
ದರ್ಶನ್ ಮತ್ತು ಸುಮಲತಾ ನಡುವೆ ಈಗ ಮೊದಲಿನ ಸಂಬಂಧ ಉಳಿದಿಲ್ಲ ಅನ್ನೋದು ಗೊತ್ತೇ ಇದೆ. ಮದರ್ ಇಂಡಿಯಾ ಮತ್ತು ಹಿರಿಮಗನ ನಡುವೆ ಈಗ ಮಾತಿಲ್ಲ ಕಥೆಯಿಲ್ಲ. ಆದ್ರೆ ಸುಮಲತಾ ಜೊತೆ ಸಂಬಂಧ ಕಳೆದುಕೊಂಡರೂ ದರ್ಶನ್ಗೆ ಅಂಬರೀಷ್ ಮೇಲಿನ ಗೌರವ ಕಮ್ಮಿಯಾಗಿಲ್ಲ. ಅಂಬಿ ಬರ್ತ್ಡೇಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ ದರ್ಶನ್.
ಯೆಸ್ ನಿನ್ನೆಯಷ್ಟೇ ಕನ್ನಡದ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟಿದ ಹಬ್ಬ. ಅಂಬರೀಷ್ ನಮ್ಮ ಜೊತೆಗೆ ಇದ್ದಿದ್ರೆ 73 ವಸಂತಗಳು ತುಂಬ್ತಾ ಇದ್ವು. ಅಂಬಿ ನಮ್ಮನ್ನಗಲಿ 7 ವರ್ಷಗಳು ಕಳೆದವು. ಆದ್ರೆ ಇವತ್ತಿಗೂ ರೆಬೆಲ್ ಸ್ಟಾರ್ ನಮ್ಮೊಂದಿಗೆ ಇಲ್ಲ ಅನ್ನೋದನ್ನ ನಂಬೋದಕ್ಕೆ ಆಗೋದಿಲ್ಲ. ಇವತ್ತು ಅಂಬರೀಷ್ ಕುಟುಂಬದವರು ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಸುಮಲತಾ ಅಂಬರೀಷ್ ಪತಿಯ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಅಂಬಿ ಎಂದೆಂದಿಗೂ ನಮ್ಮೊಡನೆ ಇರ್ತಾರೆ ಅಂದಿದ್ದಾರೆ.
ಇನ್ನೂ ಕನ್ನಡದ ಅನೇಕ ತಾರೆಯರು ಅಂಬಿಮಾಮನ ಬರ್ತ್ಡೇಗೆ ಸೋಷಿಯಲ್ ಮಿಡಿಯಾದಲ್ಲಿ ವಿಶ್ ಮಾಡಿದ್ದಾರೆ. ವಿಶೇಷ ಅಂದ್ರೆ ದರ್ಶನ್ ಕೂಡ ಅಂಬರೀಷ್ ಕುರುಕ್ಷೇತ್ರದಲ್ಲಿ ಮಾಡಿದ್ದ ಭೀಷ್ಮನ ಪಾತ್ರದ ಫೋಟೊ ಹಂಚಿಕೊಂಡು ವಿಶೇಷವಾಗಿ ವಿಶ್ ಮಾಡಿದ್ದಾರೆ. ತಂದೆ ಸಮಾನರಾದ ಅಂಬಿ ಅಪ್ಪಾಜಿ ಇಂದಿಗೂ ನಮ್ಮ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ. ಅವರ ಜೀವನ ಶೈಲಿ, ಕಲಿಸಿದ್ದ ಪಾಠಗಳು ಮತ್ತು ತೋರುತ್ತಿದ್ದ ಪ್ರೀತಿ ನನಗೆ ಸದಾ ದಾರಿದೀಪವಾಗಿದೆ. ಅಂತ ದರ್ಶನ್ ಪೋಸ್ಟ್ ಹಾಕಿದ್ದಾರೆ.
ದರ್ಶನ್ ಪಾಲಿಗೆ ಗಾಡ್ಫಾದರ್ ಅಂಬಿ..!
ಹೌದು ದರ್ಶನ್ ಪಾಲಿಗೆ ಅಂಬರೀಷ್ ಅಕ್ಷರಶಃ ಗಾಡ್ಫಾದರ್ನಂತಿದ್ದವರು. ದರ್ಶನ್ ಹೆಸರಾಂತ ಖಳನಟ ತೂಗುದೀಪ ಶ್ರೀನಿವಾಸ್ ಮಗನಾದ್ರೂ ಚಿತ್ರರಂಗದಲ್ಲಿ ಆರಂಭದಲ್ಲಿ ಪಟ್ಟ ಪಾಡುಗಳು ಅಷ್ಟಿಷ್ಟಲ್ಲ. ದರ್ಶನ್ ಚಿಕ್ಕವನಿದ್ದಾಗಲೇ ತಂದೆ ತೀರಿ ಹೋಗಿದ್ರು. ಮಗನನ್ನ ಚಿತ್ರರಂಗದಲ್ಲಿ ನೆಲೆ ನಿಲ್ಲಿಸಬೇಕು ಅಂತ ಮೀನಾ ತೂಗುದೀಪ ಕಷ್ಟ ಪಡ್ತಾ ಇದ್ರು. ಆಗ ಚಿತ್ರರಂಗದಲ್ಲಿ ಯಾರೊಬ್ರು ದರ್ಶನ್ ಬೆಂಬಲಕ್ಕೆ ನಿಲ್ಲಲಿಲ್ಲ. ಅಂಥಾ ಸಮಯದಲ್ಲಿ ದಾಸನ ಕೈ ಹಿಡಿದು ನಡೆಸಿದ್ದು ಒನ್ ಌಂಡ್ ಓನ್ಲಿ ರೆಬೆಲ್ ಸ್ಟಾರ್ ಅಂಬರೀಶ್.
ದರ್ಶನ್ ನಟನೆಯ ಮೊದಲ ಚಿತ್ರ ಮೆಜೆಸ್ಟಿಕ್ಗೆ ಕ್ಲಾಪ್ ಮಾಡಿದ್ದು ರೆಬೆಲ್ ಸ್ಟಾರ್ ಅಂಬರೀಶ್ ಌಂಡ್ ಸುಮಲತಾ. ದರ್ಶನ್ ಇನ್ನೂ ಬೆಳೆಯುವ ಹಂತದಲ್ಲಿದ್ದಾಗ, ತಮ್ಮ ಅಣ್ಣಾವ್ರು ಚಿತ್ರದಲ್ಲಿ ಮಗನ ಪಾತ್ರದಲ್ಲಿ ನಟಿಸೋ ಚಾನ್ಸ್ ಕೊಟ್ಟಿದ್ದು ಇದೇ ಅಂಬಿ.
ದರ್ಶನ್ ಚಿತ್ರರಂಗದಲ್ಲಿ ಸ್ಟಾರ್ ಆಗಿ ಬೆಳೆಯೋದಕ್ಕೆ ಅಂಬಿ ಮಾಮನ ಕೊಡುಗೆ ತುಂಬಾನೇ ಇತ್ತು. ದರ್ಶನ್ ಅಂಬರೀಷ ಅನ್ನೋ ಹೆಸರಲ್ಲೇ ಸಿನಿಮಾ ಮಾಡಿದ್ರು. ತಮ್ಮ ಆರೋಗ್ಯ ಸರಿಯಿಲ್ಲದ ದಿನಗಳಲ್ಲೂ ಬುಲ್ ಬುಲ್ ಸಿನಿಮಾದಲ್ಲಿ ದರ್ಶನ್ ಅಪ್ಪನ ಪಾತ್ರದಲ್ಲಿ ನಟಿಸಿ ದಾಸನ ಬೆನ್ನು ತಟ್ಟಿದ್ರು.
ಅಂಬರೀಶ್ರನ್ನ ಮಂಡ್ಯದ ಗಂಡು ಅಂತಾ ಕರೀತಾ ಇದ್ರು. ಮಂಡ್ಯದ ಭಾಗದಲ್ಲಿ ತಮ್ಮ ಉತ್ತರಾಧಿಕಾರಿಯಂತೆ ದರ್ಶನ್ನ ಬೆಳೆಸಿದ್ದು ಅಂಬರೀಷ್. ದರ್ಶನ್ ಕೂಡ ಅಂಬಿ ಇರುವರೆಗೂ, ಅಂಬಿ ಅಗಲಿದ ಮೇಲೂ ಆ ಮನೆಗೆ ಹಿರಿಮಗನ ರೀತಿಯೇ ಇದ್ರು. ಆದ್ರೆ ಈಗ ಸುಮಲತಾ ಜೊತೆಗೆ ದರ್ಶನ್ ಸಂಬಂಧ ಹಳಸಿದೆ. ಆದ್ರೆ ಮದರ್ ಇಂಡಿಯಾ ಮುನಿಸು ಇದ್ದರೂ ಅಪ್ಪಾಜಿನಾ ಮಾತ್ರ ದರ್ಶನ್ ಮರೆತಿಲ್ಲ..! ಹುಟ್ಟುಹಬ್ಬದ ದಿನ ಅಂಬರೀಶ್ಗೆ ವಿಶೇಷವಾಗಿ ಗೌರವ ಅರ್ಪಿಸಿದ್ದಾರೆ. ನೀವು ತೋರಿದ ಹಾದಿಯಲ್ಲೇ ನಡೀತೀನಿ ಅಂದಿದ್ದಾರೆ..!