ಭಾರತೀಯ ಚಿತ್ರರಂಗದಲ್ಲಿ ಕಬ್ಜಕ್ಕೆ ಕೌಂಟ್‌ಡೌನ್: ಉಪ್ಪಿಯ ಕಬ್ಜದ ಹಿಂದೆ ರಾಜಮೌಳಿ!

ಭಾರತೀಯ ಚಿತ್ರರಂಗದಲ್ಲಿ ಕಬ್ಜಕ್ಕೆ ಕೌಂಟ್‌ಡೌನ್: ಉಪ್ಪಿಯ ಕಬ್ಜದ ಹಿಂದೆ ರಾಜಮೌಳಿ!

Published : Feb 03, 2023, 11:54 AM IST

ಕಬ್ಜದ ಹಿಂದೆ ಭಾರತದ ಟಾಪ್ ಸ್ಟಾರ್ ಡೈರೆಕ್ಟರ್ ಜಕ್ಕಣ್ಣ ಅಂತಲೇ ಕರೆಸಿಕೊಳ್ಳೋ ಎಸ್.ಎಸ್ ರಾಜಮೌಳಿ ಕೂಡ ನಿಂತಿದ್ದಾರೆ. ಎಸ್ ಎಸ್ ರಾಜಮೌಳಿಕೆ ಕನ್ನಡ ಸಿನಿಮಾಗಳ ಮೇಲೆ ಸಿಕ್ಕಾಪಟ್ಟೆ ಒಲವು. ಅವರ ಸಿನಿಮಾಗಳಲ್ಲೂ ಕನ್ನಡದ ಹಳೆ ಸಿನಿಮಾಗಳ ಒಂದು ಚಾಯೆ ಇರೋದನ್ನ ನೀವೆಲ್ಲಾ ನೋಡಿದ್ದೀರಾ. 

ಕಬ್ಜ.. ಇದೊಂದು ಹೆಸರು ಈಗ ಸಿನಿ ರಂಗದಲ್ಲಿ ಹೊಸ ವೈಬ್ರೇಷನ್ ಕ್ರಿಕೆಟ್ ಮಾಡಿದೆ. ದೇಶದ ಉದ್ದಗಲಕ್ಕೆ ಯಾವ ಚಿತ್ರರಂಗಕ್ಕೆ ಹೋದ್ರು ಕಬ್ಜ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಕಾರಣ ನಿರ್ದೇಶಕ ಆರ್ ಚಂದ್ರು ಉಪೇಂದ್ರ, ಕಿಚ್ಚ ಸುದೀಪ್ ಸೇರಿಕೊಂಡು ಕೆಜಿಎಫ್ ಸಿನಿಮಾದಂತಹ ಅದ್ಭುತ ಕ್ವಾಲಿಟಿ ಸಿನಿಮಾ ಮಾಡಿರೋದು. ಮಾರ್ಚ್ 17ಕ್ಕೆ ವರ್ಲ್ಡ್ ವೈಡ್ ತೆರೆ ಮೇಲೆ ಬರೋ ಕಬ್ಜ ಸಿನಿಮಾದ ಮೇಲೆ ಕೌಂಟ್ ಡೌನ್ ಶುರುವಾಗಿದೆ. ಇದೀಗ ಈ ಕಬ್ಜದ ಹಿಂದೆ ಭಾರತದ ಟಾಪ್ ಸ್ಟಾರ್ ಡೈರೆಕ್ಟರ್ ಜಕ್ಕಣ್ಣ ಅಂತಲೇ ಕರೆಸಿಕೊಳ್ಳೋ ಎಸ್.ಎಸ್ ರಾಜಮೌಳಿ ಕೂಡ ನಿಂತಿದ್ದಾರೆ. ಎಸ್ ಎಸ್ ರಾಜಮೌಳಿಕೆ ಕನ್ನಡ ಸಿನಿಮಾಗಳ ಮೇಲೆ ಸಿಕ್ಕಾಪಟ್ಟೆ ಒಲವು. ಅವರ ಸಿನಿಮಾಗಳಲ್ಲೂ ಕನ್ನಡದ ಹಳೆ ಸಿನಿಮಾಗಳ ಒಂದು ಚಾಯೆ ಇರೋದನ್ನ ನೀವೆಲ್ಲಾ ನೋಡಿದ್ದೀರಾ. ಅದರಲ್ಲೂ ಕನ್ನಡದಿಂದ ಬರೋ ಯಾವ್ದೇ ಕ್ವಾಲಿಟಿ ಸಿನಿಮಾ ಆ ಚಿತ್ರತಂಡಕ್ಕೆ ರಾಜಮೌಳಿ ಬೆನ್ನು ತಟ್ಟಿದ್ದನ್ನ ನೋಡಿದ್ದೀರಾ. ಕೆಜಿಎಫ್ ಸಿನಿಮಾದ ಟ್ರೈಲರ್ ನೋಡಿ ಈ ಸಿನಿಮಾವನ್ನ ಪ್ಯಾನ್ ಇಂಡಿಯಾಗೆ ಹಂಚಿ ಅಂತ ಯಶ್ಗೆ ಹೇಳಿದ್ರು ಮೌಳಿ. 

ಫೆಬ್ರವರಿ ಫೆಸ್ಟಿವಲ್‌ಗೆ ಸಜ್ಜಾಗಿದೆ ಸ್ಯಾಂಡಲ್‌ವುಡ್: ವೇದ ಬಳಿಕ ಬಹುದೊಡ್ಡ ಸಂಭ್ರಮದಲ್ಲಿ ಚಿತ್ರರಂಗ!

ಈಗ ಕೆಜಿಎಫ್ ಸಿನಿಮಾವನ್ನ ಇನ್ಸ್ಪ್ರೈರ್ ಆಗಿ ತಗೊಂಡು 1970- 80ರ ದಶಕದ ಹೊಸ ಕಥೆ ಹೆಣೆದಿರೋ ನರ್ದೇಶಕ ಆರ್ ಚಂದ್ರು ಕಬ್ಜ ಸಿನಿಮಾಗೂ ಮೌಳಿ ಅಭಯ ಸಿಕ್ತಾ ಇದೆ. ಯಾಕಂದ್ರೆ ಕಬ್ಜ ಸಿನಿಮಾ ಮೊದಲ ಮಾಸ್ ಸಾಂಗ್ ಹೈದರಾಬಾದ್ನಲ್ಲಿ ರಿಲೀಸ್ ಆಗ್ತಿದ್ದು, ಈ ಕಾರ್ಯಕ್ರಮಕ್ಕೆ ಎಸ್ ಎಸ್ ರಾಜಮೌಳಿಗೆ ಆಹ್ವಾನ ಕೊಡಲಾಗಿದೆ. ಕಬ್ಜ ಸಿನಿಮಾದ ಪ್ಯಾನ್ ಇಂಡಿಯಾ ಪ್ರಮೋಷನ್ಗೆ ಪಕ್ಕಾ ಪ್ಲಾನ್ ಇರೋ ಬ್ಲ್ಯೂ ಪ್ರಿಂಟ್ ರೆಡಿ ಆಗಿದೆ. ಹೈದರಾಬಾದ್ ಬಳಿಕೆ, ಚನ್ನೈಮ ಮುಂಬೈಯನ್ನೂ ಹಾಡುಗಳ ಬಿಡುಗಡೆ ಆಗುತ್ತೆ. ಮಾರ್ಚ್ ಫಸ್ಟ್‌ನಲ್ಲಿ ಕಬ್ಜ ಟ್ರೇಲರ್ ರಿಲೀಸ್ ಆಗಲಿದೆ. ಕಬ್ಜ ಸಿನಿಮಾವನ್ನ 108 ಕೋಟಿ ಬಂಡವಾಳದಲ್ಲಿ ನಿರ್ಮಾಣ ಆಗಿದೆ ಅಂತ ಹೇಳಲಾಗ್ತಿದೆ. ಈ ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಭಾರಿ ಜೋರಾಗಿದ್ದು, ಅಮೇಜಾನ್ ಪ್ರೈಮ್ಗೆ ಭಾರಿ ಮೊತ್ತಕ್ಕೆ ಸಿನಿಮಾ ಮಾರಾಟ ಆಗಿದೆ. ಅಷ್ಟೆ ಅಲ್ಲ 9 ಭಾಷೆಯಲ್ಲಿ ಕಬ್ಜ ರಿಲೀಸ್ ಆಗುತ್ತಿದ್ದು ಭಾರತದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮಲೆಯಾಳಂ ವಿತರಣಾ ಹಕ್ಕು ಕೂಡ ಭಾರಿ ಮೊತ್ತಕ್ಕೆ ಮಾರಾಟ ಆಗಿದೆ. 

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
06:50ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
06:51BBK 12: ಎಲ್ಲಿಗೋ ವೈರಿಂಗ್​, ಇನ್ನೆಲ್ಲೋ ಲೈಟಿಂಗ್! ಗಿಲ್ಲಿ-ಕಾವ್ಯಾ ಸ್ನೇಹದಲ್ಲಿ ಅನಿರೀಕ್ಷಿತ ತಿರುವು!
21:30BBK 12: ಮಾಳು ಸ್ಟ್ರೈಟ್ ಹಿಟ್! ಉತ್ತರ ಕರ್ನಾಟಕ ಹೈದನ ಮೇಲೆ ಗರಂ ಆದ ಗಿಲ್ಲಿ ನಟ ಫ್ಯಾನ್ಸ್
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
04:21ಪ್ರಿಯತಮನ ಜೊತೆ ಹೊಸ ವರ್ಷ ಬರಮಾಡಿಕೊಂಡ ಮದುಮಗಳು Rashmika Mandanna; ಮಾರ್ಚ್‌ವೊಳಗಡೆ ಸಂಸಾರಿ!
Read more