ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' (Badava Raskal) ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಬಡವ ರಾಸ್ಕಲ್ ಭರ್ಜರಿ ಟ್ರೇಲರ್ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆದಿದೆ.
ಬೆಂಗಳೂರು (ಡಿ. 20): ಡಾಲಿ ಧನಂಜಯ್ (Dolly Dhananjay) ನಟನೆಯ 'ಬಡವ ರಾಸ್ಕಲ್' (Badava Raskal) ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಬಡವ ರಾಸ್ಕಲ್ ಭರ್ಜರಿ ಟ್ರೇಲರ್ ಬಿಡುಗಡೆಯಾಗಿ ಜನ ಮೆಚ್ಚುಗೆ ಪಡೆದಿದೆ.ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿ, ಟ್ರೆಂಡಿಂಗ್‌ನಲ್ಲಿ ಸ್ಥಾನ ಪಡೆದಿತ್ತು. ಇದೀಗ ಚಿತ್ರದ ಟೈಟಲ್ ಟ್ರ್ಯಾಕ್ ಹೊರ ಬಂದಿದ್ದು, ಬಡವ ರಾಸ್ಕಲ್ ಸಿನಿಮಾದ ಮೇಲೆ ಮತ್ತೊಂದು ಲೆವೆಲ್‌ನ ನಿರೀಕ್ಷೆ ಹುಟ್ಟುಹಾಕಿದೆ.
'ಬಡವ ರಾಸ್ಕಲ್' ಚಿತ್ರಕ್ಕೆ ಶಂಕರ್ ಗುರು ಆಕ್ಷನ್ ಕಟ್ ಹೇಳಿದ್ದಾರೆ. ಡಾಲಿಗೆ ಜೋಡಿಯಾಗಿ ಬ್ಯೂಟಿಫುಲ್ ಹುಡ್ಗಿ ಅಮೃತ ಅಯ್ಯಂಗಾರ್ ಅಭಿನಯಿಸಿದ್ದಾರೆ. ಈಗ ಬಂದಿರೋ ಟೈಟಲ್ ಹಾಡಿಗೆ ಭರ್ಜರಿ ಚೇತನ್ ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಸಂಜೀತ್ ಹೆಗ್ಡೆ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ವಾಸುಕಿ ವೈಭವ್ ಟೈಟಲ್ ಟ್ರ್ಯಾಕ್ ಹಾಡಿಗೆ ಟಪ್ಪಾಂಗುಚ್ಚಿ ಟ್ಯೂನ್ ಹಾಕಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಧನಂಜಯ್ ಅವರ 'ಬಡವ ರಾಸ್ಕಲ್' ಚಿತ್ರವು ಇದೇ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.