ನೋ ಆರೋಪಾ. ಆ ದೇವರಿಗೇ ಗೊತ್ತು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment